Friday, January 10, 2025

ವಿ. ಸೋಮಣ್ಣ ಸಚಿವನಾಗೋಕೆ ಅನ್ ಫಿಟ್ ಎಂದ ಸಿದ್ದರಾಮಯ್ಯ

ದಾವಣಗೆರೆ; ಮಹಿಳೆಗೆ ವಸತಿ ಸಚಿವ ವಿ. ಸೋಮಣ್ಣ ಕಪಾಳ ಮೋಕ್ಷ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತಾನಡಿ ಸೋಮಣ್ಣ ಸಚಿವನಾಗೋಕೆ ನಾಲಾಯಕ್ ಎಂದಿದ್ದಾರೆ.

ಚಾಮರಾಜನಗರದಲ್ಲಿ ಮಹಿಳೆಯೊಬ್ಬಳು ಹಕ್ಕುಪತ್ರ ವಿತರಣೆ ಮಾಡುವಂತೆ ಸಚಿವ ವಿ. ಸೋಮಣ್ಣ ಅವರಿಗೆ ಪ್ರಶ್ನಿಸಿದಾಗ ಆಗ ಸಚಿವರು ಕಪಾಳ ಮೋಕ್ಷ ಮಾಡಿದ್ದರು. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಒಬ್ಬ ಸಚಿವರು ಹೆಣ್ಣು ಮಗಳ ಮೇಲೆ, ಹಿಂದುಳಿದವರ ಮೇಲೆ ಕೈ ಮಾಡೋಕೆ ಅಧಿಕಾರ ಅವರಿಗೆ ಯಾರು ಕೊಟ್ಟಿದ್ದಾರೆ. ಇಂತವರಲ್ಲೆ ಮಂತ್ರಿ ಮಂಡಳದಲ್ಲಿ ಇರಬಾರದು. ತಾಳ್ಮೆ ಸಹನೆ, ಇಲ್ಲ ಅಂದ್ರೆ ಸಮಸ್ಯೆ ಪರಿಹರಿಸೋಕೆ ಆಗಿಲ್ಲ ಅಂದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದರು.

ಸರ್ಕಾರದಲ್ಲಿರುವ ಸಚಿವರಿಗೆ ತಾಳ್ಮೆ ಇರಬೇಕು. ಸಚಿವನಾಗೋಕೆ ಸೋಮಣ್ಣ ಅನ್ ಫಿಟ್ ಆಗಿದ್ದಾರೆ. ಇನ್ನು ಭಾರತ್ ಜೋಡೋ ಯಶಸ್ವಿಯಾದ ಹಿನ್ನಲೆ ಬಗ್ಗೆ ಮಾತನಾಡಿ, ಕರ್ನಾಟದಲ್ಲಿ 20 ಕ್ಕೂ ಹೆಚ್ಚು ದಿನ ಪಾದಯಾತ್ರೆ ನಡೆದಿದೆ. ನಮ್ಮ ನೀರಿಕ್ಷೆಗೂ ಮೀರಿ ಜನ ಪಾದಯಾತ್ರೆಗೆ ಸಪೋರ್ಟ್​ ಮಾಡಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಸಿಕ್ಕ ಬೆಂಬಲ ನೀರೀಕ್ಷೆಗೂ ಮೀರಿ ಇದೆ. ಬಿಜೆಪಿ ಸರ್ಕಾರ ಜನರಿಗೆ ಬೇಡವಾಗಿದೆ. ಹೀಗಾಗಿ ಜನರು ಪಾದಯಾತ್ರೆಯಲ್ಲಿ ನಿರೀಕ್ಷೆಗೂ ಮೀರಿ ಸೇರಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

RELATED ARTICLES

Related Articles

TRENDING ARTICLES