Sunday, December 22, 2024

ಭಾರತೀಯ ಮೂಲದ ನೂತನ ಬ್ರಿಟನ್​ ಪ್ರಧಾನಿ ರಿಷಿ ಸುನಕ್ ನಡೆದು ಬಂದ ಹಾದಿ

ಇಂಗ್ಲೆಂಡ್​ : ಭಾರತೀಯ ಮೂಲದ ರಿಷಿ ಸುನಕ್ ಅವರು ಬ್ರಿಟನ್‌ನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬ್ರಿಟನ್‌ನಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ ಮೂಲದ ನಾಯಕರಾಗಿದ್ದಾರೆ.

42 ವರ್ಷದ ಸುನಕ್, ಮೇ 12, 1980 ರಲ್ಲಿ ಜನಿಸಿದ್ದಾರೆ. ರಿಷಿ ಸುನಕ್ ಅವರ ತಂದೆ ತಾಯಿಯರಿಬ್ಬರೂ ಭಾರತೀಯ ಮೂಲದವರು. ಸುನಕ್ ಅವರ ಪೋಷಕರು 1960 ರ ದಶಕದಲ್ಲಿ ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ ವಲಸೆ ಬಂದಿದ್ದರು. ಸುನಕ್​​ ಅವರು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದಾರೆ.

ಸುನಕ್ ಅವರ ತಂದೆ ಯಶವೀರ್ ಸುನಕ್ ಅವರು ರಾಷ್ಟ್ರೀಯ ಆರೋಗ್ಯ ಸೇವೆಯ ಸಾಮಾನ್ಯ ವೈದ್ಯರು ಮತ್ತು ತಾಯಿ ಉಷಾ ಸುನಕ್ ಅವರು ರಸಾಯನಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು. ನನ್ನ ತಂದೆ ತಾಯಿ ನೊಂದವರ ಸಮುದಾಯಕ್ಕೆ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸುವುದನ್ನು ನೋಡುತ್ತಾ ಬೆಳೆದಿದ್ದೇನೆ ಎಂದು ಸುನಕ್ ತಮ್ಮ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದ್ದಾರೆ.

ಅಲ್ಲದೇ, ಸುನಕ್​ ತಮ್ಮ ಬಿಡುವಿನ ವೇಳೆಯಲ್ಲಿ ಕ್ರಿಕೆಟ್, ಫುಟ್‌ಬಾಲ್ ಮತ್ತು ಚಲನಚಿತ್ರಗಳನ್ನು ಆನಂದಿಸುತ್ತಾರೆ. ಸುನಕ್ ಅವರು 2015 ರಲ್ಲಿ ರಿಚ್ಮಂಡ್  ಕ್ಷೇತ್ರದಿಂದ ಮೊದಲು ಸಂಸದರಾಗಿ ಆಯ್ಕೆಯಾದರು. ಅದೇ ಬ್ರಿಟನ್​ ಕ್ಷೇತ್ರದಿಮದ 2017 ಮತ್ತು 2019 ರಲ್ಲಿ ಮರು ಆಯ್ಕೆಯಾದರು. 2020 ರಲ್ಲಿ ಬ್ರಿಟನ್​ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಸುನಕ್​ ಅವರು ಅಮೆರಿಕಾದ ಸ್ಟ್ಯಾನ್​​ಫೋರ್ಡ್​​ ವಿವಿಯಲ್ಲಿ ಎಂಬಿಎ ಹಾಗೂ ಆಕ್ಸ್​​ಫರ್ಡ್​​ ವಿವಿಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಗೋಲ್ಡ್​​​ಮನ್​​​​ ಸ್ಯಾಚ್​ ಬ್ಯಾಂಕ್​ನಲ್ಲಿ ವೃತ್ತಿ ಆರಂಭಿಸಿ, ವೃತ್ತಿ ಜೀವನಕ್ಕೆ ಗುಡ್​ಬೈ ಹೇಳಿ ರಾಜಕೀಯಕ್ಕೆ ಎಂಟ್ರಿ ಆಗಿದ್ದರು.

ಕ್ಯಾಲಿಫೋರ್ನಿಯಾದಲ್ಲಿ ರಿಷಿ ಸುನಕ್​ ಅವರು ಪತ್ನಿ ಅಕ್ಷತಾ ಅವರನ್ನು ಭೇಟಿಯಾದರು. ತದ ನಂತರ ದಿನಗಳಲ್ಲಿ ಅಕ್ಷತಾ ಅವರನ್ನು ಸುನಕ್​ ವರಿಸಿದರು. ಸದ್ಯ ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಾದ ಕೃಷ್ಣ ಮತ್ತು ಅನುಷ್ಕಾ ಇದ್ದಾರೆ.

RELATED ARTICLES

Related Articles

TRENDING ARTICLES