Friday, January 3, 2025

ಕೆಜಿಎಫ್ ಬಾಬುರನ್ನ ಜೆಡಿಎಸ್​ಗೆ ಆಹ್ವಾನಿಸಿದ ಸಿ.ಎಂ ಇಬ್ರಾಹಿಂ

ಬೆಂಗಳೂರು: ಉದ್ಯಮಿ, ಕಾಂಗ್ರೆಸ್​ ಮುಖಂಡ ಕೆಜಿಎಫ್ ಬಾಬು ನಿವಾಸಕ್ಕೆ ಇಂದು ಜೆಡಿಎಸ್​ ರಾಜ್ಯಧ್ಯಕ್ಷ ಸಿ.ಎಂ ಇಬ್ರಾಹಿಂ ಭೇಟಿ ನೀಡಿದ್ದಾರೆ.

ವಸಂತನಗರದಲ್ಲಿರೋ ಕೆಜಿಎಫ್ ಬಾಬು ನಿವಾಸಕ್ಕೆ ಇಂದು ಭೇಟಿ ನೀಡಿ ಕೆಜಿಎಫ್ ಬಾಬುರನ್ನ ಜೆಡಿಎಸ್ ಪಕ್ಷಕ್ಕೆ ಆಹ್ವಾನ ಮಾಡಿದ್ದಾರೆ. ಈಗಾಗಲೇ ಕಾಂಗ್ರೆಸ್​ನ 60 ಕ್ಷೇತ್ರಗಳಲ್ಲಿ ಭಾರಿ ಪೈಪೋಟಿ ನೀಡಲು ಸಿದ್ದಗೊಂಡಿದೆ. ಹೀಗಾಗಿ ಕೆಜಿಎಫ್ ಬಾಬುಗೆ ಜೆಡಿಎಸ್ ಸೇರ್ಪಡೆಗೊಳ್ಳುವಂತೆ ಸಿಎಂ ಇಬ್ರಾಹಿಂ ಆಹ್ವಾನ ನೀಡಿದ್ದಾರೆ.

ಕೆಜಿಎಫ್ ಬಾಬು ನಿವಾಸಕ್ಕೆ ಸಿಎಂ ಇಬ್ರಾಹಿಂ ಭೇಟಿ ಮಾತುಕತೆ ನಡೆಸಿದರು. ಚಿಕ್ಕಪೇಟೆ ಕ್ಷೇತ್ರದಲ್ಲಿ ಕೆಜಿಎಫ್​ ಬಾಬು ಕಾಂಗ್ರೆಸ್ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ. ಇದುವರೆಗೆ ಕೆಜಿಎಫ್ ಬಾಬುಗೆ ಟಿಕೇಟ್ ಖಚಿತಪಡಿಸದ ಹಿನ್ನೆಲೆಯಲ್ಲಿ ಜೆಡಿಎಸ್ ಸೇರ್ಪಡೆ ಬಗ್ಗೆ ಕೆಜಿಎಫ್ ಬಾಬು ಆಸಕ್ತಿ  ಹೊಂದಿದ್ದಾರೆ.

ಇದರಲ್ಲಿ ಮೊತ್ತೊಂದು ವಿಚಾರ ಅಂದ್ರೆ, ಕೆಜಿಎಫ್​ ಬಾಬು ಅವರೇ ಖುದ್ದಾಗಿ ತಮ್ಮ ಕಾರು ಕಳುಹಿಸಿ ಈ ಬಗ್ಗೆ ಮಾತುಕತೆಗೆ ಆಹ್ವಾನಿಸಿದ್ದರು ಎನ್ನಲಾಗಿದೆ.

RELATED ARTICLES

Related Articles

TRENDING ARTICLES