Saturday, May 18, 2024

ಡಾನ್ ಜಯರಾಜ್ ಖದರ್​ಗೆ ಹೆಚ್ಚಾಯ್ತು ಟ್ವೆಂಟಿ ಶೋಸ್

ಡಾಲಿ ಅಂದ್ರೆ ಮಾಸ್.. ಮಾಸ್ ಅಂದ್ರೆ ಡಾಲಿ. ಅಂಥದ್ರಲ್ಲಿ ಔಟ್ ಅಂಡ್ ಔಟ್ ರೌಡಿಸಂ ಬೇಸ್ಡ್ ಸಿನಿಮಾಗೆ ಡಾಲಿ ಧನಂಜಯ ಅವ್ರೇ ನಾಯಕನಾದ್ರೆ ಅದ್ರ ಕ್ರೇಜ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯೆಸ್. ಹೆಡ್​ಬುಷ್ ಡಾನ್ ಡಾಲಿ ಖದರ್​ ನೋಡಿ ಪ್ರೇಕ್ಷಕ ಫಿದಾ ಆಗಿರೋದಲ್ಲದೆ, ಎಕ್ಸ್​ಟ್ರಾ ಶೋಸ್​ಗೆ ಡಿಮ್ಯಾಂಡ್ ಮಾಡ್ತಿದ್ದಾರೆ.

  • ಮಾಸ್​ಪ್ರಿಯರ ನಾಡಿಮಿಡಿತ ಹೆಚ್ಚಿಸಿದ ಡಾಲಿ ಧನಂಜಯ

ಅಗ್ನಿ ಶ್ರೀಧರ್ ಅವ್ರ ಆತ್ಮಕಥೆ ದಾದಾಗಿರಿಯ ದಿನಗಳು ಪುಸ್ತಕದ ಒಂದು ಭಾಗ ಈ ಹೆಡ್​ಬುಷ್ ಸಿನಿಮಾ. ನೈಜ ಘಟನೆ ಆಧಾರಿತ ಸಿನಿಮಾಗಳು ಅಂದಾಗ ಎಲ್ರಿಗೂ ಒಂದು ಕ್ಯೂರಿಯಾಸಿಟಿ ಇದ್ದೇ ಇರುತ್ತೆ. ನಾವು ಕಂಡಿದ್ದು, ಕೇಳಿದ್ದನ್ನ ತೆರೆಯ ಮೇಲೆ ಹೇಗೆ ಕಟ್ಟಿಕೊಟ್ಟಿರ್ತಾರೋ ಅನ್ನೋ ಸಂದೇಹವಿರುತ್ತೆ. ಅದಕ್ಕೆ ಉತ್ತರ ರಿಲೀಸ್ ಆದ ಬಳಿಕವಷ್ಟೇ ಸಿಗಲಿದೆ. ಸದ್ಯ ಹೆಡ್​ಬುಷ್​ಗೆ ನಿರೀಕ್ಷೆಗೂ ಮೀರಿದ ಪ್ರಶಂಸೆ, ಪ್ರತಿಕ್ರಿಯೆಗಳು ಸಿಗ್ತಿವೆ.

ಕಾರಣ, ಒಂದ್ಕಡೆ ಡಾಲಿ ಧನಂಜಯ ಹಂಡ್ರೆಡ್ ಪರ್ಸೆಂಟ್ ರೌಡಿಸಂ ಕಥಾನಕಕ್ಕೆ ನಾಯಕನಟನಾಗಿರೋದು. ಮತ್ತೊಂದ್ಕಡೆ ಡಾಲಿ ಜೊತೆ ಅವ್ರ ಗೆಳೆಯರ ಬಳಗವೆಲ್ಲಾ ಕೂಡಿ ಬಣ್ಣ ಹಚ್ಚಿ, ಆ ಪಾತ್ರಗಳಿಗೆ ಜೀವ ತುಂಬಿರೋದು. ಯೆಸ್. ಡಾಲಿ ಈ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ಔಟ್​ ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ನಟರಾಕ್ಷಸನಾಗಿ ಧೂಳೆಬ್ಬಿಸಿದ್ದಾರೆ.

ಶೂನ್ಯ ನಿರ್ದೇಶನದ ಈ ಸಿನಿಮಾದಲ್ಲಿ ರೆಟ್ರೋ ಅಂಡರ್​ವರ್ಲ್ಡ್​ ಕಥಾನಕವನ್ನು ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ. ಲೂಸ್​ಮಾದ ಯೋಗಿ, ರಘು ಮುಖರ್ಜಿ, ವಸಿಷ್ಠ ಸಿಂಹ, ಶ್ರುತಿ ಹರಿಹರನ್, ಹಬೀಬಿ ಬೇಬಿ ಪಾಯಲ್ ಹೀಗೆ ಎಲ್ಲರೂ ಮ್ಯಾಜಿಕ್ ಮಾಡಿದ್ದಾರೆ. ಮೊದಲ ದಿನವೇ 4.23 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿರೋ ಹೆಡ್​ಬುಷ್, ಬಾಕ್ಸ್ ಆಫೀಸ್​ನಲ್ಲಿ ಸೌಂಡ್ ಮಾಡ್ತಿದೆ.

ಆ ಸೌಂಡ್​ಗೆ ಪ್ರೇಕ್ಷಕರಿಂದ ಡಿಮ್ಯಾಂಡ್ ಕೂಡ ಹೆಚ್ಚಾಗಿದ್ದು, ಇಂದಿನಿಂದ ರಾಜ್ಯಾದ್ಯಂತ ಸುಮಾರು 20ಕ್ಕೂ ಅಧಿಕ ಹೆಚ್ಚುವರಿ ಪ್ರದರ್ಶನಗಳನ್ನ ಆಯೋಜಿಸಲಾಗಿದೆ. ಇದು ಡಾಲಿಯ ಸಿನಿಮೋತ್ಸಾಹದ ಜೊತೆ ಅವ್ರ ನಿರ್ಮಾಣದ ಕನಸನ್ನ ದುಪ್ಪಟ್ಟು ಮಾಡಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ 

RELATED ARTICLES

Related Articles

TRENDING ARTICLES