Monday, December 23, 2024

ಕಾಂತಾರ ಸಿನಿಮಾಗೆ ಕ್ಲೀನ್ ಬೋಲ್ಡ್ ಆದ ಬಾಲಿವುಡ್ ಕ್ವೀನ್

ಬೆಂಗಳೂರು: ಮೊದಲು ಸ್ಯಾಂಡಲ್​ವುಡ್​ನಲ್ಲಿ ಮಿಂಚಿ ಈಗ ದೇಶ ಮಟ್ಟದಲ್ಲಿ ಮಿಂಚುತ್ತಿರುವ ಕಾಂತಾರ ಸಿನಿಮಾ ಈಗಾಗಲೇ ಬಾಕ್ಸ್​ ಆಫೀಸ್​ ಸೇರಿದಂತೆ ವಿವಿಧ ಭಾಷೆಗಳಲ್ಲಿ ಕಥೆ ಮೂಲಕ ಗೆಲುವಿನ ನಾಗಲೋಟ ಮುಂದುವರೆಸಿದೆ.

ಅದರಂತೆ ಬಾಲಿವುಡ್​, ಕಾಲಿವುಡ್​, ಟಾಲಿವುಡ್​ ನ ಸ್ಟಾರ್​ ನಟರು ಕಾಂತಾರ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈಗ ಕಾಂತಾರ ಸಿನಿಮಾಗೆ ವೀಕ್ಷಿಸಿ ಬಾಲಿವುಡ್ ನಟಿ ಕಂಗನಾ ರಣಾವತ್​ ಬಾಲಿ ಕ್ಲೀನ್ ಬೋಲ್ಡ್ ಆಗಿದ್ದಾರೆ.

ನಿನ್ನೆ ಕಾಂತಾರ ಸಿನಿಮಾವನ್ನ ಕುಟುಂಬ ಸಮೇತವಾಗಿ ನೋಡಿ ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನಕ್ಕೆ ಕಂಗನಾ ರಣಾವತ್ ಕೊಂಡಾಡಿದ್ದಾರೆ. ಆ್ಯಕ್ಷನ್, ಥ್ರಿಲ್ಲರ್ ಜೊತೆ ಕಲಾತ್ಮಕ ಅಂಶಗಳನ್ನ ಬ್ಲೆಂಡ್ ಮಾಡಿರೋ ಪರಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅಲ್ಲಿನ ಆಚಾರ, ನಂಬಿಕೆಗಳನ್ನ ಇಟ್ಕೊಂಡು ಅದ್ಭುತ ಸಿನಿಮಾ ಕಟ್ಟಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.

ಇಂತಹ ಸಿನಿಮಾಗಳು ಥಿಯೇಟರ್ ಗೆ ಜನರನ್ನ ಕರೆತರುತ್ತದೆ. ನನಗೆ ಈ ಸಿನಿಮಾದಿಂದ ಹೊರಬರೋಕೆ ಕನಿಷ್ಟ ಒಂದು ವಾರ ಬೇಕು. ನನ್ನ ಜೊತೆ ಸಿನಿಮಾ ನೋಡಿದವ್ರೆಲ್ಲಾ ಈ ಬಗೆಯ ಸಿನಿಮಾ ನೋಡೇ ಇಲ್ಲ ಎಂದು ಹೇಳಿದರು. ಇದೊಂದು ಒಂದೊಳ್ಳೆ ಸಿನಿಮಾ ಎಂದು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಾಂತಾರಗೆ ಕಂಗನಾ ಮೆಚ್ಚುಗೆ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES