Thursday, January 23, 2025

ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಶಾಸಕ ಆನಂದ ಮಾಮನಿ ಅಂತ್ಯಕ್ರಿಯೆ

ಬೆಳಗಾವಿ; ಸವದತ್ತಿ ಮತಕ್ಷೇತ್ರ ಶಾಸಕ ಹಾಗೂ ವಿಧಾನ ಸಭೆಯ ಉಪ ಸಭಾಪತಿ ಆನಂದ ಮಾಮನಿ ವಿಧಿವಶರಾಗಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವರು, ಶಾಸಕರು ಸೇರಿದಂತೆ ಸಾವಿರಾರು ಬೆಂಬಲಿಗರು ಆಪ್ತರು ಅಂತಿಮ ದರ್ಶನ ಪಡೆದರು. ಕ್ಷೇತ್ರದ ಬೆಂಬಲಿಗರು ಆಪ್ತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದ್ದು ಪತ್ನಿ ಹಾಗೂ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.

ಸವದತ್ತಿ ಮತಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಹ್ಯಾಟ್ರಿಕ್ ಸಾಧಿಸಿದ ಆನಂದ ಉರ್ಫ್ ವಿಶ್ವನಾಥ ಚಂದ್ರಶೇಖರ ಮಾಮನ ಶನಿವಾರ ತಡರಾತ್ರಿಯಲ್ಲಿ ವಿಧಿವಶರಾಗಿದ್ದಾರೆ. ಕಳೆದ ಒಂದು ತಿಂಗಳಿಂದ ಅನಾರೋಗ್ಯ ಹಿನ್ನಲೆಯಲ್ಲಿ ಬೆಂಗಳೂರು ಆಸ್ಪತ್ರೆಯಲ್ಲಿ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದ ಆನಂದ ಮಾಮನಿ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನಲ್ಲಿ ನಿಧನರಾದರು. ಹಲವು ದಿನಗಳಿಂದ ಲೀವರ ಸಮಸ್ಯೆಯಿಂದ ಬಳಲುತ್ತಿದ್ದ ಆನಂದ ಮಾಮನಿ ತುರ್ತಾಗಿ ಚೆನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದ ಅಲ್ಲಿಂದ ಬೆಂಗಳೂರು ಮಣಿಪಾಲ್ ಆಸ್ಪತ್ರೆ ಗೆ ಶಿಪ್ಟ್ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೇ ಇಹಲೋಕವನ್ನು ತ್ಯಜಿಸಿದರು‌.

ಇನ್ನು ಬೆಂಗಳೂರು ನಿಂದ ರಸ್ತೆ ಮಾರ್ಗವಾಗಿ ಸವದತ್ತಿ ಪಟ್ಟಣಕ್ಕೆ ಪಾರ್ಥಿವ ಶರೀರ ಆಗಿಮಿಸಿತು. ಪಟ್ಟಣದಲ್ಲಿರುವ ಮಾಮನಿ ಕುಟುಂಬದ ಸದಸ್ಯರು ವೀರಶೈವ ಲಿಂಗಾಯತ ವಿಧಿ ವಿಧಾನಗಳ ಪೂಜಾ ಕೈಂಖರ್ಯ ನೆರವೇರಿಸಿದ್ರು. ಈ ವೇಳೆ ಪತ್ನಿ, ಮಗ ಮಗಳು ಹಾಗೂ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ಮಾಮನಿ ಮನೆಯಿಂದ ರಸ್ತೆ ಮಾರ್ಗವಾಗಿ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲಾಯಿತು. ಈ ವೇಳೆ ಸಚಿವ ಸಿ ಸಿ ಪಾಟೀಲ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ, ಸಂಸದ ಅಣ್ಣಾಸಾಬ್ ಜೊಲ್ಲೆ, ವಚನಾನಂದ ಸ್ವಾಮೀಜಿ , ಸೇರಿದಂತೆ ಹಲವು ಮಠಾಧಿಶರು, ಅಭಿಮಾನಿಗಳು ಬೆಂಬಲಿಗರು, ಅಂತಿಮ ದರ್ಶನ ಪಡೆದರು.

ಸವದತ್ತಿ ತಾಲೂಕು ಕ್ರೀಡಾಂಗಣದಲ್ಲಿ ಸಾವರ್ಜನಿಕರಿಗೆ ಅಂತಿಮ ದರ್ಶನ ಪಡೆಯಲು ಬೆಳಗಾವಿ ಜಿಲ್ಲಾಡಳಿತ ಸಿದ್ದತೆ ಮಾಡಿತ್ತು ಸರದಿ ಸಾಲಿನಲ್ಲಿ ಬಂದು ಸಾವಿರಾರು ಜನರು ತಮ್ಮ ನೆಚ್ಚಿನ ನಾಯಕನ ದರ್ಶನ ಪಡೆದ್ರು ಸಂಜೆ ವೇಳೆಗೆ ಪಾರ್ಥಿವ ಶರಿರವನ್ನು ತೆರದ ವಾಹನದಲ್ಲಿ ಮೇರವಣಿಗೆ ಮೂಲಕ ಅಂತ್ಯಕ್ರಿಯೆ ನಡೆಯೋ ಸ್ಥಳಕ್ಕೆ 2 ಕಿಮೀ ಮೇರವಣಿಗೆ ಮಾಡಲಾಯಿತು. ಮಾಮನಿ ಒಡೆತನದ ಚಂದ್ರಮಾ ಫಾರ್ಮ್‌ ಹೌಸ್ ನಲ್ಲಿ ಆನಂದ ಮಾಮನಿ ತಂದೆ ಚಂದ್ರಶೇಖರ್ ಮಾಮನಿ ಸಮಾಧಿ ಪಕ್ಕದಲ್ಲಿ ಆನಂಧ ಮಾಮನಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಲಾಯಿತು. ವೀರಶೈವ ಲಿಂಗಾಯತ ವಿಧಿವಿಧಾನದಂತೆ ಅಂತ್ಯಕ್ರಿಯೆ ನೆರವೆರಿತು.

ಇನ್ನು ಸಭಾಪತಿ ಆನಂದ ಮಾಮನಿ ರಾಜಕೀಯ ಹಿನ್ನಲೆ ನೋಡೊದಾದ್ರೆ. ಜನವರಿ 18, 1966 ರಲ್ಲಿ ಹಿಂದೂ ವೀರಶೈವ ಲಿಂಗಾಯತ ಸಮಯದಲ್ಲಿ ಜನಿಸಿದ ಅವರು ಬಿ. ಕಾಂ ಪದವಿಧರರಾಗಿದ್ದಾರೆ. ರಾಜಕೀಯ ಕುಟುಂಬ ಹಿನ್ನಲೆ ಹೊಂದಿದ ಅವರು
2008-2013 ರಲ್ಲಿ ಬಿಜೆಪಿ ಪಕ್ಷದಿಂದ ಮೊದಲ ಬಾರಿಗೆ ಸವದತ್ತಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ. ಈ ಅವಧಿಯಲ್ಲಿ ಮತ್ತೊಮ್ಮೆ ಶ್ರೀ ರೇಣುಕಾ ಯೆಲ್ಲಮ್ಮ ದೇವಸ್ತಾನ ವೇವಸ್ಥಾಪನಾ ಸಮಿತಿ, ಯಲ್ಲಮ್ಮನಗುಡ್ಡ (2008 ರಿಂದ 2013) ಅಧ್ಯಕ್ಷರಾದರು. ಅವರು ಮತ್ತೆ 2013-2018 ರಲ್ಲಿ ಎರಡನೇ ಬಾರಿಗೆ ಮತ್ತು 2018 ರಲ್ಲಿ ಮೂರನೇ ಬಾರಿಗೆ ಆಯ್ಕೆಯಾದರು.

13 ಜೂನ್ 2015 ರಂದು ಅವರು ಡಿ ಸಿ ಸಿ ಬ್ಯಾಂಕ್ ಬೆಳಗಾವಿ ನಿರ್ದೇಶಕರಾಗಿ ಆಯ್ಕೆಯಾದರು. 23-03-2020 ರಲ್ಲಿ ಅವರು ಕರ್ನಾಟಕ ವಿಧಾನಸಭೆಯ ಉಪ ಸ್ಪೀಕರ್ ಆದರು. ಇನ್ನು ಸವದತ್ತಿ ಕ್ಷೇತ್ರದಲ್ಲಿ ಮೂರು ಬಾರಿಗೆ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇನ್ನು ದಿ. ಮಾಮನಿ ಅವರ ಪಾರ್ಥಿವ ಶರೀರ ಸಾರ್ವಜನಿಕರ ಅಂತಿಮ ತಾಲೂಕು ಕ್ರೀಡಾಂಗಣದಲ್ಲಿ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು . ಬಳಿಕ ಸವದತ್ತಿ -ಯಡ್ರಾಂವಿ ರಸ್ತೆಯಲ್ಲಿರುವ ಮಾಮನಿ ಒಡೆತನದ ಚಂದ್ರಮ ಫಾರ್ಮ್ ಹೌಸ್ ನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯ ಪ್ರಕಾರ ಅಂತ್ಯಕ್ರಿಯೆ ನೆರೆವೆರಿಸಲಾಯಿತು. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಿತು. ಕುಟುಂಬ ಸದಸ್ಯರು, ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಆಪ್ತರು ಬೆಂಬಲಿಗರು‌ ಸೇರಿದಂತೆ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಆನಂದ ಮಾಮನಿ ತಂದೆ ಚಂದ್ರಶೇಖರ ಮಾಮನಿ ಕೂಡ ಉಪ ಸಭಾಪತಿಯಾಗಿದ್ದು ಅವರು ಕೂಡ ಉಪ ಸಭಾಪತಿ ಸ್ಥಾನದಲ್ಲಿರುವಾಗಲೇ ಸಾವನ್ನಪ್ಪಿದರೆ ಇತ್ತ ಮಗ ಆನಂದ ಮಾಮನಿ ಕೂಡ ಉಪ ಸಭಾಪತಿ ಸ್ಥಾನದಲ್ಲಿರುವಾಗಲೇ ಸಾವನ್ನಪ್ಪಿದ್ದು ಕ್ಷೇತ್ರದ ಜನರು ಕಣ್ಣೀರು ತೊರೆಯುವಂತಾಗಿದೆ‌. ಮಾಮನಿ ನಿಧನದ ಸುದ್ದಿ ಕೇಳಿದ ಕ್ಷೇತ್ರದ ಜನರಲ್ಲಿ
ಭಾವ ಮೂಡಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಅಣ್ಣಪ್ಪ ಬಾರ್ಕಿ ಪವರ್ ಟಿವಿ ಬೆಳಗಾವಿ

RELATED ARTICLES

Related Articles

TRENDING ARTICLES