Saturday, May 11, 2024

ಸ್ವಾಮೀಜಿ ಆತ್ಮಹತ್ಯೆ ಬೆನ್ನಲ್ಲೇ 5 ಪುಟಗಳ ಡೆತ್‌ನೋಟ್ ಪತ್ತೆ

ರಾಮನಗರ : ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸೋಮವಾರ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿದ ಪ್ರಕರಣ ಬಯಲಾಗಿದ್ದು, ಇಂದು ಸ್ವಾಮೀಜಿ ಆತ್ಮಹತ್ಯೆ ಬೆನ್ನಲ್ಲೇ 5 ಪುಟಗಳ ಡೆತ್‌ನೋಟ್ ಪತ್ತೆಯಾಗಿದೆ.

ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸೋಮವಾರ ಅನುಮಾನಾಸ್ಪದವಾಗಿ ಮಠದ ಪೂಜಾಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ ಪ್ರಕರಣ ಬಯಲಾಗಿತ್ತು. ಸ್ವಾಮೀಜಿ ಐದು ಪುಟದ ಡೆತ್ ನೋಟ್ ಬರೆದಿದ್ದಾರೆ, ಮೂರು ಪುಟ ಪೊಲೀಸರಿಗೂ ಸಿಕ್ಕಿದ್ದು, ತನಿಖೆ ನಡೆಯುತ್ತಿದೆ. ಡೆತ್‌ನೋಟ್‌ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬರುತ್ತಿತ್ತು.

ಇದೀಗ ವಿಜಯಕರ್ನಾಟಕಕ್ಕೆ ಸ್ವಾಮೀಜಿ ಬರೆದಿರುವ ಡೆತ್ ನೋಟ್​ನ ಮೊದಲ ಪುಟ ಲಭ್ಯವಾಗಿದ್ದು ಬಹಳಷ್ಟು ವಿಷಯಗಳ ಪ್ರಸ್ತಾಪ ಮಾಡಿದ್ದಾರೆ.

ಆ ಡೆತ್​ ನೋಟ್​ನಲ್ಲಿ ಏನಿದೆ ?….

“ಸಿದ್ದಗಂಗೆಯ ಪೂಜ್ಯರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು ಹಾಗೂ ಶ್ರೀ ಮಠದ ಎಲ್ಲಾ ಭಕ್ತರಿಗೆ ನನ್ನ ಕೊನೆ ಶರಣ ಶರಣಾರ್ಥಿಗಳು.
ಪೂಜ್ಯರಲ್ಲಿ ಹಾಗೂ ಮಠದ ಭಕ್ತರಲ್ಲಿ ನನ್ನ ಕೊನೆಯ ನಿವೇದನೆ ಏನೆಂದರೆ, ನಾನು ಈ ಮಠದ ಉತ್ತಾರಾಧಿಕಾರಿಯಾಗಿ 25ವರ್ಷಗಳು ಹೇಗೆ ಇದ್ದೆ ಎಂಬುದು ನಿಮಗೆಲ್ಲಾ ತಿಳಿದಿದೆ. ಇಷ್ಟು ದಿನ ನಾನು ಈ ಮಠದ ಒಬ್ಬ ನಿಷ್ಠಾವಂತ ಸೇವಕನಾಗಿ ಪ್ರಮಾಣಿಕನಾಗಿ ಶ್ರದ್ದೆಯಿಂದ ಮಠದ ಕೆಲಸ ಮಾಡಿದ್ದೇನೆ. ಸಿದ್ದಗಂಗಾ ಶ್ರೀಗಳ ಪ್ರೀತಿ ಪಾತ್ರನಾಗಿ ಸೇವೆ ಮಾಡುತ್ತ ಬಂದಿದ್ದೇನೆ.

ಯಾವತ್ತು ಈ ಮಠದ ಅಧರ್ಮವನ್ನು(ಹಣ) ನನ್ನ ನನ್ನ ವಯಕ್ತಿಕ ಜೀವನಕ್ಕೆ ನನ್ನ ಬಂದುಗಳಿಗೆ ಅಗಲಿ, ಮಠಗಳಿಗಾಗಲಿ ಕೊಟ್ಟಿಲ್ಲ, ಖರ್ಚು ಮಾಡಿಲ್ಲ. ಎಲ್ಲವನ್ನು ಮಠದ ಕಾರ್ಯಗಳಿಗೆ ವಿನಿಯೋಗಿಸಿದ್ದೇನೆ. ಅಷ್ಟೇ ಪ್ರಮಾಣಿಕವಾಗಿ ಬದುಕಿದ್ದೇನೆ.

ಆದರೆ ಈಗ ತುಂಬ ಮನಸ್ಸಿಗೆ ನೋವಾಗಲು ಸಂಗತಿ ಎಂದರೆ ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಕೆಟ್ಟ ವಿಚಾರಗಳನ್ನು ನನ್ನ ಮೇಲೆ ಹೊರಿಸಿ ನನ್ನ ಮನಸ್ಸಿಗೆ ನೋವು ಉಂಟು ಮಾಡಿದೆ. ನನ್ನ ಇಪ್ಪತ್ತೈದು ವರ್ಷದ ಪೂರ್ತಿ ಇಂತಹ ಕಷ್ಟಗಳ ಮಧ್ಯೆ ನಾನು ಬಂದಿದ್ದೇನೆ. ಆದರೆ ಎಲ್ಲಾ ನೋವುಗಳನ್ನು ಸಹಿಸಿ ಸಿದ್ದಗಂಗಾ ಪೂಜ್ಯರ ದರ್ಶನದಿಂದ ಮುಕ್ತಿಯಾಗುತ್ತಿತ್ತು. ಪೂಜ್ಯರು ಎಷ್ಟು ಸಾರಿ ಧರ್ಮ ತುಂಬಿಸಿದ್ದಿಸಿದ್ದಾರೆ. ಎಲ್ಲವನ್ನು ಮರೆತು ನನ್ನ ಕೆಲಸಗಳ ಕಡೆ ಗಮನ ಕೊಡುತ್ತಿದ್ದೆ.

ಆದರೆ ಇತ್ತೀಚಿನ ದಿನಗಳಲ್ಲಿ ಕಷ್ಟಗಳು ಬೇರೆ ರೂಪಗಳು ಪಡೆದಿರುತ್ತದೆ. ನನಗೆ ಗೊತ್ತಿಲ್ಲದ ವ್ಯಕ್ತಿಗಳು ಪೋನ್ ಮಾಡುವುದು, ಪರಿಚಯ ಮಾಡಿಕೊಳ್ಳಲು ಯತ್ನಿಸುವುದು ಇದು ನಿರಂತರವಾಗಿ ಆಗಿದೆ. ಆದರೂ ನಾನು ಈ ಎಲ್ಲಾ ಸಂಕೋಲೆಗಳಿಗೆ ಸಿಗದೇ ಇಷ್ಟು ದಿನ ಎಚ್ಚರವಾಗಿ ಇದ್ದೆ. ಆದರೆ ಶತ್ರುಗಳ ನಿರಂತರ ಪ್ರಯತ್ನದಿಂದ ನನಗೆ ಕೊನೆಗೂ ತೊಂದರೆಯಾಗಿದೆ. ಆರೇಳು ತಿಂಗಳ ಹಿಂದೆ ಗೊತ್ತಿಲ್ಲದ ಮಹಿಳೆ ನನಗೆ ದೂರವಾಣಿ ಕರೆ ಮಾಡಿ ಮಾತನಾಡಿಸುವುದು ಯಾರು ಅಂತ ಕೇಳದೆ.

ಇಲ್ಲಿಗೆ ಮೊದಲ ಪುಟ ಮುಕ್ತಾಯವಾಗಿದ್ದು ಮುಂದಿನ ಪುಟದಲ್ಲಿ ಬಹಳಷ್ಟು ವಿಷಯ ಹಾಗೂ ಕೆಲ ವ್ಯಕ್ತಿಗಳ ಹೆಸರು ಉಲ್ಲೇಖವಾಗಿರುವ ಮಾತುಗಳು ಕೇಳಿ ಬಂದಿದ್ದು ಪೊಲೀಸರ ತನಿಖೆಯಿಂದ ಮಾತ್ರ ಸತ್ಯಾಸತ್ಯತೆ ತಿಳಿಯಬೇಕಾಗಿದೆ.

RELATED ARTICLES

Related Articles

TRENDING ARTICLES