Sunday, December 22, 2024

‘ಭಾರತ್​ ಜೋಡೋ’ಗೆ ಜೋಡಿಯಾದ ಪದ್ಮಾವತಿ

ರಾಯಚೂರು; ಇಷ್ಟು ದಿನ ರಾಜಕೀಯದಿಂದ ದೂರ ಆಗಿ, ಸಿನಿಮಾ ಕಾರ್ಯಕ್ರಮಗಳಲ್ಲಿ ಮರಳಿ ಕಾಣಿಸಿಕೊಂಡದ್ದ ಮೋಹಕ ತಾರೆ ರಮ್ಯಾ ಈಗ ದಿಢೀರಾಗಿ ಭಾರತ್​ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್​ ಜೋಡೋ ಯಾತ್ರೆ ಆರಂಭವಾಗಿದ್ದು, ಈಗಾಗಲೇ ಈ ಯಾತ್ರೆ 45 ನೇ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯದ ರಾಯಚೂರಿನ ಈ ಯಾತ್ರೆ 16 ದಿನಕ್ಕೆ ಕಾಲಿಟ್ಟಿದೆ.

ಈ ಮೊದಲು ಮಂಡ್ಯದ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದ ರಮ್ಯಾ, ತದ ನಂತರ ದಿನಗಳಲ್ಲಿ ಸೋಲು ಅನುಭವಿಸಿ, ರಾಷ್ಟ್ರಿಯ ಕಾಂಗ್ರೆಸ್​​ನಲ್ಲಿ ಹಾಗೂ ರಾಹುಲ್​ ಗಾಂಧಿ ಅವರ ಅತ್ಯಾಪ್ತ ಬಳಗದಲ್ಲಿ ರಮ್ಯಾ ಗುರುತಿಸಿಕೊಂಡಿದ್ದಳು.

ಬಳಿಕ ರಾಜಕೀಯದಲ್ಲಾದ ಬದಲಾವಣೆ ದಿನಗಳಲ್ಲಿ ಕಾಂಗ್ರೆಸ್​ನಿಂದ ದೂರ ಉಳಿದ ರಮ್ಯಾ, ನಂತರ ದಿನಗಳಲ್ಲಿ ವಿದೇಶಕ್ಕೆ ಹಾರಿ ರಮ್ಯಾ ಅವರು ರಾಜಕೀಯ, ಸಿನಿಮಾದಿಂದ ದೂರ ಉಳಿದರು. ಅಲ್ಲದೇ, ಸಾಮಾಜಿಕ ಜಾಲತಾಣಗಳಿಂದ ಸಹ ದೂರ ಉಳಿದು ರಾಜಕೀಯ ಅಭಿಮಾನಿಗಳಿಗೆ ಶಾಕ್​ ನೀಡಿದ್ದರು.

ಈಗ ಮತ್ತೆ ರಮ್ಯಾ ಇಂದು ರಾಯಚೂರಿನ ಭಾರತ್​ ಜೋಡೋಯಾತ್ರೆಯಲ್ಲಿ ಪಾಲ್ಗೊಂಡು, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಜತೆಗೆ ಹೆಜ್ಜೆಹಾಕಿದರು.

RELATED ARTICLES

Related Articles

TRENDING ARTICLES