ಮಡಿಕೇರಿ; ಎಲ್ಲೆಲ್ಲೂ ದೀಪಾವಳಿ ಸಂಭ್ರಮ ಕಳೆಗಟ್ಟಿದೆ, ದೀಪಗಳನ್ನು ಬೆಳಗಿಸೋ ಮೂಲಕ ಸಂಭ್ರಮಿಸೋರಿಗೆ ಕ್ಯಾಂಡಲ್ ದೀಪಗಳು ಕೈಬೀಸಿ ಕರೆಯುತ್ತಿವೆ, ಬಣ್ಣ ಬಣ್ಣದ ವೆರೈಟಿ ವೆರೈಟಿ ಕ್ಯಾಂಡಲ್ ಗಳೂ ಬೆಳಕಿನ ಹಬ್ಬಕ್ಕೆ ಸಿದ್ಧಗೊಂಡಿದ್ದು, ಗ್ರಾಹಕರ ಮನಸ್ಸಿಗೆ ಇಷ್ಟವಾಗೂ ಸುವಾಸನೆಯುಕ್ತ ಮೇಣದ ಬತ್ತಿಗಳು ಆಕರ್ಷಿಸುತ್ತಿವೆ, ಬಣ್ಣ ಬಣ್ಣದ ನೂರಾರು ವಿನ್ಯಾಸದ ಚಿತ್ತಾಕರ್ಷಕ ಕ್ಯಾಂಡಲ್ ಗಳು ನೋಡುಗರನ್ನ ಹುಬ್ಬೇರಿಸುವಂತೆ ಕೊಡಗಿನ ಗೋಣಿಕೊಪ್ಪಾದ ಕೈಕೇರಿ ಗ್ರಾಮದಲ್ಲಿ ಮಾಡುತ್ತಿವೆ.
ನೀವೇನಾದ್ರು ಹೋದ್ರೆ ಇಲ್ಲಿನ ಕ್ಯಾಂಡಲ್ ಶಾಪ್ ನಿಮ್ಮನ್ನ ಖಂಡಿತಾ ಗಮನಸೆಳೆಯುತ್ತದೆ. ಇಲ್ಲಿನ ಕೈಕೇರಿ ಗ್ರಾಮದಲ್ಲಿರುವ ಪ್ರಸಾದ್ ಕ್ಯಾಂಡಲ್ಸ್ ನ ವೆರೈಟಿ ವೆರೈಟಿ ಕ್ಯಾಂಡಲ್ಸ್ ಗ್ರಾಹಕರ ಕಣ್ಣುಕೋರೈಸುತ್ತಿವೆ.
ಮನಸ್ಸಿಗೆ ಮುದನೀಡೋ ಬಣ್ಣ ಬಣ್ಣದ ಕ್ಯಾಂಡಲ್ ಗಳಿಂದ ಹಿಡಿದು, ಬಾಲ್, ಹೃದಯಾ, ವಿವಿಧ ಡಾಲ್ ಕ್ಯಾಂಡಲ್, ಪಕ್ಷಿ, ಮರ-ಗಿಡ, ಕ್ಯಾಂಡಲ್, ನೀರಿನಲ್ಲಿ ತೇಲುವ ಹೂವಿನ ಆಕಾರದ ಕ್ಯಾಂಡಲ್, ಚಿಕ್ಕ ಕ್ಯಾಂಡಲ್ ನಿಂದ ಹಿಡಿದು ದೊಡ್ಡ ಕ್ಯಾಂಡಲ್ ಗಳು ಇಲ್ಲಿವೆ. ಅಲ್ಲದೇ, ಬಣ್ಣ ಬಣ್ಣದ ಕ್ಯಾಂಡಲ್ ಸೇರಿದಂತೆ ವಿವಿಧ ಕಲಾಕೃತಿ ರೀತಿಯ ಕ್ಯಾಂಡಲ್ ಗಳು ಕೂಡ ಇಲ್ಲಿ ತಯಾರಾಗುತ್ತಿವೆ. ಮನೆಯ ಅಂದ ಹೆಚ್ಚಿಸೋ ತರತರಹದ ಕ್ಯಾಂಡಲ್ ಗಳು ಎಲ್ಲರ ಗಮನಸೆಳೆಯುತ್ತಿವೆ.
ಅದರಲ್ಲೂ ಕೊಡಗಿನ ಕಾಫಿ ಬೀಜದಲ್ಲಿ ಸುವಾಸನೆ ಬರಿತ ಕ್ಯಾಂಡಲ್ ತುಂಬಾ ಆಕರ್ಷಣೆಯಾಗಿವೆ. ಹೀಗೆ ನೂರಾರು ವಿನ್ಯಾಸಗಳ ಕ್ಯಾಂಡಲ್ ತಯಾರಿಸಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ನೀಡುತ್ತಿದ್ದಾರೆ ಕೊಡಗಿನ ಶ್ರೀನಿವಾಸ ಪ್ರಸಾದ್ ದಂಪತಿ, ಕೇವಲ ಬೆಳಕುನೀಡೋ ಕ್ಯಾಂಡಲ್ ತಯಾರಿಸಿದ್ರೆ ಗ್ರಾಹಕರನ್ನು ಸೆಳೆಯೋದು ಕಷ್ಟ ಎಂದರಿತ ಇವರು, ಸುಮಾರು ನೂರು ಬಗೆಯ ವಿವಿಧ ವಿನ್ಯಾಸದ ಕ್ಯಾಂಡಲ್ ಗಳನ್ನು ತಯಾರಿಸುತ್ತಿದ್ದಾರೆ.
ಒಂದೊಂದು ಕ್ಯಾಂಡಲ್ ಗಳು ಒಂದೊಂದು ಆಕಾರದಲ್ಲಿ ಕಂಗೊಳಿಸುತ್ತಾ, ನೋಡುಗರ ಕಣ್ಣು ಕೋರೈಸುತ್ತಿವೆ, ವಿಶೇಷವಾಗಿ ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಬಣ್ಣ ಬಣ್ಣದ ಕ್ಯಾಂಡಲ್ ಗಳಿಗೆ ಬೇಡಿಕೆ ಬಂದಿದ್ದು ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ.
ಕಳೆದ 20 ವರ್ಷಗಳಿಂದ ಕ್ಯಾಂಡಲ್ ತಯಾರಿಕೆ ಮಾಡುತ್ತಿರು ಈ ಕುಟುಂಬ, ಸೀಸನ್ ಗೆ ತಕ್ಕಂತೆ, ಗ್ರಾಹಕರ ಅಭಿರುಚಿಯನ್ನರಿತು ಕ್ಯಾಂಡಲ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಎರಡುವರೆ ರೂಪಾಯಿಂದ ಪ್ರಾರಂಭಗೊಂಡು ಮೂರುವರೆ ಸಾವಿರ ಮೌಲ್ಯದ ಕ್ಯಾಂಡಲ್ ಗಳು ಇಲ್ಲಿ ಲಭ್ಯವಿದೆ.
ವಿರಾಜಪೇಟೆಯಿಂದ ಗೋಣಿಕೊಪ್ಪಾಗೆ ಹೋಗೋ ರಸ್ತೆಯಲ್ಲಿ ಸಿಗೂ ಈ ಕ್ಯಾಂಡಲ್ ಶಾಪ್ ಪ್ರವಾಸಿಗರ ನೆಚ್ಚಿನ ಶಾಪಿಂಗ್ ಪಾಯಿಂಟ್ ಕೂಡ. ಎಣ್ಣೆಯಿಂದ ಉರಿಯೋ ಮಣ್ಣಿನ ದೀಪದಿಂದ ಮನೆಯ ಅಂದ ಹಾಳಾಗೋದು, ಮಣ್ಣಿನ ದೀಪಗಳ ಅಲಭ್ಯತೆಯನ್ನ ಅರಿತು ಕ್ಯಾಂಡಲ್ ಗೆ ಬೇಡಿಕೆ ಬರುವಂತೆ ಸುಂದರ ಬಣ್ಣದ, ಆಕರ್ಶಕ ವಿನ್ಯಾಸದ ಪುಟ್ಟ ಪುಟ್ಟ ಕ್ಯಾಂಡಲ್ ಗಳನ್ನ ತಯಾರಿಸಿ ಮಾರಾಟಮಾಡಲಾಗುತ್ತಿದೆ.
ಪ್ರತೀ ವರ್ಷದ ದೀಪಾವಳಿ ಸಂದರ್ಭ ಅತಿಹೆಚ್ಚು ಬಗೆಯ ಕ್ಯಾಂಡಲ್ ತಯಾರಿಸಿ ಮಾರಾಟ ಮಾಡುವ ಈ ಕುಟುಂಬ ಬೆಳಕಿನ ಹಬ್ಬಕ್ಕೆಂದೇ ಹಲವು ತರಹದ ಕ್ಯಾಂಡಲ್ ತಯಾರಿಸಿ ಗ್ರಾಹಕರಿಗೆ ನೀಡುತ್ತಿದ್ದಾರೆ.
ಸುರೇಶ್ ಬಿ, ಪವರ್ ಟಿವಿ. ಮಡಿಕೇರಿ