Thursday, January 23, 2025

ವಿರಾಟ್ ವೀರಾವೇಶಕ್ಕೆ ಪಾಕಿಸ್ತಾನ ಧೂಳಿಪಟ; ಭಾರತಕ್ಕೆ ಭರ್ಜರಿ ಜಯ

ಆಸ್ಟ್ರೇಲಿಯಾ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ವಿಶ್ವಕಪ್​ ಟಿ-20 ಪಂದ್ಯದಲ್ಲಿ ವಿರಾಟ್​ ವಿರಾವೇಶಕ್ಕೆ, ಪಾಂಡ್ಯ ಆರ್ಭಟಕ್ಕೆ ಭಾರತ ಭರ್ಜರಿ ಜಯಗಳಿಸಿದೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ-20 ವಿಶ್ವಕಪ್​ನ ಸೂಪರ್​ 12 ಟೀಮ್​ಗಳ ಗ್ರೂಪ್ ಎ ಮೊದಲ ಪಂದ್ಯದಲ್ಲಿ ಪಾಕಿಸ್ತಾನ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 159 ರನ್​ ಕಲೆಹಾಕಿತು.

ಪಾಕಿಸ್ತಾನ ಪರ ಇಫ್ತಿಕರ್ ಅಹಮದ್ 51, ಶಾನ್ ಮಸೂದ್ 30 ರನ್​ಗಳಿಸಿ ಪಾಕಿಸ್ತಾನ ತಂಡ ಪರ ಉತ್ತಮ ರನ್​ ಕಲೆಹಾಕುವಲ್ಲಿ ನೆರವಾದರೆ, ಭಾರತದ ಪರ ಹಾರ್ದಿಕ್​ ಪಾಂಡ್ಯ 3, ಹರ್ಷದಿಪ್​ ಸಿಂಗ್​ 3, ಮೊಹಮ್ಮದ್ ಶಮಿ 1, ಭುವನೇಶ್ವರ ಕುಮಾರ್​​ 1 ವಿಕೆಟ್ ಪಡೆದು ಮಿಂಚಿದರು.

ಪಾಕಿಸ್ತಾನ ನೀಡಿದ ಗುರಿ ಬೆನ್ನತ್ತಿದ ಭಾರತ ತಂಡ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 160 ರನ್​ ಗಳುಹಿಸಿತು. ಹಾರ್ದಿಕ್​ ಪಾಂಡ್ಯ 40 ರನ್​ ಹೊಡೆದರೆ, ವಿರಾಟ್​ ಕೊಹ್ಲಿ 82 ರನ್​ ಗಳಿಸಿ ಭಾರತ ಗೆಲುವು ಸಾಧಿಸಲು ಪ್ರಮುಖ ಪಾತ್ರವಹಿಸಿದರು. ಕೊನೆಯದಾಗಿ 1 ಬಾಲ್​ಗೆ 2 ರನ್​ ಬೇಕಾಗಿದ್ದಾಗ, ಪಾಕಿಸ್ತಾನ ಬೌಲರ್​​ ನವಾಜ್​ ವೈಡ್​ ಹಾಕಿದರು. ನಂತರ 1 ಬೌಲ್​ಗೆ 1 ರನ್​ ಬೇಕಾಗಿದ್ದಾಗ ಆರ್​ ಅಶ್ವಿನ್​ ಪೋರ್​​ ಹೊಡೆದು ಭಾರತವನ್ನ ಗೆಲ್ಲಿಸಿದರು.

ಗ್ರೂಪ್​ ‘ಎ’ ತಂಡಗಳು

ಬಾಂಗ್ಲಾದೇಶ, ಭಾರತ, ನೆದರ್ಲ್ಯಾಂಡ್ಸ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಜಿಂಬಾಬ್ವೆ

ಗ್ರೂಪ್​ ‘ಬಿ’ ತಂಡಗಳು

ಆಸ್ಟ್ರೇಲಿಯಾ, ಇಂಗ್ಲೆಂಡ್, ಐರ್ಲೆಂಡ್, ಶ್ರೀಲಂಕಾ, ನ್ಯೂಜಿಲ್ಯಾಂಡ್, ಅಫ್ಘಾನಿಸ್ತಾನ

RELATED ARTICLES

Related Articles

TRENDING ARTICLES