Monday, December 23, 2024

24 ಗಂಟೆಗಳಲ್ಲಿ ‘ಗಂಧದ ಗುಡಿ’ ಪ್ರೀಮಿಯರ್ ಶೋ ಬುಕ್ಕಿಂಗ್ಸ್ ಸೋಲ್ಡ್ ಔಟ್

ಬೆಂಗಳೂರು: ದಿವಂಗತ ನಟ ಪುನೀತ್​ ರಾಜ್​ಕುಮಾರ್​ ನಟನೆಯ ಕೊನೆಯ ಸಿನಿಮಾ ‘ಗಂಧದ ಗುಡಿ’ಯ ಪ್ರೀಮಿಯರ್ ಶೋ ಬುಕ್ಕಿಂಗ್ಸ್ ಹೌಸ್​ಫುಲ್​ ಆಗಿವೆ ಎಂದು ಪಿಆರ್​ಕೆ ನಿರ್ಮಾಣ ಸಂಸ್ಥೆ ತಿಳಿಸಿದೆ.

ಇತ್ತೀಚಿಗೆ ಗಂಧದ ಗುಡಿ ಸಿನಿಮಾ ಪ್ರೀ ರಿಲೀಸ್​ ಇವೆಂಟ್​ ಅದ್ಧೂರಿಯಾಗಿ ಬೆಂಗಳೂರಿನ ಅರಮನೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು. ಇದ್ರಲ್ಲಿ ಹಲವು ಭಾಷೆಯ ದಿಗ್ಗಜ ನಟ-ನಟಿಯರು ಭಾಗಿಯಾಗಿ ಪುನೀತ್​​ರನ್ನ ಸ್ಮರಿಸಿಕೊಂಡಿದ್ದರು.

ಗಂಧದ ಗುಡಿ ಬರುವ ಅಕ್ಟೋಬರ್​ 28 ರಂದು ಬೆಳ್ಳಿ ಪರದೆಯ ಮೇಲೆ ತೆರೆಗೆ ಅಪ್ಪಳಿಸಲಿದೆ. ಹೀಗಾಗಿ ಗಂಧದ ಗುಡಿ ಚಿತ್ರ ತಂಡ ಅ.24 ರಂದು ಪ್ರೀಮಿಯರ್ ಶೋ ಬುಕ್ಕಿಂಗ್ಸ್ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬುಕ್ ಮಾಡಿಕೊಳ್ಳಿ ಎಂದು ಹೇಳಿತ್ತು. ಆರಂಭವಾದ ಕೇವಲ ಒಂದು ದಿನದಲ್ಲೇ ರಾಜ್ಯದಲ್ಲಿ ಪ್ರೀಮಿಯರ್ ಶೋ ಬುಕ್ಕಿಂಗ್ಸ್ ಸೋಲ್ಡ್​ ಔಟ್​ ಆಗಿದೆ.

ಈ ಬಗ್ಗೆ ಟ್ವೀಟ್ ಮಾಡಿದ​ ಗಂಧದ ಗುಡಿ ಸಿನಿಮಾ ನಿರ್ಮಾಣ ಸಂಸ್ಥೆಯ ಪಿಆರ್​​ಕೆ ಸ್ಟೂಡಿಯೋ, ಅಪ್ಪು ಅವರ ಕನಸಿನ ಗಂಧದ ಗುಡಿ ಸಿನಿಮಾದ ಪ್ರೀಮಿಯರ್ ಶೋ ಬುಕ್ಕಿಂಗ್​ಗಳು ಕರ್ನಾಟಕದಾದ್ಯಂತ ಸೋಲ್ಡ್ ಔಟ್ ಆಗಿದೆ ಎಂದು ಸ್ಪಷ್ಟನೆ ನೀಡಿದೆ.

RELATED ARTICLES

Related Articles

TRENDING ARTICLES