Monday, December 23, 2024

ಥಿಯೇಟರ್ ಅಂಗಳಕ್ಕೆ ‘ಕಂಬ್ಳಿಹುಳ’ ಬಿಡೋಕೆ ದಿನಗಣನೆ

ಕಂಬ್ಳಿಹುಳ ಅಂದಾಕ್ಷಣ ರೇಷ್ಮೆ ಸೊಪ್ಪು ನೆನಪಾಗ್ತಿತ್ತು. ಇದೀಗ ಸಿನಿಮಾ ನೆನಪಾಗಬೇಕು. ಕಾರಣ ಆ ಟೈಟಲ್​ನಲ್ಲೊಂದು ಚಿತ್ರ ಬರ್ತಿದೆ. ಪಕ್ಕಾ ಲವ್ ಸ್ಟೋರಿ ಇದಾಗಿದ್ದು, ಸಾಂಗ್ಸ್ ಜೊತೆ ಟ್ರೈಲರ್ ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಮಾಡಿದೆ. ಅದನ್ನ ನಾವು ಹೇಳೋದಕ್ಕಿಂತ ನೀವೇ ನೋಡಿಬಿಡಿ.

ಗೃಹ ಸಚಿವರಿಂದ ಟ್ರೈಲರ್ ಲಾಂಚ್.. ನ- 4ಕ್ಕೆ ರಿಲೀಸ್..!

ಸಿನಿಮಾರಂಗ ಬಹಳ ಬೇಗ ಎಲ್ಲರನ್ನು ಆಕರ್ಷಿಸುತ್ತೆ. ಕೆಲವರಿಗೆ ನಟರಾಗುವ ಆಸೆ, ಇನ್ನೂ ಕೆಲವರಿಗೆ ನಿರ್ದೇಶಕ ಅಥ್ವಾ ಕಲಾವಿದರಾಗೋ ಆಸೆ. ಒಟ್ನಲ್ಲಿ ಬಣ್ಣದ ಲೋಕದಲ್ಲಿ ಏನಾದ್ರು ಸಾಧಿಸೋ ಕನಸು. ಆ ಕನಸಿರೋ ಸಿನಿಮಾ ಪ್ರೀತಿಯುಳ್ಳ ಒಂದಿಷ್ಟು ಸಮಾನ ಮನಸ್ಕರು ಸೇರಿ ಮಾಡಿರೋ ನವಿರಾದ ಪ್ರೇಮಕಥೆಯೇ ಈ ‘ಕಂಬ್ಳಿಹುಳ. ಟೈಟಲ್ ಮೂಲಕವೇ ಚಂದನವನ ಹಾಗೂ ಸಿನಿರಸಿಕರ ಮನಸ್ಸಲ್ಲಿ ಒಂದಿಷ್ಟು ಕುತೂಹಲ ಮೂಡಿಸಿದೆ. ಚೆಂದದ ಹಾಡಿನ ಮೂಲಕ ಎಲ್ಲರ ಗಮನ ತನ್ನತ್ತ ಸೆಳೆದ ಚಿತ್ರತಂಡವೀಗ ಟ್ರೈಲರ್ ಬಿಟ್ಟಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಯುವ ಪ್ರತಿಭೆಗಳಿಗೆ ಬೆನ್ನುತಟ್ಟಿ, ಚಿತ್ರದ ಭರವಸೆಯುಳ್ಳ ಟ್ರೈಲರ್ ಲಾಂಚ್ ಮಾಡಿ, ಶುಭ ಹಾರೈಸಿದ್ದಾರೆ. ಕಾರ್ಯಕ್ರಮದಲ್ಲಿ ನಟ ಪ್ರವೀಣ್ ತೇಜ್, ನಿರ್ದೇಶಕ ಸತ್ಯ ಪ್ರಕಾಶ್ ಭಾಗಿಯಾಗಿ ಚಿತ್ರತಂಡಕ್ಕೆ ಪ್ರೋತ್ಸಾಹ ನೀಡಿದ್ರು.

ಕಿರುಚಿತ್ರಗಳನ್ನ ನಿರ್ದೇಶಿಸಿದ ಅನುಭವವಿರೋ ನಿರ್ದೇಶಕ ನವನ್ ಶ್ರೀನಿವಾಸ್​ರ ಕನಸಿದು. ಮಲೆನಾಡು ಭಾಗದಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಶೃಂಗೇರಿ, ಸಕಲೇಶಪುರ, ತೀರ್ಥಹಳ್ಳಿ, ಸುತ್ತಮುತ್ತ ‘ಕಂಬ್ಳಿಹುಳ ಚಿತ್ರೀಕರಣ ನಡೆಸಲಾಗಿದೆ. ಎಮೋಷನಲ್ ಜರ್ನಿ ಸಿನಿಮಾ ಇದಾಗಿದ್ದು ರಂಗಭೂಮಿ ಕಲಾವಿದ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.

ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್​ನಡಿ ನಿರ್ಮಾಣವಾಗಿರೋ ಈ ಚಿತ್ರ, ನೈಜ ಘಟನೆಯಾಧಾರಿತ ಸಿನಿಮಾ ಆಗಿದೆ. ವಿಜಯ್, ಸವೀನ್, ಪುನೀತ್ ಹಾಗೂ ಗುರು ಚಿತ್ರಕ್ಕೆ ಬಂಡವಾಳ ಹೂಡಿದ್ದು, ನವೆಂಬರ್ 4ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES