Wednesday, January 22, 2025

ಚುನಾವಣೆಯ ಹೊತ್ತಿನಲ್ಲಿ ಸಿಎಂ ಸಂಪುಟ ಸರ್ಕಸ್

ಬೆಂಗಳೂರು : ಸಿಎಂ ಬೊಮ್ಮಾಯಿ ಹಲವು ಬಾರಿ ದೆಹಲಿ‌ಗೆ ಭೇಟಿ ಕೊಟ್ರೂ ಸಂಪುಟ ವಿಸ್ತರಣೆಗೆ ಮಾತ್ರ ಗ್ರೀನ್ ಸಿಗ್ನಲ್ ‌ಸಿಕ್ಕಿರಲಿಲ್ಲ. 6 ಸಚಿವ ಸ್ಥಾನ ಖಾಲಿಯಾಗಿ ಸಿಎಂ ಬಳಿಯೇ ಖಾತೆಗಳಿದ್ರೂ ಸಂಪುಟ ಸಂಕಟಕ್ಕೆ ಪರಿಹಾರ ಸಿಕ್ಕಿಲ್ಲ. ಆದ್ರೆ, ಇದೀಗ ಸಂಪುಟ ‌ವಿಸ್ತರಣೆಗೆ ಹೈಕಮಾಂಡ್ ನಾಯಕರೇ ಮನಸ್ಸು ಮಾಡಿದ್ದು, ಶೀಘ್ರವಾಗಿ ಸಂಪುಟ ವಿಸ್ತರಣೆಯ ಪಟ್ಟಿಯೊಂದಿಗೆ ದೆಹಲಿಗೆ ಬರಲು ಬುಲಾವ್ ಬಂದಿದೆ. ಹೀಗಾಗಿ, ಖಾಲಿ ಇರುವ 6 ಸಚಿವ ಸ್ಥಾನ ಬರ್ತಿಯಾಗೋದು ಪಕ್ಕಾ ಎನ್ನಲಾಗುತ್ತಿದೆ. ಅಲ್ಲದೇ ಎಲ್ಲಾ ಅಂದುಕೊಂಡಂತೆ ಆದ್ರೆ ನವೆಂಬರ್ ಮೊದಲ ವಾರದಲ್ಲಿಯೇ ನೂತನ ಸಂಪುಟ ಸದಸ್ಯರ ಪ್ರಮಾಣವಚನ ಎನ್ನಲಾಗಿದೆ

ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಫೈನಲ್ ಪಟ್ಟಿಯೊಂದಿಗೆ ಶೀಘ್ರವೇ ಸಿಎಂ ದೆಹಲಿಗೆ ತೆರಳಲಿದ್ದಾರೆ.. ಇತ್ತ, ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಸಚಿವಾಕಾಂಕ್ಷಿಗಳ ಲಾಬಿ ಕೂಡ ಜೋರಾಗಿದೆ.
ಸಂಪುಟ ಸೇರಲು ಆಕಾಂಕ್ಷಿಗಳು ಜಾತಿ‌ ಕಾರ್ಡ್ ಪ್ಲೇ ಮಾಡ್ತಿದ್ದಾರೆ.‌ ಇದ್ರ ಜೊತೆಗೆ, ಪ್ರದೇಶದ ಆಧಾರದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ‌ಪ್ಲ್ಯಾನ್ ಮಾಡಿಕೊಂಡಿದೆ.

ಯಾರಿಗಿದೆ ಸಚಿವ ಭಾಗ್ಯ..? 

ಕೆ.ಎಸ್.ಈಶ್ವರಪ್ಪ – ಕುರುಬ ಕೋಟಾ – ಶಿವಮೊಗ್ಗ

ರಮೇಶ್ ಜಾರಕಿಹೊಳಿ- ವಲಸಿಗ ಹಾಗೂ ಎಸ್‌ಟಿ ಕೋಟಾ- ಬೆಳಗಾವಿ

ಸಿ.ಪಿ.ಯೋಗೇಶ್ವರ್- ಹಳೆ ಮೈಸೂರು, ಒಕ್ಕಲಿಗ ಕೋಟಾ

ಪೂರ್ಣಿಮಾ ಶ್ರೀನಿವಾಸ್ – ಮಹಿಳೆ, ಯಾದವ ಕೋಟಾ

ರಾಜುಗೌಡ -ಕಲ್ಯಾಣ ಕರ್ನಾಟಕ, ಎಸ್‌ಟಿ ಕೋಟಾ

ರೇಣುಕಾಚಾರ್ಯ – ಮಧ್ಯಕರ್ನಾಟಕ, ಲಿಂಗಾಯತ ಕೋಟಾ

ಒಟ್ಟಿನಲ್ಲಿ ಈ ಬಾರಿ ಸಚಿವ ಸಂಪುಟ ವಿಸ್ತರಣೆಯಾಗೋದು ಪಕ್ಕಾ ಎನ್ನಲಾಗ್ತಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ, ನವೆಂಬರ್ ಮೊದಲ ವಾರದಲ್ಲಿ ಶಾಸಕರಿಗೆ ಗುಡ್‌ನ್ಯೂಸ್ ಸಿಗಲಿದೆ. ಯಾರಿಗೆಲ್ಲಾ ಸಚಿವ ಭಾಗ್ಯ ಸಿಗಲಿದೆ ಅನ್ನೋದನ್ನ ಕಾದುನೋಡಬೇಕಿದೆ.

ರೂಪೇಶ್‌ ಬೈಂದೂರು ಪವರ್ ಟಿವಿ

RELATED ARTICLES

Related Articles

TRENDING ARTICLES