ಬೆಂಗಳೂರು : ದೀಪಾವಳಿ ಹಬ್ಬದ ವೇಳೆ ಪಟಾಕಿ ಅವಘಡಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಬೆಂಗಳೂರಿನ ಮಿಂಟೋ, ನಾರಾಯಣ ನೇತ್ರಾಲಯ ಸೇರಿದಂತೆ ಇತರೆ ಆಸ್ಪತ್ರೆ ಗಳು ಸಜ್ಜಾಗಿದೆ.
ನಗರದಲ್ಲಿ ಪಟಾಕಿ ಅವಘಡ ಚಿಕಿತ್ಸೆ ಗೆಂದು ವಿಶೇಷ ಹಾಸಿಗೆ ಮೀಸಲಿಟ್ಟ ಬೆಂಗಳೂರಿನ ಕಣ್ಞಿನ ಆಸ್ಪತ್ರೆ ಗಳು, ಹಬ್ಬದ ಹಿನ್ನೆಲೆ ಮಿಂಟೋ ಸೇರಿ ಇತರೆ ಆಸ್ಪತ್ರೆ ಗಳು ದಿನ 24 ಗಂಟೆಯೂ ಸೇವೆ ನೀಡಲು ಸಜ್ಜಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆ ಸಹಾಯವಾಣಿ ಆರಂಭಿಸಿರೋ ಕಣ್ಣಿನ ಆಸ್ಪತ್ರೆಗಳು, ಪಟಾಕಿ ಅವಘಡ ಚಿಕಿತ್ಸೆ ಗೆಂದು 30 ಹಾಸಿಗೆ ಮೀಸಲಿಟ್ಟಿರೋ ಮಿಂಟೋ ಆಸ್ಪತ್ರೆ, ಅಗತ್ಯ ಸಿಬ್ಬಂದಿಗಳು ದಿನಪೂರ್ತಿ ಸೇವೆ ನೀಡಲು ಸಜ್ಜಾಗಿದೆ.
ಪಟಾಕಿ ಸಿಡಿಸುವ ವೇಳೆ ವೈದ್ಯರ ಸಲಹೆ.
ಕನಿಷ್ಠ 2-3 ಅಡಿ ದೂರದಿಂದ ಪಟಾಕಿ ಹಚ್ಚಿ.
ಪಟಾಕಿ ಹಚ್ಚಲು ಉದ್ದನೆಯ ಕೋಲು ಬಳಸಿ.
ಪಟಾಕಿ ಖರೀದಿಸಲೇ ಬೇಕಾದಲ್ಲಿ ಐಎಸ್‌ಐ ಗುರುತಿನ ಹಸಿರು ಪಟಾಕಿಗಳನ್ನು ಖರೀದಿಸಿ.
ಮೈದಾನ, ಖಾಲಿ ಜಾಗಗಳಲ್ಲಷ್ಟೆ ಪಟಾಕಿ ಹಚ್ಚಿ.
ಮಕ್ಕಳು ಒಂಟಿಯಾಗಿ ಪಟಾಕಿ ಸಿಡಿಸುವುದಕ್ಕೆ ಅವಕಾಶ ನೀಡಬೇಡಿ. ಜತೆಯಲ್ಲಿ ಪಾಲಕರು ಇರಲಿ.
ಪಟಾಕಿ ಸಿಡಿದಾಗ ಯಾವುದಾದರೂ ಕಿಡಿ ನಿಮ್ಮ ಕಣ್ಣನ್ನು ಸೇರಿದರೆ ಕಣ್ಣನ್ನು ಉಜ್ಜಿಕೊಳ್ಳಬೇಡಿ.
ಅರೆಬರೆ ಸುಟ್ಟ ಪಟಾಕಿ ತುಣುಕನ್ನು ಮುಟ್ಟುವ, ಗಾಳಿಯಲ್ಲಿ ಎಸೆಯುವ ಪ್ರಯತ್ನ ಬೇಡ.
ಗಾಜು, ಡಬ್ಬ ಇತರೆ ಪಾತ್ರೆಗಳನ್ನು ಇರಿಸಿ ಪಟಾಕಿ , ರಾಕೆಟ್ ಹಚ್ಚುವ ಸಾಹಸ ಮಾಡಬೇಡಿ.