ಬೆಂಗಳೂರು : ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಸಿಟಿಕಾನ್ ಸಿಟಿಯಲ್ಲಿ ಮನೆ ಮಾಡಿದೆ. ನರಕ ಚತುರ್ಥಿ, ಲಕ್ಮ್ಮೀ ಪೂಜೆ ಹಾಗೂ ಬಲಿಪಾಡ್ಯಮಿ ಆಚರಣೆಗೆ ಉದ್ಯಾನ ನಗರಿಯ ಜನ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ ಸೇರಿದಂತೆ ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಎಂದಿನಂತೆ ಹಬ್ಬದ ಸಾಮಗ್ರಿಗಳ ಖರೀದಿ ಜೋರಾಗಿವೆ. ಹೂ ಹಣ್ಣುಗಳನ್ನು ಎಂದಿನಂತೆ ಗ್ರಾಮೀಣ ಭಾಗಗಳಿಂದ ತಂದು ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ರು. ಆದ್ರೆ, ಈ ಬಾರಿ ತಯಾರಿಯಲ್ಲಿ ಕೊಂಚ ನಿರಾಸವಾಗಿದ್ದು, ವ್ಯಾಪಾರ ಕೂಡ ಡಲ್ ಆಗಿದೆ.
ಇನ್ನೂ ದಸರಾ ಸಮಯದಲ್ಲಿ ಆಯುಧ ಪೂಜೆಯನ್ನು ಮಿಸ್ ಮಾಡಿದವರು, ದೀಪಾವಳಿಗೆ ವಾಹನಗಳನ್ನು ಪೂಜಿಸುವ ಪದ್ದತಿ ಇದೆ. ಹೀಗಾಗಿ ಕುಂಬಳಕಾಯಿ, ನಿಂಬೆಹಣ್ಣು, ಮಾವಿನ ಎಲೆ ಮತ್ತು ಬಾಳೆ ಕಂಬಕ್ಕೆ ಸ್ವಲ್ಪ ಡಿಮ್ಯಾಂಡ್ ಇದೆ. ಇನ್ನೂ, ಪ್ರತಿ ಬಾರಿಯೂ ಹಬ್ಬದ ಸಮಯದಲ್ಲಿ ಕಾಲಿಡಲು ಕೂಡ ಜಾಗವಿರದ ಕೆ.ಆರ್.ಮಾರುಕಟ್ಟೆ ಖಾಲಿ ಖಾಲಿಯಾಗಿತ್ತು. ಜೊತೆಗೆ ವ್ಯಾಪಾರವಿಲ್ಲದೆ ವ್ಯಾಪಾರಸ್ಠರು ನಿರಾಸೆರಾಗಿದ್ರು.
ಇನ್ನು ಕೆ.ಆರ್.ಮಾರುಕಟ್ಟೆಯಲ್ಲಿ ಕನಕಾಂಬರ ಹೂವು ಕೆ.ಜಿ 1200 ರೂಪಾಯಿ ತಲುಪಿದ್ರೆ. ದುಂಡುಮಲ್ಲಿಗೆ 400 ರೂಪಾಯಿ ಆಗಿದೆ. ಕಾಕಡ 500 ರೂಪಾಯಿ ಇದ್ರೆ, ಸೇವಂತಿಗೆ 150 ರೂಪಾಯಿ, ಗುಲಾಬಿ 150ರಿಂದ 200ರೂಪಾಯಿಗೆ ಮಾರಾಟವಾಗುತ್ತಿದೆ.
ಬೆಳಕಿನ ಹಬ್ಬದ ವಿಶೇಷ ಎಂದೇ ಕರಿಯುವ ಹಣತೆಗಳು, ಆಕಾಶ ದೀಪ, ಹಾಗೂ ಲಕ್ಮಿಗೆ ಬಾಗಿನ ಅರ್ಪಿಸುವ ವಸ್ತುಗಳು ಮಾತ್ರ ಭರ್ಜರಿಯಾಗಿ ಮಾರಾಟವಾಗುತ್ತಿತ್ತು. ವರಮಹಾಲಕ್ಷ್ಮಿ, ಗೌರಿ-ಗಣೇಶ ಹಾಗೂ ದಸರಾ ಹಬ್ಬಗಳಿಗೆ ಹೂವುಗಳು ಅತ್ಯಗತ್ಯ.. ಹೀಗಾಗಿ ಹೂವಿನ ಬೆಲೆಗಳು ದುಬಾರಿಯಾಗಿದ್ದವು.. ಆದರೆ ದೀಪಾವಳಿಗೆ ಹೂವಿನ ಅಗತ್ಯ ಕಡಿಮೆ. ಜೊತೆಗೆ ಹಣ್ಣಿನ ಅವಶ್ಯಕತೆಯೂ ಕಮ್ಮಿ. ಹೀಗಾಗಿ ಬೆಲೆ ಅಷ್ಟೊಂದಿಲ್ಲ.
ಒಟ್ನಲ್ಲಿ ದಸರಾಕ್ಕೆ ಹೋಲಿಸಿದರೆ ಹೂವು ಹಾಗೂ ಹಣ್ಣಿನ ಬೆಲೆಯಲ್ಲಿ ಇಳಿಕೆ ಕಂಡಿದೆ. ಬೆಳಕಿನ ಹಬ್ಬಕ್ಕೆ ಗ್ರಾಹಕರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಜೊತೆಗೆ ಹಬ್ಬಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.