Wednesday, January 22, 2025

ಮಳವಳ್ಳಿ ಬಾಲಕಿ ಕೇಸ್​: 600ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

ಮಂಡ್ಯ; ಜಿಲ್ಲೆಯ ಮಳವಳ್ಳಿ 10 ವರ್ಷದ ಬಾಲಕಿಯ ಮೇಲೆ ಹತ್ಯಾಚಾರಗೈದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ 14 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ 600 ಕ್ಕೂ ಹೆಚ್ಚು ಪುಟಗಳ ದೋಷಾರೋಪಣ ಪಟ್ಟಿ ಸಲ್ಲಿಸಿದ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ 14 ದಿನಗಳಲ್ಲೇ ಸಲ್ಲಿಕೆ ಮಾಡಲಾಗಿದೆ.

ಟ್ಯೂಷನ್ ಗೆ ತೆರಳಿದ್ದ ವೇಳೆ ಬಾಲಕಿಯನ್ನ ಅತ್ಯಾಚಾರಗೈದು ಟೀಚರ್​ ಆರೋಪಿ ಕಾಂತರಾಜು ಬಾಲಕಿಯನ್ನ ಕೊಲೆ ಮಾಡಿದ್ದ, ಈ ಸಂಬಂಧ ಬಂಧಿಸಿ ನ್ಯಾಯಾಂಗ ಆರೋಪಿಯನ್ನ ಬಂಧನಕ್ಕೊಪ್ಪಿಸಿದ್ದರು. ಚಾರ್ಜ್ ಶೀಟ್ ಸಲ್ಲಿಕೆ ಹಿನ್ನಲೆ ಅಲೋಕ್ ಕುಮಾರ್ ಟ್ವಿಟ್ ಜಿಲ್ಲಾ ಪೊಲೀಸರಿಗೆ ಅಭಿನಂದನೆ ತಿಳಿಸಿದರು.

ಅದರಂತೆ ರಾಜ್ಯ ಡಿಜಿಪಿ ಪ್ರವೀಣ್ ಸೂದ್ ಟ್ವೀಟ್​ ಮಾಡಿ, ಕಾನೂನಿನ ಪ್ರಕಾರ ಪೊಲೀಸರು 60 ದಿನಗಳಲ್ಲಿ ಪ್ರಕರಣಗಳನ್ನು ಅಂತಿಮಗೊಳಿಸಬೇಕು. ಆದರೆ, 14 ದಿನಗಳಲ್ಲಿ ಇದನ್ನು ಮಾಡಿದ ಮಂಡ್ಯ ಪೊಲೀಸ್​ ತಂಡಕ್ಕೆ ಅಭಿನಂದನೆಗಳು. ಈ ಘೋರ ಘಟನೆಯ ತ್ವರಿತ ವಿಚಾರಣೆ ಮತ್ತು ಆರೋಪಿಗಳ ಶಿಕ್ಷೆಗೆ ಶ್ರಮಿಸೋಣ ಎಂದಿದ್ದಾರೆ.

RELATED ARTICLES

Related Articles

TRENDING ARTICLES