Monday, December 23, 2024

ಸ್ಯಾಂಡಲ್​ವುಡ್​ ಸೇರಿದಂತೆ ಬೇರೆ ಭಾಷೆಯ ನಟರು ಪುನೀತ್​ ಪರ್ವದಲ್ಲಿ ಭಾಗಿ; ವಿನಯ್ ರಾಜ್​ಕುಮಾರ್

ಬೆಂಗಳೂರು: ಇಂದು ದಿವಂಗತ ಪುನೀತ್​ ರಾಜ್​ಕುಮಾರ್​ ನಟನೆಯ ಗಂಧದ ಗುಡಿ ಫ್ರೀ ರಿಲೀಸ್​ ಇವೆಂಟ್​ ಹಿನ್ನಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಿದ್ಧತೆಯಾಗಿದೆ. ಹೀಗಾಗಿ ಪುನೀತ ಪರ್ವ ಕಾರ್ಯಕ್ರಮ ಸ್ಥಳಕ್ಕೆ ಭೇಟಿ ನೀಡಿ ನಟ ವಿನಯ್ ರಾಜ್​ಕುಮಾರ್ ಪರೀಶಿಲನೆ ನಡೆಸಿದರು.

ಅಪ್ಪು ಸಮಾಧಿಗೆ ಪೂಜೆ ಸಲ್ಲಿಸದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ವಿನಯ್ ರಾಜಯಕುಮಾರ್, ಈಗಾಗಲೇ ಪುನೀತ್​ ಪರ್ವಕ್ಕೆ ಎಲ್ಲ ರೀತಿ ಸಿದ್ಧತೆ ಮಾಡಲಾಗಿದೆ. ಇಂದು 6.30 ಕ್ಕೆ ಕಾರ್ಯಕ್ರಮ ಶುರುವಾಗುತ್ತಿದ್ದು, ಕನ್ನಡ ಚಿತ್ರರಂಗ ನಟರಲ್ಲದೇ ಬೇರೆ ಭಾಷೆಯ ನಟರು ಈ ಪುನೀತ್​ ಪರ್ವದಲ್ಲಿ ಉಪಸ್ಥಿತರಿರಲಿದ್ದಾರೆ ಎಂದರು.

ಇನ್ನು ಅಪ್ಪು ರಿಲೀಸ್​ಗೆ ಅಭಿಮಾನಿಗಳ ಜನಸಾಗರ ಹರಿದು ಬರುವ ಹಿನ್ನಲೆಯಲ್ಲಿ ಇಂದು ಸಂಜೆ ಕಾರಾ ಬಾತ್ , ಪೈನ್ ಆಪಲ್ ಕೇಸರಿಬಾತ್ ಉಪಹಾರ ಮಾಡಲಾಗಿದೆ. ಅದರಂತೆ ಪೋಲೀಸರಿಗೆ ಪಾರ್ಸಲ್ ಬಾಕ್ಸ್ ಪಲಾವ್, ಮೊಸರನ್ನ ಮದ್ದೂರು ಒಡೆ. ಮದ್ಯಾಹ್ನ ಬಿಸಿ ಬೇಳೆ ಬಾತ್, ಮೊಸರನ್ನ ಪಾರ್ಸಲ್ ವ್ಯವಸ್ಥೆ ಕಲ್ಪಿಸಲಾಗಿದೆ.

ಒಟ್ಟು 3500 ಪೋಲೀಸ್ ಸಿಬ್ವಂದಿಗೆ ಹಾಗೂ 50000 ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಊಟಕ್ಕಾಗಿ 40 ಕೌಂಟರ್ ಗಳ ವ್ಯವಸ್ಥೆ ಇದ್ದು, ಇಂದು ರಾತ್ರಿ 08 ಗಂಟೆಯವರೆಗೆ ಕಾರ್ಯಕ್ರಮಕ್ಕೆ ಬಂದ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಇರಲಿದೆ ಎಂದು ತಿಳಿಸಲಾಗಿದೆ.

RELATED ARTICLES

Related Articles

TRENDING ARTICLES