Monday, December 23, 2024

ರಂಗೇರಿದ ‘ರಾಣ’ ಟ್ರೈಲರ್.. ಪಡ್ಡೆಹುಲಿ ಈಸ್ ರಾಕಿಂಗ್

ಪಡ್ಡೆಹುಲಿ ಶ್ರೇಯಸ್ ಇದೀಗ ಎರಡನೇ ಸಿನಿಮಾದಿಂದ ಮತ್ತೆ ಔಟ್ ಅಂಡ್ ಔಟ್ ಮಾಸ್ ಹೀರೋ ಆಗಿ ಮ್ಯಾಜಿಕ್ ಮಾಡೋಕೆ ಬರ್ತಿದ್ದಾರೆ. ದೀಪಾವಳಿ ಹಬ್ಬಕ್ಕೆ ಆ್ಯಕ್ಷನ್ ಟ್ರೈಲರ್ ಲಾಂಚ್ ಮಾಡಿರೋ ಶ್ರೇಯಸ್, ತಮ್ಮ ಪೊಲೀಸ್ ಪವರ್ ಹಾಗೂ ಮಾಸ್ ಖದರ್​ನ ಅರ್ಥೈಸೋ ಕಾರ್ಯ ಮಾಡಿದ್ದಾರೆ. ಮತ್ತೆ ತಡ ಯಾಕೆ ಬನ್ನಿ ಟ್ರೈಲರ್ ನೀವೇ ಓದಿ.

  • ಇದು ಸೂರ್ಯನೆದುರು ತೊಡೆ ತಟ್ಟಿದ ರಾಣ ಖಾಕಿ ಖದರ್

ಅನ್ನ ಬೆಂದಿದೆ ಅಥ್ವಾ ಇಲ್ಲ ಅನ್ನೋದನ್ನ ಒಂದೇ ಒಂದು ಅಗಳಿನಿಂದ ಡಿಸೈಡ್ ಮಾಡಬಹುದು. ಅದೇ ರೀತಿ ನಾಯಕನಟನಾಗೋಕೆ ಅಂತ್ಲೇ ಬಂದಂತಹ ಹಿರಿಯ ನಿರ್ಮಾಪಕ ಕೆ ಮಂಜು ಅವ್ರ ಪುತ್ರ ಶ್ರೇಯಸ್ ನಟನಾ ಗಮ್ಮತ್ತು ಎಂಥದ್ದು ಅನ್ನೋದಕ್ಕೆ ಪಡ್ಡೆಹುಲಿ ಸಾಕ್ಷಿ ಆಗಿದೆ. ಹೌದು. ಅದು ಅವ್ರ ಚೊಚ್ಚಲ ಯತ್ನ. ಮೊದಲ ಪ್ರಯತ್ನದಲ್ಲೇ ಭೇಷ್ ಅನಿಸಿಕೊಂಡ ಶ್ರೇಯಸ್ ಇದೀಗ ಎರಡನೇ ಸಿನಿಮಾದಲ್ಲಿ ರಾಣನಾಗಿ ಅಬ್ಬರಿಸೋಕೆ ಹೊಂಚು ಹಾಕ್ತಿದ್ದಾನೆ.

ಟೀಸರ್ ಹಾಗೂ ಸಾಂಗ್ಸ್​ನಿಂದ ರಾಣ ಪಕ್ಕಾ ಕಮರ್ಷಿಯಲ್ ಎಂಟರ್​ಟೈನರ್ ಅನ್ನೋದನ್ನ ಮನದಟ್ಟು ಮಾಡಿದ್ದ ಚಿತ್ರತಂಡ, ಇದೀಗ ಮಾಸ್ ಟ್ರೈಲರ್​ನಿಂದ ಆ್ಯಕ್ಷನ್ ಪ್ರಿಯರ ನಾಡಿಮಿಡಿತ ಹೆಚ್ಚಿಸೋ ಕಾರ್ಯ ಮಾಡಿದೆ. ಹೌದು. ಕಲಾವಿದರ ಸಂಘದಲ್ಲಿ ಹಬ್ಬದ ವಿಶೇಷ ಟ್ರೈಲರ್ ಲಾಂಚ್ ಮಾಡಿದ ಚಿತ್ರತಂಡ, ಮತ್ತೊಮ್ಮೆ ಶ್ರೇಯಸ್ ಹಾರ್ಡ್​ವರ್ಕ್​ ಹಾಗೂ ಡೆಡಿಕೇಷನ್​ನ ನೆನಪಿಸಿದೆ.

ಶ್ರೇಯಸ್ ಜೊತೆ ರೀಷ್ಮಾ ನಾಣಯ್ಯ ನಾಯಕನಟಿಯಾಗಿ ಕಮಾಲ್ ಮಾಡಲಿದ್ದು, ನಂದಕಿಶೋರ್ ಆ್ಯಕ್ಷನ್ ಕಟ್​ನಲ್ಲಿ ಸಿನಿಮಾ ತಯಾರಾಗಿದೆ. ಗುಜ್ಜಾಲ್ ಪುರುಷೋತ್ತಮ್ ಅವ್ರು ನಿರ್ಮಿಸಿರೋ ಈ ಸಿನಿಮಾ ಇದೇ ನವೆಂಬರ್ 11ಕ್ಕೆ ತೆರೆಗಪ್ಪಳಿಸಲಿದೆ. ಔಟ್ ಅಂಡ್ ಔಟ್ ಮಾಸ್ ಟ್ರೈಲರ್​ನಲ್ಲಿ ಶ್ರೇಯಸ್ ವೆರೈಟಿ ಆಫ್ ಆ್ಯಕ್ಷನ್ ಬ್ಲಾಕ್ಸ್​ನಲ್ಲಿ ಅಬ್ಬರಿಸಲಿದ್ದಾರೆ. ಖಾಕಿ ಖದರ್ ತೋರಲಿರೋ ಶ್ರೇಯಸ್ ರೌಡಿಗಳಿಗೆ ಹೆಡೆಮುರಿ ಕಟ್ಟಲಿದ್ದಾರೆ ಅನ್ನೋದು ಪಕ್ಕಾ ಆಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES