Wednesday, January 22, 2025

ಟಿ-20 ಪಂದ್ಯ ವೀಕ್ಷಿಸಿ, ಕಿಂಗ್​ ಯಾವತ್ತು ಕಿಂಗ್​ ಆಗಿಯೇ ಇರುತ್ತಾನೆ; ಕಿಚ್ಚ ಸುದೀಪ್​

ಆಸ್ಟ್ರೇಲಿಯಾ; ಪಾಕಿಸ್ತಾನ ವಿರುದ್ಧ ವಿಶ್ವಕಪ್​ ಟಿ-20 ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿದ ಪಂದ್ಯವನ್ನ ನಟ ಸುದೀಪ್​ ದಂಪತಿ ವೀಕ್ಷಣೆ ಮಾಡಿದ್ದಾರೆ.

ಇಂದು ಆಸ್ಟ್ರೇಲಿಯಾದ ಮೇಲ್ಬರ್ನ್​​ನಲ್ಲಿ ನಡೆದ ಗ್ರೂಪ್​ ಎ ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನ ಭಾರತ ಎದುರಿಸಿತು. ಈ ಪಂದ್ಯವನ್ನ ಮೇಲ್ಬರ್ನ್​​ನ ಮೈದಾನದಲ್ಲಿ ಸುದೀಪ್​ ದಂಪತಿ ನೋಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿದ ಸುದೀಪ್​, ಮಹಾರಾಜನು ಎಲ್ಲಿದ್ದರು ಮಹಾರಾಜನೇ ತಾನೆ. ಹಾಗೇ ಕಿಂಗ್​ ಯಾವತ್ತು ಕಿಂಗ್​ ಆಗಿಯೇ ಇರುತ್ತಾನೆ ಎಂದು ಸುದೀಪ್​ ಟ್ವೀಟ್​ ಮಾಡಿ ಕೊಹ್ಲಿ ಅವರನ್ನ ಗುಣಗಾಣ ಮಾಡಿದ್ದಾರೆ.

ಅಲ್ಲದೇ, ಇದನ್ನು ಸ್ಟೇಡಿಯಂನಲ್ಲಿ ನೇರಪ್ರಸಾರವಾಗಿ ನೋಡಿದ್ದು ಒಂದು ಗೌರವ ತಂದಿದೆ. ಹ್ಯಾಟ್ಸ್​ ಆಫ್​ ಕೊಹ್ಲಿ, ಹಾರ್ದಿಕ್​ ಪಾಂಡ್ಯ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಇಂದು ನಡೆದ ಟಿ-20 ಪಂದ್ಯದಲ್ಲಿ ಭಾರತ ತಂಡ ನಾಲ್ಕು ವಿಕೆಟ್​ಗಳಿಂದ ಗೆಲುವು ಸಾಧಿಸಿತು. ವಿರಾಟ್​ ಕೊಹ್ಲಿ 82 ರನ್​ ಗಳಿಸಿ ಭಾರತ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು.

RELATED ARTICLES

Related Articles

TRENDING ARTICLES