Monday, December 23, 2024

ಅ 23ರಂದು ಅಯೋಧ್ಯೆಯ ದೀಪೋತ್ಸವದಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ

ದೀಪಾವಳಿಯ ಮುನ್ನಾದಿನ ಅಕ್ಟೋಬರ್ 23ರಂದು ಪ್ರಧಾನಿ ಮೋದಿಯವರು ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಜನ್ಮಭೂಮಿಗೆ ಭೇಟಿ ನೀಡಲಿದ್ದಾರೆ.

ಈ ಬಾರಿಯ ದೀಪೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಿರುವ ಉತ್ತರ ಪ್ರದೇಶ ಸರ್ಕಾರ, ಭರದ ಸಿದ್ಧತೆ ನಡೆಸಿದೆ. ಗಿನ್ನಿಸ್ ದಾಖಲೆ ನಿರ್ಮಿಸುವ ಉದ್ದೇಶದಿಂದ 12 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸುವ ಗುರಿಯನ್ನು ಹೊಂದಲಾಗಿದೆ. ಈ ಉದ್ದೇಶದಿಂದ ಅಯೋಧ್ಯೆ, ಲಖನೌ, ಗೊಂಡಾ ಮತ್ತಿತರ ಜಿಲ್ಲೆಗಳಿಂದ ಮಣ್ಣಿನ ದೀಪಗಳನ್ನು ತರಿಸಲಾಗುತ್ತಿದೆ. ಈಗಾಗಲೇ ದೀಪಗಳನ್ನು ಸಂಗ್ರಹಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ.

ಈ ಬಾರಿ ದೀಪೋತ್ಸವವನ್ನು ಕಳೆದ ಐದು ವರ್ಷಗಳಿಗಿಂತ ಭಿನ್ನವಾಗಿ ಆಚರಿಸಲಾಗುತ್ತಿದೆ. ಈ ವರ್ಷ 30 ನಿಮಿಷಕ್ಕೂ ಹೆಚ್ಚು ಕಾಲ ದೀಪಗಳು ಉರಿಯಲಿವೆ. ಈಗ ಜನರು ದೀಪಗಳು ಹೆಚ್ಚು ಕಾಲ ಉರಿಯುವುದನ್ನು ವೀಕ್ಷಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ. ಕಳೆದ ವರ್ಷ ದೀಪೋತ್ಸವದಲ್ಲಿ 9 ಲಕ್ಷ ದೀಪಗಳನ್ನು ಬೆಳಗಿಸಲಾಗಿತ್ತು.

RELATED ARTICLES

Related Articles

TRENDING ARTICLES