ಮಂಗಳೂರು : ತುಳು ನಾಡಿನ ಅಥವಾ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲ ಸ್ವಭಾವ ಅರಿಯದೇ ಮಾತಾನಾಡಿದರೆ ಅದು ಬೇರೆಯದೇ ಆಗುತ್ತೆ ಎಂದು ಡಾ ಡಿ ವೀರೇಂದ್ರ ಹೆಗ್ಗಡೆ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮದ ಭಾಗ ಹೌದೋ ಅಲ್ಲವೋ ಅದು ಗೊತ್ತಿಲ್ಲ. ತುಳುನಾಡಿನ ಅಥವಾ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲ ಸ್ವಭಾವ ಅರಿಯದೇ ಮಾತಾನಾಡಿದರೆ ಅದು ಬೇರೆಯದೇ ಆಗುತ್ತೆ. ಧರ್ಮದ ಮೂಲವನ್ನು ಹುಡುಕಿ ಹೋದರೆ ಎಲ್ಲೂ ಸಿಗುವುದಿಲ್ಲ. ನಮ್ಮ ನಂಬಿಕೆ ಆಚರಣೆ ನಡವಳಿಕೆಗಳು ಸ್ವಾಭಾವಿಕವಾಗಿ ನಮ್ಮಲ್ಲಿ ಬೆಳೆದು ಬಂದಿವೆ ಎಂದರು.
ಇನ್ನು, ಇಲ್ಲಿ ಜೀವಿಸುವ ನಾವು ಅದನ್ನು ಬಿಟ್ಟಿರಲು ಸಾಧ್ಯವಿಲ್ಲ. ಅವರು ಹಿಂದೂ ಧರ್ಮದ ಯಾವ ಸೂಕ್ಷ್ಮ ತೆ ತಿಳಿದಿದ್ದಾರೂ ಗೊತ್ತಿಲ್ಲ. ನಮ್ಮ ಎರಡು ಜಿಲ್ಲೆಯಲ್ಲಿ ವ್ಯಾಪಕವಾಗಿ ಇರುವ ನಂಬಿಕೆ ದೈವಾರಾಧನೆ. ಇಂದಿಗೂ ನಾವು ದೈವಾರಾದನೆ ಮಾಡುತ್ತೇವೆ. ದೈವದ ನುಡುಗೆ ಗೌರವ ಕೊಡುತ್ತೇವೆ. ದೈವಗಳ ಮಾತಿಗೆ ಗೌರವ ಕೊಡುತ್ತೇವೆ. ಇದು ಧರ್ಮದ ಸೂಕ್ಷ್ಮತೆ ವಿಮರ್ಶೆ ಮಾಡುವ ಅಗತ್ಯವಿಲ್ಲ ಎಂದು ಮಂಗಳೂರಿನಲ್ಲಿ ಡಾ.ಡಿ ವಿರೇಂದ್ರ ಹೆಗ್ಗಡೆ ಹೇಳಿದರು.