Monday, December 23, 2024

ಸಂಕ್ರಾಂತಿ ಅಖಾಡಕ್ಕೆ ಸಲಗ & ‘ವೀರಸಿಂಹಾರೆಡ್ಡಿ’ ರೆಡಿ

ನಮ್ಮ ಸ್ಯಾಂಡಲ್​ವುಡ್ ಸಲಗ ದುನಿಯಾ ವಿಜಯ್ ಬಣ್ಣ ಹಚ್ಚಿರೋ ತೆಲುಗು ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಟೈಟಲ್ ಜೊತೆ ರಿಲೀಸ್ ಡೇಟ್ ಕೂಡ ಕನ್ಫರ್ಮ್​ ಆಗಿದೆ. ಲೆಜೆಂಡ್ ಬಾಲಯ್ಯ ಜೊತೆ ಸಲಗನ ಸೆಣಸಾಟ ಹೇಗಿರಲಿದೆ ಅನ್ನೋದ್ರ ಜೊತೆಗೆ ಈ ರೆಡ್ಡಿ ಟೈಟಲ್ ಹಿಂದಿರೋ ಸಕ್ಸಸ್ ಸೀಕ್ರೆಟ್ ಕೂಡ ಬಿಚ್ಚಿಡ್ತೀವಿ. ನೀವೇ ಓದಿ.

  • ಸಮರಸಿಂಹರೆಡ್ಡಿ, ಚೆನ್ನಕೇಶವರೆಡ್ಡಿ ಜಾಡಿನಲ್ಲಿ VSR ನಡೆ

ಲೆಜೆಂಡ್, ಡಿಕ್ಟೇಟರ್, ರೂಲರ್, ಅಖಂಡ ಹೀಗೆ ಸಾಲು ಸಾಲು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡಿದ ನಂದಮೂರಿ ಬಾಲಕೃಷ್ಣ ನಟನೆಯ ಮೋಸ್ಟ್ ಎಕ್ಸ್​ಪೆಕ್ಟೆಡ್ ಮೂವಿ ವೀರಸಿಂಹಾರೆಡ್ಡಿ. ಹೌದು.. ಎನ್​ಬಿಕೆ 107 ಹೆಸ್ರಲ್ಲಿ ಸಿನಿಮಾ ಶುರು ಮಾಡಿದ ಮೈತ್ರಿ ಮೂವಿ ಮೇಕರ್ಸ್​ ಹಾಗೂ ಗೋಪಿಚಂದ್ ಮಾಲಿನೇನಿ, ಬಾಲಯ್ಯನ ಈ ಹಿಂದಿನ ಸಿನಿಮಾಗಳಿಗಿಂತ ಜೋರಾಗೇ ಮೇಕಿಂಗ್ ಮಾಡಿದೆ.

ಅದ್ರ ಝಲಕ್ ಕೂಡ ರಿವೀಲ್ ಮಾಡಿರೋ ಚಿತ್ರತಂಡ, ಸಿನಿಪ್ರಿಯರಿಗೆ ಸ್ಯಾಂಪಲ್​​ನಿಂದ ಸಖತ್ ಥ್ರಿಲ್ ನೀಡಿತ್ತು. ಅದ್ರಲ್ಲೂ ನಮ್ಮ ಕನ್ನಡದ ಸಲಗ ದುನಿಯಾ ವಿಜಯ್, ಈ ಚಿತ್ರದ ಖಳನಾಯಕ ಅನ್ನೋದು ಮತ್ತೊಂದು ಇಂಟರೆಸ್ಟಿಂಗ್ ವಿಷ್ಯ. ಸಲಗ ಬಿಗ್ಗೆಸ್ಟ್ ಹಿಟ್ ಬಳಿಕ ಬಾಲಯ್ಯ ಜೊತೆ ಸೆಣಸಾಡಲು ಸಜ್ಜಾಗಿರೋ ವಿಜಯ್​ ಸಿನಿಮಾಗೆ ವೀರಸಿಂಹಾರೆಡ್ಡಿ ಟೈಟಲ್ ಕನ್ಫರ್ಮ್​ ಆಗಿದೆ.

ಅಂದಹಾಗೆ ಬಾಲಯ್ಯ ಈ ತರಹ ರೆಡ್ಡಿ ಟೈಟಲ್​ನಲ್ಲಿ ಸಿನಿಮಾ ಮಾಡ್ತಿರೋದು ಇದೇ ಮೊದಲಲ್ಲ. 1999ರಲ್ಲಿ ಮಾಡಿದ ಸಮರಸಿಂಹಾರೆಡ್ಡಿ ಇಂದಿಗೂ ಎವರ್ ಮಾಸ್ ವೆಂಚರ್. ಫ್ಯಾಕ್ಷನಿಸಂನ ಬಹಳ ಅದ್ಭುತವಾಗಿ ಕಟ್ಟಿಕೊಟ್ಟಂತಹ ಸಿನಿಮಾ ಅದು. ಪರಚೂರಿ ಬ್ರದರ್ಸ್​ ನಿರ್ಮಾಣದ ಈ ಸಿನಿಮಾ ಬಾಲಯ್ಯ ಕರಿಯರ್​ನ ಬಿಗ್ಗೆಸ್ಟ್ ಹಿಟ್ ಅನಿಸಿಕೊಂಡಿತ್ತು. ನಂತ್ರ 2002ರ ಚೆನ್ನಕೇಶವರೆಡ್ಡಿ ಕೂಡ ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಸೇರಿತ್ತು.

ಬರೋಬ್ಬರಿ ಎರಡು ದಶಕದ ನಂತ್ರ ಮತ್ತದೇ ಹಿಟ್ ಸಿನಿಮಾಗಳ ಟೈಟಲ್ ಹೋಲುವ ಚಿತ್ರ ಇದಾಗಿದ್ದು, ಅದೇ ಕ್ರೌರ್ಯ ಹಾಗೂ ಸಾಮಾಜಿಕ ಬದ್ಧತೆಯ ಕಂಟೆಂಟ್​ನಿಂದ ಮೇಳೈಸೋ ಮನ್ಸೂಚನೆ ನೀಡಿದೆ. ಇನ್ನು ನಮ್ಮ ಶಿವಣ್ಣ- ಶ್ರೀಮುರಳಿಯ ಮಫ್ತಿ ಎನ್ನಲಾಗ್ತಿದ್ದ ಸಿನಿಮಾ ಇದಲ್ಲವಂತೆ. ಹಾಗಾದ್ರೆ ಗೆಟಪ್ಸ್ ಹಿಂದಿನ ಸೀಕ್ರೆಟ್ ಏನು ಅನ್ನೋದು ಗೊತ್ತಾಗ್ಬೇಕು ಅಂದ್ರೆ ಸಂಕ್ರಾಂತಿ ವರೆಗೂ ಕಾಯಲೇಬೇಕು. 2023ರ ಹೊಸ ವರ್ಷದ ಮೊದಲ ಹಬ್ಬಕ್ಕೆ ವೀರಸಿಂಹಾರೆಡ್ಡಿ ತೆರೆಗಪ್ಪಳಿಸಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ 

RELATED ARTICLES

Related Articles

TRENDING ARTICLES