ವಿಜಯಪುರ; ಮದರಸಾಗಳ ಸರ್ವೇ ಮಾಡುವ ವಿಚಾರವಾಗಿ ಸರ್ಕಾರದಿಂದ ಮದರಸಾ ಸರ್ವೇಗೆ ನನ್ನ ವಿರೋಧವಿದೆ ಎಂದು ಹೈದರಾಬಾದ ಲೋಕಸಭಾ ಕ್ಷೇತ್ರದಿಂದ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಎಐಎಂಐಎಂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಿದ ವೇಳೆ ಮಾತನಾಡಿದ ಎಐಎಂಐಎಂ ರಾಷ್ಟ್ರಾಧ್ಯಕ್ಷ ಅಸಾದುದ್ದೀನ್ ಓವೈಸಿ, ಮದರಸಾ ಸರ್ವೇಗೆ ವಿರೋಧ ಹಿಂದೆಯೂ ಇತ್ತು. ಇಂದು ಇದೆ, ಮುಂದೆಯೂ ಇರುತ್ತದೆ ಎಂದರು.
ಮದರಸಾ ಸರ್ವೇ ಮಾಡೋದಾದ್ರೆ ಆರ್ಎಸ್ಎಸ್ನ ಶಿಶುಮಂದಿರ, ಮಿಷನರಿ ಶಾಲೆ, ಸರ್ಕಾರಿ ಶಾಲೆಗಳ ಸರ್ವೇ ನಡೆಯಲಿ. ಎಷ್ಟು ಹೆಣ್ಣು ಮಕ್ಕಳ ಶಾಲೆಯಲ್ಲಿ ಶೌಚಾಲಯ ಇಲ್ಲ ಎನ್ನುವ ಬಗ್ಗೆ ಸರ್ವೇಯಾಗಲಿ ಎಂದು ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ್ ವಿರುದ್ಧ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದರು.
ಮುಸ್ಲಿಂಮರು ಪಾಕಿಸ್ತಾನಕ್ಕೆ ಹೋಗಲಿ ಎಂದು ಪದೇ ಪದೇ ಹೇಳುವ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಓವೈಸಿ, ನಾವಂತೂ ಪಾಕಿಸ್ತಾನದ ಹೆಸರನ್ನೇ ತಗೆಯಲ್ಲ. ಅವರೇ ಪಾಕಿಸ್ತಾನದ ಹೆಸರು ಹೆಚ್ಚು ತೆಗೆಯುತ್ತಾರೆ. ಯತ್ನಾಳ್ ಗೆ ಪಾಕಿಸ್ತಾನದ ಬಗ್ಗೆ ಪ್ರೀತಿ ಇದೆ ಎಂದ ಯತ್ನಾಳ್ ಹೆಸರು ಹೇಳದೇ ಪರೋಕ್ಷವಾಗಿ ಹರಿಹಾಯ್ದರು.
ಯತ್ನಾಳ್ ಅವರೇ ಪದೇ ಪದೇ ಪಾಕಿಸ್ತಾನ ಹೆಸರು ಉಲ್ಲೇಖ ಮಾಡ್ತಾರೆ. ಪಾಕಿಸ್ತಾನ ಮೇಲೆ ಪ್ರೀತಿ ಯಾಕೇ ಇದೇ ಅವರಿಗೆ ಗೊತ್ತು. ನನಗೆ ಗೊತ್ತು ಇಲ್ಲ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿ ಕೊಟ್ಟಿರಬಹುದು. ಪದೇ ಪದೇ ಪಾಕಿಸ್ತಾನ ಹೆಸರು ಹೇಳು ಎಂದು ಪ್ರಧಾನಿ ಹೇಳಿದಕ್ಕೆ ಅವರು ಹೇಳ್ತಿದ್ದಾರೆ ಎಂದು ಓವೈಸಿ ಹೇಳಿದರು.