Friday, January 10, 2025

‘ಓ’.. ಬದುಕೆ ಬದಲಾಗಿದೆ ಅಂದರೇಕೆ ರಾಜರತ್ನ ಅಪ್ಪು..?

ವಾಮಾಚಾರದ ಜೊತೆಗೆ ಹಾರರ್ ಕಂಟೆಂಟ್ ಒಳಗೊಂಡಿರುವ ಓ ಚಿತ್ರದಲ್ಲಿ ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಅಕ್ಕ-ತಂಗಿಯರಾಗಿ ನಟಿಸಿದ್ದಾರೆ. ವಿಭಿನ್ನ ಪ್ರೇಮಕಥಾಹಂದರ ಇರೋ ಈ ಹಾರರ್, ಥ್ರಿಲ್ಲರ್ ಜಾನರ್ ಚಿತ್ರಕ್ಕೆ ಮಹೇಶ್ ಸಿ. ಅಮ್ಮಲ್ಲಿದೊಡ್ಡಿ ನಿರ್ದೇಶನವಿದೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ವೈರಲ್ ಆಗಿತ್ತು. ಇದೀಗ ಪುನೀತ್ ರಾಜ್​ಕುಮಾರ್​ ಹಾಡಿರೋ ಏನೋ ಒಂದು ಜಾದೂ ಆಗಿದೆ ಎಂಬ ಹಾಡನ್ನ ಲಾಂಚ್ ಮಾಡಿದೆ ಟೀಂ.

ಬಹದ್ದೂರ್ ಚೇತನ್ ಸಾಹಿತ್ಯ ರಚಿಸಿರೋ ಈ ಹಾಡಿಗೆ ಕಿರಣ್ ತಲಕಾಡು ಕಥೆ ಬರೆದು ಏಕಾಕ್ಷರ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಹಾರರ್ ಛಾಯೆಯ ಚಿತ್ರವೇ ಆದ್ರೂ ಹೊಸತನದ ನಿರೂಪಣೆಯಿದೆ. ಈ ಹಾಡನ್ನು ಅಪ್ಪು ಅವರ ಕೈಲೇ ಹಾಡಿಸಬೇಕೆಂದು ಪುನೀತ್ ಅವರನ್ನೇ ಅಪ್ರೋಚ್ ಮಾಡಿ ಹಾಡಿನ ವಿಶೇಷತೆ ಕುರಿತು ಹೇಳಿದಾಗ, ನಾನು ಖಂಡಿತ ಹಾಡುತ್ತೇನೆ. ಅಲ್ಲದೆ ಸಾಂಗ್ ರೆಕಾರ್ಡಿಂಗ್ ಸಮಯದಲ್ಲಿ ಹಾಡಿನ ಬಿಡುಗಡೆ ಸಮಯದಲ್ಲಿ ನನಗೆ ಇನ್ ಫಾರ್ಮ್ ಮಾಡಿ ಬರುತ್ತೇನೆ ಅಂತಲೂ ಹೇಳಿದ್ದರಂತೆ.

ಒಂದು ಮನೆಯಲ್ಲಿ ಅಕ್ಕ ತಂಗಿಯರ ನಡೆಯುವ ಕಥೆ ಇದಾಗಿದ್ದು, ಚಿತ್ರದಲ್ಲಿ ವಾಮಾಚಾರ ಮಾಡುವುದು ತಪ್ಪು ಎಂದು ತೋರಿಸಲಾಗಿದೆಯಂತೆ. ಸೆನ್ಸಾರ್ ಕೂಡ ಮುಗಿಸಿರೋ ಈ ಸಿನಿಮಾ, ನವೆಂಬರ್ ೧೧ಕ್ಕೆ ಬಿಡುಗಡೆಯಾಗುತ್ತಿದೆ. ಸಿದ್ದು ಮೂಲಿಮನಿ ಜೊತೆ ಅಮೃತಾ, ಮಿಲನಾ ನಾಗರಾಜ್ ನಾಯಕಿಯರಾಗಿ ಕಾಣಸಿಗಲಿದ್ದು, ಹಾರರ್ ಜಾನರ್ಗೆ ಮತ್ತೆ ಜೋಶ್ ಕೊಡಲಿದೆ ಈ ಚಿತ್ರ. ಕಿರಣ್ ರವೀಂದ್ರನಾಥ್ ಸಂಗೀತ, ಸತೀಶ್ ಬಾಬು ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ಉಗ್ರಂ ಹಾಗೂ ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನ ಈ ಓ ಚಿತ್ರಕ್ಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES