Monday, December 23, 2024

ಶೆಟ್ರ ಕಾಂತಾರಗೆ ಕ್ವೀನ್ ಕಂಗನಾ ರಣಾವತ್ ಕ್ಲೀನ್ ಬೋಲ್ಡ್..!

ಕಾಂತಾರ ನೋಡಿದ್ಮೇಲೆ ಅದರ ಬಗ್ಗೆ ಮೆಚ್ಚುಗೆಯ ಮಾತಾಡದವ್ರೇ ಇಲ್ಲ ಅನ್ನುವಂತಾಗಿದೆ. ನೂರು ಕೋಟಿ ಬಾಕ್ಸ್ ಆಫೀಸ್ ರೆಕಾರ್ಡ್​ ಬರೆದ ಶೆಟ್ರ ಪ್ರಾಜೆಕ್ಟ್​, ಇದೀಗ ಬಾಲಿವುಡ್ ಕ್ವೀನ್ ಕಂಗನಾರಿಂದ ಪ್ರಶಂಸೆಗೆ ಒಳಪಟ್ಟಿದೆ. ಹ್ಯಾಟ್ಸಪ್ ಟು ರಿಷಬ್ ಅಂತಿರೋ ಕಂಗನಾ ರಣಾವತ್, ಚಿತ್ರದ ಬಗ್ಗೆ ಬ್ಯೂಟಿಫುಲ್ ರಿವ್ಯೂ ಮಾಡಿದ್ದಾರೆ.

  • ಫ್ಯಾಮಿಲಿ ಜೊತೆ ಸಿನಿಮಾ.. ಹೊರ ಬರಕ್ಕೆ ವಾರ ಬೇಕು ಅಂದ್ರು
  • ಈ ಬಗೆಯ ಚಿತ್ರ ನೋಡೇ ಇಲ್ಲ ಅಂದ್ರಂತೆ ಕಂಗನಾ ಫ್ರೆಂಡ್ಸ್
  • ಇಂತಹ ಸಿನಿಮಾಗಳೇ ಥಿಯೇಟರ್​ಗೆ ಜನರನ್ನ ಕರೆತರೋದು

ಕಾಂತಾರದ ಕಿಚ್ಚು ವಿಶ್ವದಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಕನ್ನಡದಲ್ಲಿ ಮಾತ್ರ ವರ್ಲ್ಡ್​ವೈಡ್ ರಿಲೀಸ್ ಆದ ಈ ಸಿನಿಮಾ ಇದೀಗ ಆನ್ ಡಿಮ್ಯಾಂಡ್ ಪರಭಾಷೆಗಳಿಗೂ ಡಬ್ ಆಗಿ, ಧೂಳೆಬ್ಬಿಸ್ತಿದೆ. ಹೌದು.. ಕಂಟೆಂಟ್​ನಲ್ಲಿ ಧಮ್ ಇದ್ದು, ಮೇಕಿಂಗ್​ನಲ್ಲಿ ರಿಧಮ್ ಇದ್ರೆ ಆ ಸಿನಿಮಾ ಎಲ್ಲರ ಮನ, ಮನೆ ತಲುಪುತ್ತೆ ಅನ್ನೋದಕ್ಕೆ ಕಾಂತಾರ ಎಕ್ಸಾಂಪಲ್ ಸೆಟ್ ಮಾಡಿದೆ.

ಗಳಿಕೆಯಲ್ಲಿ ಗ್ರಾಸ್ ನೂರು ಕೋಟಿ ಬೃಹತ್ ಮೊತ್ತ ಕಲೆಹಾಕಿರೋ ಕಾಂತಾರ, ಕನ್ನಡ ಚಿತ್ರರಂಗದ ಕೀರ್ತಿಯನ್ನ ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ದಿದೆ. ರಿಷಬ್ ಶೆಟ್ಟಿ ನಟನೆ ಜೊತೆ ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತು, ಎರಡನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕರಾವಳಿ ನೆಲದ ಸೊಗಡು, ಸೊಬಗನ್ನ ಇಡೀ ವಿಶ್ವಕ್ಕೆ ಪಸರಿಸೋ ಕಾರ್ಯದಲ್ಲಿ ಯಶಸ್ವಿ ಆಗಿದ್ದಾರೆ ಶೆಟ್ರು.

ಸಿನಿಮಾ ನೋಡಿದ ಪ್ರತಿಯೊಬ್ಬರೂ ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟು ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್​ನ ಕೊಂಡಾಡ್ತಿದ್ದಾರೆ. ಮೊನ್ನೆ ನಟ ಧನುಷ್ ಕಾಂತಾರ ಕಿಕ್ ಬಗ್ಗೆ ಟ್ವೀಟ್ ಮಾಡಿದ್ರು. ಇದೀಗ ಸಿನಿಮಾ ನೋಡಿ ಕ್ಲೀನ್ ಬೋಲ್ಡ್ ಆಗಿರೋ ಬಾಲಿವುಡ್ ನಟಿ ಕಂಗನಾ ರಣಾವತ್, ವಿಡಿಯೋ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಯೆಸ್.. ನ್ಯಾಷನಲ್ ಅವಾರ್ಡ್​ ವಿನ್ನರ್ ಆಗಿರೋ ಕಂಗನಾ, ಕಲೆ ಆಧರಿಸಿ ಮಾಡಿರೋ ಸಿನಿಮಾದ ಬೆಲೆ ಅರಿತು, ಹಾಡಿ ಹೊಗಳಿದ್ದಾರೆ. ಫ್ಯಾಮಿಲಿ ಜೊತೆ ಚಿತ್ರ ವೀಕ್ಷಿಸಿದ ಬಳಿಕ, ಇದ್ರಿಂದ ಹೊರ ಬರೋಕೆ ಕನಿಷ್ಟ ಒಂದು ವಾರ ಬೇಕು ಅಂದಿದ್ದಾರೆ. ಅಷ್ಟೇ ಅಲ್ಲ, ರಿಷಬ್ ಶೆಟ್ಟಿ ಅವ್ರ ನಿರ್ದೇಶನ ಮತ್ತು ನಟನೆಗೆ ಹ್ಯಾಟ್ಸಪ್ ಹೇಳಿದ್ದಾರೆ. ಜೊತೆಗೆ ಸಿನಿಮಾ ನೋಡಿದವ್ರೆಲ್ಲಾ ಈ ಬಗೆಯ ಸಿನಿಮಾ ನೋಡೇ ಇಲ್ಲ ಅಂದ್ರು. ನಿಜಕ್ಕೂ ವ್ಹಾವ್ ಫೀಲ್ ಕೊಡ್ತು ಅಂತ ಕೊಂಡಾಡಿದ್ದಾರೆ.

ಒಟಿಟಿಗಳಿಂದಾಗಿ ಥಿಯೇಟರ್​ಗೆ ಬರೋ ಸಿನಿಪ್ರಿಯರ ಸಂಖ್ಯೆ ಕೂಡ ಗಣನೀಯವಾಗಿ ಕಡಿಮೆ ಆಗ್ತಾ ಇದೆ. ಆದ್ರೆ ಇಂತಹ ಸಿನಿಮಾಗಳೇ ಜನರನ್ನ ಥಿಯೇಟರ್​ನತ್ತ ಕರೆತರೋದು ಅನ್ನೋ ಮಾತನ್ನ ಹೇಳೋ ಮೂಲಕ ಕನ್ನಡಿಗರ ಈ ಹೊಸ ಪ್ರಯೋಗಗಕ್ಕೆ ಭರ್ಜರಿ ರಿವ್ಯೂ ರಿಪೋರ್ಟ್​ ನೀಡಿದ್ದಾರೆ. ಕೇವಲ ಒಂದು ನಿಮಿಷದ ವಿಡಿಯೋದಲ್ಲಿ ಸಾಕಷ್ಟು ವಿಚಾರಗಳನ್ನ ಬಿಚ್ಚಿಟ್ಟಿರೋ ಬಾಲಿವುಡ್ ಕ್ವೀನ್ ಕಂಗನಾ, ಮನಸಾರೆ ಮೆಚ್ಚಿ, ಹೊಗಳಿರೋದು ಪ್ರತಿಯೊಬ್ಬ ಕನ್ನಡಿಗ ಹೆಮ್ಮೆ ಪಡೋ ವಿಚಾರ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES