Thursday, November 21, 2024

ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ದಳಪತಿಗಳ ಮಾಸ್ಟರ್ ಪ್ಲಾನ್.!

ಬೆಂಗಳೂರು: ನವೆಂಬರ್ 1 ರಿಂದ ಜೆಡಿಎಸ್‌ನ ಮಹತ್ವದ ಪಂಚರತ್ನ ರಥಯಾತ್ರೆಗೆ ಈಗಾಗಲೇ ಸಕಲ ಸಿದ್ದತೆಗಳು ನಡೆದಿದೆ. ಮೊದಲ ಹಂತದ ಪಂಚರತ್ನ ಜನಸಂಪರ್ಕ ರಥಯಾತ್ರೆ ದಳಪತಿಗಳು ಮಾಡಲಿದ್ದಾರೆ.

ಮಾಜಿ ಸಿಎಂ‌ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುವ ಪಂಚರತ್ನ ರಥಯಾತ್ರೆಯಲ್ಲಿ, ಉದ್ಯೋಗ, ಶಿಕ್ಷಣ, ನೀರಾವರಿ, ಕೃಷಿ, ಆರೋಗ್ಯ ಕುರಿತಂತೆ ರೂಪಿಸಿರುವ ಪಂಚರತ್ನ ಯೋಜನೆಯಿದಾಗಿದ್ದು, ನವೆಂಬರ್ 1ರಿಂದ ಕೋಲಾರದ ಮುಳುಬಾಗಿಲಿನಿಂದ ಪ್ರಾರಂಭವಾಗಲಿರುವ ಪಂಚರತ್ನ ರಥಯಾತ್ರೆ ನವೆಂಬರ್ 1 ರಿಂದ 5 ರವರೆಗೆ ಕೋಲಾರ ಜಿಲ್ಲೆಯಲ್ಲಿ ಈ ಯಾತ್ರೆ ಹಮ್ಮಿಕ್ಕೊಳ್ಳಲಾಗಿದೆ.

ನ. 6 ರಿಂದ 10 ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆ, ನ. 11 ರಿಂದ 13 ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ನ. 14 ರಿಂದ 23 ರವರೆಗೆ ತುಮಕೂರು ಜಿಲ್ಲೆ, ನ. 24 ರಿಂದ 30 ರವರೆಗೆ ಹಾಸನ ಜಿಲ್ಲೆ, ಡಿಸೆಂಬರ್ 1 ರಂದು ಕುಣಿಗಲ್ ವಿಧಾನಸಭಾ ಕ್ಷೇತ್ರ, ಡಿಸೆಂಬರ್ 2 ರಿಂದ 5 ರವರೆಗೆ ರಾಮನಗರ ಜಿಲ್ಲೆಯಲ್ಲಿ ಸಂಚಾರವಾಗಲಿದ್ದು, ಒಟ್ಟು 35 ದಿನಗಳ ಕಾಲ ಪಂಚರತ್ನ ನಡೆಯುತ್ತದೆ.

ಮುಂಬರುವ 2023 ವಿಧಾನಸಭಾ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್​, ಬಿಜೆಪಿಗೆ ಟಕ್ಕರ್ ನೀಡಿ, ಅಧಿಕಾರದ ಗದ್ದುಗೆ ಹಿಡಿಯೋಕೆ ದಳಪತಿಗಳ‌ ಮಾಸ್ಟರ್ ಪ್ಲ್ಯಾನ್​ ಮಾಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

RELATED ARTICLES

Related Articles

TRENDING ARTICLES