Thursday, January 23, 2025

ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋದ ಇಬ್ಬರು ಯುವಕರು

ಚಿತ್ರದುರ್ಗ; ಜಿಲ್ಲೆಯ ಬೇತೂರುಪಾಳ್ಯ‌ ಗ್ರಾಮದಲ್ಲಿ ಹಳ್ಳದಲ್ಲಿ ‌ಕೊಚ್ಚಿ ಹೋಗಿ ಇಬ್ಬರು ಯುವಕರು ‌ನೀರುಪಾಲಾದ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ. ಲೋಕೇಶ್ (40) ತಿರುಮಲ (20) ಕೊಚ್ಚಿಹೋದ ಯುವಕರಾಗಿದ್ದಾರೆ.

ಭೋರ್ಗೊರೆದು ಹರಿಯುತ್ತಿದ್ದ ನೀರಿನಲ್ಲಿ ‌ಮೀನು ಹಿಡಿಯಲು‌ ಯತ್ನಿಸಿದಾಗ ತಿರುಮಲ ಎನ್ನುವ ಯುವಕ ಜಾರಿ‌ ಬಿದ್ದಿದ್ದಾನೆ. ಆಗ ತಿರುಮಲ ‌ರಕ್ಣಣೆ‌‌ ಮಾಡಲು ಲೋಕೆಶ್​ ನೀರಿಗೆ‌ ಹಾರಿದ್ದು, ಈ ವೇಳೆ ಹಳ್ಳದಲ್ಲಿ ನೀರು ಜೋರಾಗಿ ಹರಿದ ಹಿನ್ನಲೆಯಲ್ಲಿ ಇಬ್ಬರು ಯುವಕರು ಕೊಚ್ಚಿ ಹೋಗಿದ್ದಾರೆ.

ಸದ್ಯ ಸ್ಥಳಕ್ಕೆ ಅಗ್ನಿ ಶಾಮಕ, ಪೊಲೀಸರು ದೌಡಾಯಿಸಿ ಇಬ್ಬರು ಯುವಕರಿಗಾಗಿ ಶೋಧ ಕಾರ್ಯ ನಡೆಸಿದರು. ಆದರೆ, ನಿನ್ನೆ ತಡರಾತ್ರಿಯಾದರೂ ಈ ಯುವಕರ ದೇಹ ಪತ್ತೆಯಾಗಿಲ್ಲ. ಮುನ್ನಚ್ಚರಿಕೆ ಕ್ರಮವಾಗಿ ಜನರು ಹಳ್ಳದತ್ತ ಬಾರದಂತೆ ತಡೆಗೋಡೆ ನಿರ್ಮಾಣ ಮಾಡಲಾಗಿದೆ.

ಇನ್ನೂ ಇಬ್ಬರು ಯುವಕರು ಪತ್ತೆಯಾದ ಕಾರಣವಾಗಿ ಇಂದು ಕೂಡು ಶೋಧ ಕಾರ್ಯಚರಣೆ ಮುಂದುವರೆದಿದ್ದು, ಸಮೀಪದಲ್ಲಿ ಹರಿಯುವ ವೇದಾವತಿ ನದಿ ನೀರಿನಲ್ಲಿ ಯುವಕರು ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ.

RELATED ARTICLES

Related Articles

TRENDING ARTICLES