ಬೆಂಗಳೂರು : ಹೂವು ಖರೀದಿಗೆ ಮುಗಿಬಿದ್ದಿರುವ ಗ್ರಾಹಕರು. ಬಾಳೆಕಂದು, ಬೂದುಕುಂಬಳಕಾಯಿ ಅಂಗಡಿಗಳ ಮುಂದೆಯೂ ಜನರ ದಂಡು. ಹಣ್ಣಿನ ಅಂಗಡಿಗಳ ಮುಂದೆಯೂ ಜನರ ಗುಂಪೇ ನಿಂತಿತ್ತು. ಕಣ್ಣು ಹಾಯಿಸಿದಷ್ಟು ಜನವೋ ಜನ. ಇದು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೆ.ಆರ್.ಮಾರುಕಟ್ಟೆಯಲ್ಲಿ ಕಂಡು ಬಂದ ಜನಜಾತ್ರೆಯ ದೃಶ್ಯಗಳು.
ಹೌದು. ಕಳೆದ ಎರಡು ವರ್ಷದಿಂದ ಕೊವಿಡ್ನಿಂದ ಹಬ್ಬ ಇದ್ರೂ ಹೊರಗೆ ಬರುವ ಆಗಿರಲಿಲ್ಲ. ಹಬ್ಬ ಬಂದರೂ ಸಂಭ್ರಮ, ಸಡಗರ ಇರಲಿಲ್ಲ. ಎರಡು ವರ್ಷದಿಂದ ಕೊರೋನಾ ಅನ್ನೋ ಕ್ರೂರಿ ಹಬ್ಬವನ್ನ ಕಸಿದಿತ್ತು. ಆದ್ರೆ, ಈ ಬಾರಿ ಎಲ್ಲವೂ ಮಾಯವಾಗುತ್ತಿದ್ದಂತೆ ಹಬ್ಬದ ಸಂಭ್ರಮ ಜೋರಾಗಿ ಇತ್ತು. ದೀಪಾವಳಿ ಹಬ್ಬಕ್ಕಾಗಿ ಹೂವು- ಹಣ್ಣು, ಬಾಳೆಕಂದು, ಬೂದುಕುಂಬಳಕಾಯಿ ಖರೀದಿಗೆ ಜನ ಮುಗಿಬಿದ್ದರು. ಆದ್ರಲ್ಲೂ ಕೆ.ಆರ್.ಮಾರುಕಟ್ಟೆ ಬೆಳಗ್ಗೆಯಿಂದಲೇ ಜನರಿಂದ ಗಿಜಿ ಗಿಜಿ ಅಂತಿತ್ತು. ಹೂ, ಬಾಳೆಕಂದು, ಬೂದುಕುಂಬಳಕಾಯಿ ದರ ಹೆಚ್ಚಿದ್ರೂ ಖುಷಿ ಮುಂದೆ ಅದು ಎದ್ದು ಕಂಡಿಲ್ಲ. ಬೆಲೆ ಏರಿಕೆ ನಡುವೆಯೂ ಹಬ್ಬ ಬಿಡೋಕೆ ಆಗೊಲ್ಲ ಖರೀದಿ ಮಾಡಿ ಹಬ್ಬ ಆಚರಿಸಿದ್ದಾರೆ.
ಇನ್ನೂ ನಿನ್ನೆ ಇದ್ದ ದರಕ್ಕೂ ಇಂದಿನ ದರಕ್ಕೂ ಬಾರೀ ವ್ಯತ್ಯಾಸ ಕಂಡು ಬಂದಿತ್ತು. ಕೆಲವೊಂದಷ್ಟು ಜನ ಕಡಿಮೆ ಪ್ರಮಾಣದಲ್ಲಿ ಹಬ್ಬದ ಸಾಮಾಗ್ರಿಗಳನ್ನು ಖರೀದಿ ಮಾಡ್ಕೊಂಡು ಹೋದ್ರೆ.. ಮತ್ತೆ ಕೆಲವರು ಹಬ್ಬ ವರ್ಷಕ್ಕೆ ಬರೋದು ಒಂದೇ ದಿನ. ವಿಧಿಯಿಲ್ಲದೆ ವ್ಯಾಪಾರದಲ್ಲಿ ತೊಡಗಿಕೊಂಡಿದ್ದರು. ಇನ್ನೂ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಇತ್ತು. ಕಳೆದ ಎರಡು ವರ್ಷದಿಂದ ಕೊರೋನಾ ಕೊರೋನಾ ಅಂತ ವ್ಯಾಪಾರ ಇಲ್ಲದೆ ಸಂಕಷ್ಟದಲ್ಲಿ ಇದ್ದೇವು. ಆದರೆ ಈ ಬಾರಿ ಭರ್ಜರಿ ವ್ಯಾಪಾರ ಆಗಿದೆ ಎಂದು ಸಂತಸ ಪಟ್ಟರು.
ಒಟ್ಟಿನಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಮಾರುಕಟ್ಟೆಗಳಲ್ಲಿ ಭರ್ಜರಿ ವ್ಯಾಪಾರ ನಡೀತು. ಅದ್ದೂರಿ ಆಚರಣೆ ಮೂಲಕ ಜನ ಸಂಭ್ರಮಿಸಿ ಖುಷಿ ಪಟ್ಟಿದ್ದಾರೆ.
ಕೃಷ್ಣಮೂರ್ತಿ, ಪವರ್ ಟಿವಿ, ಬೆಂಗಳೂರು