Monday, December 23, 2024

ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪೇಜಾವರ ಶ್ರೀ ಭೇಟಿ..!

ಮಂಡ್ಯ: ಜಿಲ್ಲೆಯ ಮದ್ದೂರಿನ ಪ್ರಸಿದ್ಧ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಉಡುಪಿಯ ಪೇಜಾವರ ಶ್ರೀಗಳು ಭೇಟಿ ನೀಡಿದ್ದಾರೆ. ‌

ದೇವಸ್ಥಾನಕ್ಕೆ ಭೇಟಿ ನೀಡಿದ ಪೇಜಾವರ ಶ್ರೀಗಳನ್ನ ಅಭಿನಂದಿಸಿದ ದೇವಾಲಯದ ಅರ್ಚಕರು ದೇಚಸ್ಥಾನಕ್ಕೆ ಶ್ರೀಗಳನ್ನು ಬರಮಾಡಿಕೊಂಡಿದ್ದಾರೆ. ದೇವರ ದರ್ಶನ ಪಡೆದ ಉಡುಪಿ ಮಠದ ಶ್ರೀಗಳು ದೇವರ ದರ್ಶನ ಬಳಿಕ ಭಕ್ತರು ಹಾಗೂ ಆಡಳಿತ ಮಂಡಳಿಯ ಜೊತೆ ಮಾತುಕತೆ ನಡೆಸಿದ್ದಾರೆ.

ದೇವಸ್ಥಾನದ ಆವರಣದಲ್ಲಿರುವ ನೀರಿರುವ ಈ ಜಲಕ್ಕೆ ವಿಶೇಷ ಮಹತ್ವವಿದೆ. ಉಸಿರಿರುವ ಈ ಸ್ಥಳವನ್ನು ಸರ್ಕಾರ ವಿಶೇಷ ಅನುದಾನದಲ್ಲಿ ಅಭಿವೃದ್ಧಿ ಪಡಿಸಬೇಕು. ಸರ್ಕಾರ ಈ ಕೂಡಲೇ ಕ್ರಮ ಕೈಗೊಂಡು ಅಭಿವೃದ್ಧಿ ಪಡಿಸಿ ಎಂದು ಶ್ರೀಗಳು ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES