ಆಸ್ಟ್ರೇಲಿಯಾ; ಸಾಂಪ್ರದಾಯಿಕ ಎದುರಾಗಳಿ, ಬದ್ಧ ವೈರಿ ಪಾಕಿಸ್ತಾನ ತಂಡದ ವಿರುದ್ಧ ಐಸಿಸಿ ವಿಶ್ವಕಪ್ನ ಗ್ರೂಪ್ ‘ಬಿ’ಯ ಮೊದಲ ಟಿ-20 ಪಂದ್ಯ ಟೀಂ ಇಂಡಿಯಾ ನಾಳೆ ಆಡಲಿದ್ದು, ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯದ ಮೇಲೆ ಕಣ್ಣಿಟ್ಟಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ನಾಳೆ (ಭಾನುವಾರ) ಐಸಿಸಿ ಟಿ-20 ವಿಶ್ವಕಪ್ ಪರಸ್ಪರ ಸೆಣಸಾಟ ನಡೆಸಲಿವೆ. ಈ ಪಂದ್ಯವು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ 1,30 ಕ್ಕೆ ಈ ಪಂದ್ಯ ಆರಂಭವಾಗಲಿದೆ. ಇನ್ನು ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿವೆ.
ಪಾಕಿಸ್ತಾನ ಹಾಗೂ ಭಾರತ ಈ ವರ್ಷದ ಏಷ್ಯಾ ಕಪ್ನಲ್ಲಿ ಪರಸ್ಪರ ಪಂದ್ಯ ಆಡಿದ್ದವು. ಇದರಲ್ಲಿ ಒಂದು ಪಂದ್ಯ ಭಾರತ ಗೆಲುವು ಸಾಧಿಸಿದರೆ, ಇನ್ನೊಂದು ಪಂದ್ಯದಲ್ಲಿ ಪಾಕಿಸ್ತಾನ ಗೆಲುವಿನ ನಗೆ ಬೀರಿತ್ತು. ಈಗ ಮತ್ತೆ ಎರಡು ತಂಡಗಳ ನಡುವೆ ಪಂದ್ಯ ನಾಳೆ ನಡೆಯಲಿದ್ದು, ಈ ಪಂದ್ಯದ ಮೇಲೆ ವಿಶ್ವದ ನಾನಾ ಕಣ್ಣುಗಳು ಬಿದ್ದಿವೆ.
ಭಾರತ ತಂಡವನ್ನ ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಪಾಕಿಸ್ತಾನ ತಂಡವನ್ನ ಬಾಬರ್ ಅಜಮ್ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಗ್ರೂಪ್ ಬಿ ತಂಡದಲ್ಲಿ ಭಾರತ, ಪಾಕಿಸ್ಥಾನ, ಬಾಂಗ್ಲಾದೇಶ, ನೆದಲ್ಯಾಂಡ್ಸ್, ಸೌತ್ ಆಫ್ರೀಕಾ, ಜಿಂಬಾಬ್ವೆ ತಂಡ ಇವೆ.
ಇನ್ನು ಗ್ರೂಪ್ ಎ ತಂಡಗಳಲ್ಲಿ ನ್ಯೂಜಿಲ್ಯಾಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ಅಪ್ಘಾನಿಸ್ತಾನ, ಐರ್ಲೇಂಡ್ ಇವೆ.