Monday, December 23, 2024

ಭಾರತಕ್ಕೆ ಭರ್ಜರಿ ಜಯ; ಪಟಾಕಿ ಸಿಡಿಸಿ ವಿಧಾನ ಪರಿಷತ್ ಸದಸ್ಯ ಸಂಭ್ರಮ

ಶಿವಮೊಗ್ಗ; ಪಾಕಿಸ್ತಾನ ವಿರುದ್ಧದ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿದ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ಸಂಭ್ರಮಾಚರಣೆ ಮಾಡಲಾಯಿತು.

ಎಲ್ಲೆಡೆ ದೀಪಗಳ ಹಬ್ಬ ದೀಪಾವಳಿ ಹಬ್ಬದ ಜೊತೆಗೆ ಭಾರತದ ಜಯಭೇರಿಗೆ ಶಿವಮೊಗ್ಗದ ನಗರದ ಮಲವಗೊಪ್ಪ ಗ್ರಾಮದ ಗ್ರಾಮಸ್ಥರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಇನ್ನು ಈ ಸಂಭ್ರಮಾಚರಣೆಯಲ್ಲಿ ಪುಟಾಣಿಗಳು ಕೂಡ ಭಾಗಿದ್ದು ವಿಶೇಷವಾಗಿತ್ತು. ಅದರಂತೆ ಭಾರತ ಪಾಕಿಸ್ತಾನ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಸ್ನೇಹಿತರೊಂದಿಗೆ ಪಟಾಕಿ ಸಿಡಿಸಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್‌ ಅವರು ತಮ್ಮ ಕಚೇರಿ ಆವರಣದಲ್ಲಿ ಸಂಭ್ರಮಿಸಿದರು.

ಮೊದಲು ಬ್ಯಾಟಿಂಗ್​ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್​ಗಳಲ್ಲಿ 159 ರನ್​ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ ವಿರಾಟ್​ ಕೊಹ್ಲಿ ಭರ್ಜರಿ 82 ರನ್​ ನೆರವಿನೊಂದಿಗೆ ಭಾರತ ತಂಡ 160 ರನ್​ ಕಲೆಹಾಕಿತು. ಈ ಮೂಲ ಭಾರತ ತಂಡ ಜಯದ ದಡ ಸೇರಿತು.

RELATED ARTICLES

Related Articles

TRENDING ARTICLES