ಮಂಡ್ಯ : ಸಕ್ಕರೆ ನಗರ ಮಂಡ್ಯ, ಮತ್ತೊಂದು ಧರ್ಮ ದಂಗಲ್ಗೆ ಸಾಕ್ಷಿಯಾಗಿದೆ. 98 ಹಲಾಲ್ ಸರ್ಟಿಫೈಡ್ ಪದಾರ್ಥಗಳನ್ನ ಬಳಸದಂತೆ ಭಜರಂಗ ಸೇನೆ ಕರೆ ಕೊಟ್ಟಿದೆ.. ಮಂಡ್ಯ ನಗರದ ಸಿಲ್ವರ್ ಜುಬಿಲಿ ಪಾರ್ಕ್ನಲ್ಲಿ ಹಲಾಲ್ ಮುಕ್ತ ಅಭಿಯಾನಕ್ಕೆ ಚಾಲನೆ ನೀಡಲಾಯ್ತು. ಭಜರಂಗಸೇನೆ ವತಿಯಿಂದ ಹಲಾಲ್ ಮುದ್ರಿತ ಪ್ರಾಡಕ್ಟ್ಗಳನ್ನ ಕೊಳ್ಳದಂತೆ ಎಚ್ಚರಿಕೆಯ ಸಂದೇಶವನ್ನ ಸಾರಲಾಯ್ತು.
ಮಂಡ್ಯದ ಸಿಲ್ವರ್ ಜುಬಿಲಿ ಪಾರ್ಕ್ನಲ್ಲಿ ಭಜರಂಗಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು.. ಹಲಾಲ್ ಮುದ್ರಿತ ಪದಾರ್ಥಗಳನ್ನ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ರು.. ಹಲಾಲ್ ಪರವಾನಿಗೆ ತೆಗೆದುಕೊಳ್ಳಲು ಪ್ರತಿ ವರ್ಷಕ್ಕೆ 58 ಸಾವಿರ ಹಣವನ್ನ ನೀಡಬೇಕು.. ಹೀಗೆ ಕಟ್ಟೊ ಹಣ ಆರ್ಥಿಕ ಮುಗ್ಗಟ್ಟಿಗೆ ಸಮಾಜ ಬಾಹಿರ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ.. ಇದು ಭಾರತೀಯ ಆರ್ಥಿಕ ಪರಿಸ್ಥಿತಿ ಮೇಲೆ ಬಾರಿ ಪರಿಣಾಮ ಬೀರಲಿದೆ.. ಇದೊಂದು ಎಕನಾಮಿಕಲ್ ಜಿಹಾದ್ ಎಂದು ಹಿಂದೂ ಪರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ರು.. ಹಬ್ಬ ಮುಗಿದ ಬಳಿಕ ಕರಪತ್ರವನ್ನ ಹಿಡಿದು ಪ್ರತಿಯೊಬ್ಬ ಹಿಂದುಗಳ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸುತ್ತೇವೆಂದು ತಿಳಿಸಿದ್ರು.
ಒಟ್ಟಾರೆ ಮತ್ತೊಂದು ಧರ್ಮ ದಂಗಲ್ಗೆ ಸಕ್ಕರೆ ನಗರಿ ಮಂಡ್ಯ ಸಾಕ್ಷಿಯಾಯ್ತು.. ಇನ್ನು ಮುಂಬರುವ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರ ಯಾವ ರೀತಿ ಪಿಎಫ್ಐ ಬ್ಯಾನ್ ಮಾಡ್ತೊ ಅದೇ ರೀತಿ ಹಲಾಲ್ ಪ್ರಾಡಕ್ಟ್ಗಳನ್ನ ಸಹ ಬ್ಯಾನ್ ಮಾಡ್ಬೇಕು ಎಂಬ ಕೂಗೂ ಹೆಚ್ಚಾಗಿದೆ.
ಬಾಲಕೃಷ್ಣ ಜೀಗುಂಡಿಪಟ್ಟಣ, ಪವರ್ ಟಿವಿ, ಮಂಡ್ಯ