Monday, December 23, 2024

ಪೇ ಸಿಎಂ ಪೋಸ್ಟರ್ ಅಂಟಿಸಿದ ಐವರಿಗೆ ಮತ್ತೆ ನೋಟಿಸ್​

ಬೆಂಗಳೂರು: ದೇಶ ಮಟ್ಟದಲ್ಲಿ ಸುದ್ದಿ ಮಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರ ಆಡಳಿತ ವಿರುದ್ಧ ಪೇ ಸಿಎಂ ಪೋಸ್ಟರ್​ ಅಭಿಯಾನ ಕಾಂಗ್ರೆಸ್​ ಮಾಡಿದ ಹಿನ್ನಲೆಯಲ್ಲಿ ಈಗ ಮತ್ತೆ ಐವರು ಕಾಂಗ್ರೆಸ್​ ಕಾರ್ಯಕರ್ತರಿಗೆ ನೋಟಿಸ್​ ನೀಡಲಾಗಿದೆ.

ಸಿಸಿಬಿ ಪೊಲೀಸ್​ರಿಂದ ಕಾಂಗ್ರೆಸ್​ ಸಾಮಾಜಿಕ ಜಾಲತಾಣ ಸಿಬ್ಬಂದಿಗಳಿಗೆ ನೊಟೀಸ್ ನೀಡಲಾಗಿದೆ. ಅಕ್ಟೋಬರ್​ 25 ರಂದು‌ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಎರಡು ಬಾರಿ ಸಿಸಿಬಿ ನೊಟೀಸ್ ನೀಡಿತ್ತು. ಆದರೆ ಸಿಸಿಬಿ ವಿಚಾರಣೆಗೆ ಕೈ ಕಾರ್ಯಕರ್ತರು ಗೈರಾಗಿದ್ದರು.

ಹೀಗಾಗಿ ಈಗ ಮೂರನೇ ಬಾರಿ ಕಾಂಗ್ರೆಸ್​ ಸಾಮಜಿಕ ಜಾಲತಾಣ ಸಿಬ್ಬಂದಿಗಳಿಗೆ ಸಿಸಿಬಿ ಪೊಲೀಸರು ನೊಟೀಸ್ ನೀಡಿದ್ದಾರೆ. ಸಿಎಂ ವಿರುದ್ಧ ಪೇ ಸಿಎಂ ಪೊಸ್ಟೋರ್​ ಅಂಟಿಸಿದ್ದ ಕೆಪಿಸಿಸಿ ಸೋಶಿಯಲ್ ಮಿಡಿಯಾ ಸಿಬ್ಬಂದಿ ಸಂಜಯ್, ಸಿದ್ದಯ್ಯ, ವಿನೋದ್ ಕುಮಾರ್, ಮದನ್ ಗೋಪಾಲ್, ವಿಶ್ವಮೂರ್ತಿಗೆ ಸಿಸಿಬಿಯಿಂದ ನೊಟೀಸ್ ನೀಡಲಾಗಿದೆ.

RELATED ARTICLES

Related Articles

TRENDING ARTICLES