ಬೆಂಗಳೂರು : ದೇಶಾದ್ಯಂತ PFI ನಿಷೇಧದ ಬಳಿಕ ಹಲವು ಪಿಎಫ್ಐ ಮುಖಂಡರನ್ನ ಪೊಲೀಸರು ಬಂಧಿಸಿದ್ದಾರೆ. ಇತ್ತ ಬೆಂಗಳೂರಿನ ಕೆಜಿ ಹಳ್ಳಿ ಪೊಲೀಸ್ರ ಕೈಗೆ 15 ಆರೋಪಿಗಳು ತಗಲ್ಲಾಕ್ಕೊಂಡಿದ್ದರು. ಬಂಧಿತರ ಅಪರಾಧ ಹಿನ್ನೆಲೆಯನ್ನ ಅರಸಿದ ಪೊಲೀಸ್ರು, ಇದೀಗ ಹಲವು ದಾಖಲೆಗಳನ್ನ ಕಲೆಕ್ಟ್ ಮಾಡಿದ್ದಾರೆ. ಶಿರಸಿ, ಸಾಗರ, ಶಿವಮೊಗ್ಗ, ತೀರ್ಥಹಳ್ಳಿ, ಉಪ್ಪಿನಂಗಡಿ ಹಾಗೂ ಮಂಗಳೂರು ಉತ್ತರ ವಲಯದ ಪೊಲೀಸ್ ಠಾಣೆಯಲ್ಲಿ ಪಿಎಫ್ ಐ ಸಂಘಟನೆಯ ವಿರುದ್ಧ ದಾಖಲಾಗಿದ್ದ ಕೇಸಿನ ಹಿಸ್ಟರಿಯನ್ನ ಈಗಾಗ್ಲೇ ಕಲೆಕ್ಟ್ ಮಾಡಲಾಗಿದೆ. ಪ್ರತಿಭಟನೆ, ಕೋಮುಗಲಭೆ, ಕೊಲೆ ಯತ್ನ ಹಾಗೂ ಪೊಲೀಸ್ ಠಾಣೆಯ ಮೇಲೆ ಅಟ್ಯಾಕ್. ಹೀಗೆ ಹಲವು ಕೇಸುಗಳ ವಿವರಗಳನ್ನ ಪೊಲೀಸ್ರು ಈಗಾಗ್ಲೇ ಪಡೆದಿದ್ದಾರೆ. ಕರಾವಳಿ ಭಾಗದಲ್ಲಿ 40 ಹಾಗೂ ಶಿರಸಿ, ಶಿವಮೊಗ್ಗ, ಸಾಗರ ಭಾಗದ ಒಟ್ಟು 38 ಕೇಸ್ಗಳ ದಾಖಲೆಗಳನ್ನ ಕೆ.ಜಿ.ಹಳ್ಳಿ ಪೊಲೀಸ್ರು ಪಡೆದಿದ್ದಾರೆ.
ಕೆಜಿ ಹಳ್ಳಿ ಪೊಲೀಸ್ ಠಾಣೆಯ ಕೇಸ್ನಲ್ಲಿ ಪ್ರಮುಖ ಆರೋಪಿಯಾಗಿರೋ ಅಯೂಬ್ ಅಗ್ನಾಡಿಯ ಹಿಸ್ಟರಿ ಬಹಳ ದೊಡ್ಡದೇ ಇದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯ ಮೇಲೆ ಪಿಎಫ್ ಐ ಕಾರ್ಯಕರ್ತರ ಅಟ್ಯಾಕ್ ಸಂಬಂಧ 2021ರಲ್ಲಿ ಉಪ್ಪಿನಂಗಡಿ ಪೊಲೀಸ್ರು ಪಿಎಫ್ಐನ 70 ಕ್ಕೂ ಹೆಚ್ಚು ಜನರನ್ನ ಬಂಧಿಸಿತ್ತು. ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಗಳನ್ನ ಬಂಧಿಸಿದ್ದ ಹಿನ್ನೆಲೆ ಪಿಎಫ್ ಐ ಪೊಲೀಸ್ ಠಾಣೆಯ ಮೇಲೆ ಕಲ್ಲಗಳನ್ನ ತೂರಿದ್ದರು. ಆದ್ರೆ, ಪ್ರಕರಣ ಇಷ್ಟು ಗಂಭೀರವಾಗಿದ್ದರೂ ಉಪ್ಪಿನಂಗಡಿ ಪೊಲೀಸ್ರು ಇಲ್ಲಿಯವರೆಗೂ ಪೆಂಡಿಂಗ್ ಕೇಸ್ ಅಂತಾನೇ ಮುಂದುವರಿಸಿಕೊಂಡು ಬಂದಿರೋದು ಉಪ್ಪಿನಂಗಡಿ ಪೊಲೀಸರ ಬೇಜವಾಬ್ದಾರಿತನವನ್ನ ಎತ್ತಿತೋರಿಸುತ್ತೆ.
ಈಗಾಗ್ಲೇ ಆರೋಪಿಗಳ ಕ್ರೈಂ ಹಿಸ್ಟರಿಯನ್ನ ಎಳೆಎಳೆಯಾಗಿ ದಾಖಲೆಗಳ ಮೂಲಕ ಪಡೆದಿರೋ ಕೆ.ಜಿ.ಹಳ್ಳಿ ಪೊಲೀಸ್ರು ಆರೋಪಿಗಳ ಇನ್ನಷ್ಟು ಮಾಹಿತಿಯನ್ನ ಕಲೆಹಾಕ್ತಿದ್ದಾರೆ. 180 ದಿನಗಳಲ್ಲಿ 15 ಆರೋಪಿಗಳ ಪೂರ್ಣ ಹಣೆಬರಹವನ್ನ ದೋಷಾರೋಪಣ ಪಟ್ಟಿಯಲ್ಲಿ ಪೊಲೀಸ್ರು ಕೋರ್ಟ್ ಮುಂದೆ ಸಲ್ಲಿಸಲು ತುದಿಗಾಲಲ್ಲಿ ನಿಂತಿದ್ದಾರೆ.
ಅಶ್ವಥ್.ಎಸ್.ಎನ್, ಕ್ರೈಂ ಬ್ಯೂರೋ, ಪವರ್ ಟಿವಿ