Wednesday, January 22, 2025

ಭಾರತ ಮೂಲದ ರಿಷಿ ಸುನಕ್​ ಬ್ರಿಟನ್​ ಪ್ರಧಾನಿಯಾಗಿ ಆಯ್ಕೆ.!

ಇಂಗ್ಲೆಂಡ್​; ಭಾರತ ಮೂಲದ ರಿಷಿ ಸುನಕ್​ ಬ್ರಿಟನ್​ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಅ.28 ರಂದು ನೂತನ ಪ್ರಧಾನಿ ಹುದ್ದೆಗೆ ಪದಗ್ರಹಣ ಮಾಡಲಿದ್ದಾರೆ.

ಇನ್ಪೋಸಿಸ್​ ಸುಧಾಮೂರ್ತಿ ಅಳಿಯರಾದ 42 ವರ್ಷದ ರಿಷಿ ಸುನಕ್​ ಬ್ರಿಟನ್​ ಪ್ರಧಾನಿಯಾಗಿ ಆಯ್ಕೆಗೆ ಬಹುಮತ ಸಾಬೀತಾಗಿದ್ದು, ಸುನಕ್​ ವಿರುದ್ಧ ಪ್ರಧಾನಿ ಹುದ್ದೆಗೆ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ್ದ ಪೆನ್ನಿ ಮಾರ್ಡಾಂಟ್​ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಈ ಮೂಲಕ ಬ್ರಿಟನ್​ನ 5 ನೇ ಪ್ರಧಾನಿಯಾಗಿ ರಿಷಿ ಸುನಕ್​ ಆಯ್ಕೆಗೊಂಡರು.

2015 ರಲ್ಲಿ ಮೊದಲ ಬಾರಿಗೆ ಸಂಸರಾಗಿ ಸುನಕ್​ ಆಯ್ಕೆಯಾಗಿದ್ದರು. ತದ ನಂತರ 2020-22 ರಲ್ಲಿ ಬ್ರಿಟನ್​ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಈ ಹಿಂದೆ ಲಿಜ್ ಟ್ರುಸ್ ರಾಜೀನಾಮೆ ನೀಡಿದ್ದರು. ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 45 ದಿನಗಳಲ್ಲೇ ಲಿಜ್ ಟ್ರುಸ್ ರಾಜೀನಾಮೆ ನೀಡಿದ್ದರು. ನಂತರ ಬ್ರಿಟನ್​ ಪ್ರಧಾನಿ ಹುದ್ದೆಗೆ ರಿಷಿ ಸುನಕ್​ ಅವರ ಹೆಸರು ಬಲವಾಗಿ ಕೇಳಿಬಂದಿತ್ತು.

RELATED ARTICLES

Related Articles

TRENDING ARTICLES