Wednesday, January 22, 2025

ನಿಲ್ಲದ ಖಾಸಗಿ ಬಸ್​​ಗಳ ಹಗಲು ದರೋಡೆ; ಬಾಯಿ ಮಾತಿಗೆ ಸೀಮಿತವಾದ ಸಾರಿಗೆ ಸಚಿವರ ಕ್ರಮ

ಬೆಂಗಳೂರು: ಪ್ರತಿ ಹಬ್ಬ ಹರಿದಿನಗಳಲ್ಲಿಯೂ ಖಾಸಗಿ ಬಸ್ ಗಳ ಟಿಕೆಟ್​ ದರದ ದರೋಡೆ ಜೋರಾಗುತ್ತಿದೆ. ಇದರಿಂದ ಹಬ್ಬಕ್ಕೆ ಊರಿಗೆ ಹೋಗುವ ಜನರ, ಕಾರ್ಮಿಕರ ಆಸೆಗೆ ಮುಳ್ಳು ಹಾಕಿದಂತಾಗಿದೆ. ಈ ಕುರಿತು ಹೆಸರಿಗಷ್ಟೇ ಕ್ರಮದ ಭರವಸೆ ನೀಡಿ ಸುಮ್ಮನೆ ಆಗಿದೆ ಸಾರಿಗೆ ಇಲಾಖೆ.

ಹಬ್ಬ ಹರಿದಿನಗಳಲ್ಲಿ ಖಾಸಗಿ ಬಸ್ ಮಾಲೀಕರು ಹಗಲು ದರೋಡೆ ಮಾಡ್ತಿದ್ದಾರೆ. ದುಪ್ಪಟ್ಟು ದರ ವಸೂಲಿ ಮಾಡಿದ್ರೆ ಪರ್ಮೀಟ್ ರದ್ದು ಎಂದು ಸಾರಿಗೆ ಸಚಿವ ಶ್ರೀರಾಮುಲ ನೀಡಿದ್ದ ಎಚ್ಚರಿಗೆ ಕ್ಯಾರೆ ಎನ್ನದ ಮಾಲೀಕರು ಪ್ರಯಾಣಿಕರ ಮೇಲೆ ಭಾರಿ ದರ ಹಾಕಿ ಹಗಲು ದರೋಡೆ ಮಾಡುತ್ತಿದೆ. ದೀಪಾವಳಿ ಹಬ್ಬಕ್ಕೆ ಹೋಗುವ ಜನರು ವಿಮಾನದಷ್ಟೇ ಖಾಸಗಿ ಬಸ್​ಗೆ ದರ ನೀಡಿ ಪ್ರಯಾಣ ಮಾಡಬೇಕಾದ ದುಸ್ಥಿತಿ ಬಂದಿದೆ.

ಖಾಸಗಿ ಬಸ್​ ಮಾಲೀಕರು ಟಿಕೇಟ್​ ದರ ಏರಿಕೆ ಬಗ್ಗೆ ಹೇಳೋರಿಲ್ಲ ಕೇಳೋರಿಲ್ಲ ಎನ್ನುವಂತೆ ಆಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ ದರ ಬರೋಬ್ಬರಿ 5000 ರೂ, ಇಷ್ಟೇಯಲ್ಲದೇ ಶಿರಸಿ, ಕಾರವಾರ, ಅಂಕೋಲಾ, ಯಲ್ಲಾಪುರದಂತಹ ಊರುಗಳಿಗೆ ಟಿಕೆಟ್ ಬೆಲೆ 2000 ರೂಯಿಂದ 3000 ರೂ ದರ ಫೀಕ್ಸ್​ ಮಾಡಲಾಗಿದೆ. ಬೆಂಗಳೂರಿನಿಂದ ಮಂಗಳೂರು ನಗರಕ್ಕೆ ಖಾಸಗಿ ಬಸ್ ಟಿಕೆಟ್ ದರ 2 ಸಾವಿರವಾಗಿರುವುದು ಪ್ರಯಾಣಿಕರಿಗೆ ಹೊರೆಯಾಗಿದೆ.

ಇನ್ನು ಮುಂದುವರೆದಂತೆ ಬೆಂಗಳೂರಿನಿಂದ ಬೆಳಗಾವಿಗೆ ಕೆಲವು ಖಾಸಗಿ ಬಸ್​ಗಳ ದರ 2000 ರಿಂದ 3000 ರೂ ಇದ್ದರೆ, ಎಂಆರ್​ ಟ್ರಾವೆಲ್ಸ್​ ಕಂಪನಿಯ ಬಸ್​ ಟಿಕೆಟ್​ ದರ ಬರೊಬ್ಬರು 9999 ರೂ ಇದೆ.

ಇವತ್ತು ಸೇರಿ ದೀಪಾವಳಿಗೆ 4  ದಿನಗಳ‌ ಕಾಲ ಸಾಲು ಸಾಲು ರಜೆ ಇದ್ದು, ಊರಿಗೆ ಹೋಗುವ ಪ್ರಯಾಣಿಕರ ಸುಲಿಗೆ ಖಾಸಗಿ ಬಸ್ ಮಾಲೀಕರು ಮಾಡುತ್ತಿದ್ದಾರೆ. ಇವತ್ತಿನಿಂದಲೇ ಜನ ತಮ್ಮ ತಮ್ಮ ಊರಿಗೆ ತೆರಳಲು ಸಿದ್ದತೆ ನಡೆಸುತ್ತಿರುವ ಸಂದರ್ಭದಲ್ಲಿ ಖಾಸಗಿ ಬಸ್ ದರ ಯದ್ವಾ ತದ್ವಾ ಏರಿಕೆಯಾಗಿರುವುದು ಪ್ರಯಾಣಿಕರು ಚಿಂತೆ ಪಡುವ ಸ್ಥಿತಿ ಎದುರಾಗಿದೆ. ಈ ಕುರಿತು ಪ್ರಯಾಣಿಕರು ಖಾಸಗಿ ಬಸ್ ಟಿಕೆಟ್ ಹೊರೆಗೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES