Sunday, January 19, 2025

ಪಾಕಿಸ್ತಾನ ವಿರುದ್ಧ ಹೋರಾಟ ಅದ್ಭುತ ಬಾಯ್ಸ್​​ ಎಂದ ಸುರೇಶ್​ ರೈನಾ

ನವದೆಹಲಿ; ವಿಶ್ವಕಪ್​ನ ಟಿ-20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಜಯಗಳಿಸಿದ ಹಿನ್ನಲೆಯಲ್ಲಿ ಮಾಜಿ ಟೀಂ ಇಂಡಿಯಾ ಆಟಗಾರ ಸುರೇಶ್​ ರೈನ್​ ಅಭಿನಂದನೆ ತಿಳಿಸಿದ್ದಾರೆ.

ಈ ಪಂದ್ಯ ಕೊನೆಯವರೆಗೂ ದವಡೆ ಬಿಗಿದಿಡಿದು ಹಿಡಿಯುವ ಪಂದ್ಯವಾಗಿದೆ. ಟೀಮ್​ ಇಂಡಿಯಾಗೆ ಜಯ ತಂದುಕೊಟ್ಟ ಆಟಗಾರರ ಸಂಪೂರ್ಣ ತಿರುವು ಆಗಿದೆ. ಎಲ್ಲಾ ಆಟಗಾರರು ಪ್ರದರ್ಶಿಸಿದ ಶಕ್ತಿ ಮತ್ತು ಹೋರಾಟದ ಮನೋಭಾವವು ಅದ್ಭುತವಾಗಿದೆ. ಅತ್ಯುತ್ತಮ ಗೆಲುವು ಸಾಧಿಸಿದ ಹುಡುಗರಿಗೆ ಅಭಿನಂದನೆಗಳು, ಜೈ ಹಿಂದ್ ಎಂದಿದ್ದಾರೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ-20 ವಿಶ್ವಕಪ್​ನ ಸೂಪರ್​ 12 ಟೀಮ್​ಗಳ ಗ್ರೂಪ್ ಎ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 4 ವಿಕೆಟ್​ಗಳ ಜಯಗಳಿಸಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ  20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 159 ರನ್​ ಕಲೆಹಾಕಿತ್ತು. ಪಾಕಿಸ್ತಾನ ನೀಡಿದ ಗುರಿ ಬೆನ್ನತ್ತಿದ ಭಾರತ ತಂಡ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 160 ರನ್​ ಗಳುಹಿಸಿತು. ಹಾರ್ದಿಕ್​ ಪಾಂಡ್ಯ 40 ರನ್​ ಹೊಡೆದರೆ, ವಿರಾಟ್​ ಕೊಹ್ಲಿ 82 ರನ್​ ಗಳಿಸಿ ಭಾರತ ಗೆಲುವು ಸಾಧಿಸಲು ಪ್ರಮುಖ ಪಾತ್ರವಹಿಸಿದರು. ಕೊನೆಯದಾಗಿ 1 ಬಾಲ್​ಗೆ 2 ರನ್​ ಬೇಕಾಗಿದ್ದಾಗ, ಪಾಕಿಸ್ತಾನ ಬೌಲರ್​​ ನವಾಜ್​ ವೈಡ್​ ಹಾಕಿದರು. ನಂತರ 1 ಬೌಲ್​ಗೆ 1 ರನ್​ ಬೇಕಾಗಿದ್ದಾಗ ಆರ್​ ಅಶ್ವಿನ್​ ಪೋರ್​​ ಹೊಡೆದು ಭಾರತವನ್ನ ಗೆಲ್ಲಿಸಿದರು.

RELATED ARTICLES

Related Articles

TRENDING ARTICLES