Monday, December 23, 2024

‘ಪುನೀತ್​ ಪರ್ವ’ಕ್ಕೆ ಭಾಗವಹಿಸಲು ಎಲ್ಲರಿಗೂ ಅವಕಾಶ; ರಾಘವೇಂದ್ರ ರಾಜ್​ಕುಮಾರ್​

ಬೆಂಗಳೂರು: ದಿವಂಗತ ಪುನೀತ್​ ರಾಜ್​ಕುಮಾರ್​ ನಟನೆಯ ‘ಗಂಧದ ಗುಡಿ’ ಸಿನಿಮಾದ ಫ್ರೀ ರಿಲೀಸ್​ ಕಾರ್ಯಕ್ರಮ ಇಂದು ಸಂಜೆ 6.30 ಕ್ಕೆ ಹಿನ್ನಲೆಯಲ್ಲಿ ಈ ಕುರಿತು ನಟ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಲು ಅವಕಾಶವಿದೆ ಎಂದರು.

ಪುನೀತ್​ ಪರ್ವಕ್ಕೆ ಬರುವ ಅತಿಥಿಗಳು ಹಾಗೂ ಅಭಿಮಾನಿಗಳಿಗೆ ಎಲ್ಲರಿಗೂ ಸ್ವಾಗತ ಇದೆ. ಇದು ನನ್ನ ತಮ್ಮನ್ನ ಕೊನೆ ಸಿನಿಮಾವಾಗಿದೆ. ಹೀಗಾಗಿ ಇದನ್ನ ದೊಡ್ಡದಾಗಿ ಮಾಡ್ತಿದ್ದೇವೆ. ಅಭಿಮಾನಿಗಳು ಯಾವುದೇ ಗಲಾಟೆ ಇಲ್ಲದೆ ಈ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದರು.

ಈ ಕಾರ್ಯಕ್ರಮದಲ್ಲಿ ಅಪ್ಪು ಗಾಯಕನಾಗಿ ಹಾಡಿದ ಹಾಡನ್ನ ನಾನು ಆಡುತ್ತೇನೆ. ಪುನೀತ್​ ನಟನೆಯ ಹಾಡಿಗೆ ಶಿವರಾಜ್​ಕುಮಾರ್ ಡ್ಯಾನ್ಸ್ ಮಾಡಲಿದ್ದಾರೆ. ಕುನಾಲ್ ಗಾಂಜಾವಾಲ್ ಎಲ್ಲರು ಇರ್ತಾರೆ. ಹೃದಯ ಪೂರ್ವಕವಾಗಿ ನೀವು ಕಾರ್ಯಕ್ರಮ ಚೆನ್ನಾಗಿ ನಡೆಸಿಕೊಡುವಂತೆ ಮನವಿ ಮಾಡಿದರು.

ಅಪ್ಪು ನಿಧನದ ಸಂದರ್ಭದಲ್ಲಿ ಏನು ಸಮಸ್ಯೆ ಆಗದೆ ರಾಜ್ಯದ ಜನರು ಸಹಕಾರ ಕೊಟ್ಟಿದ್ದೀರಾ, ಇವತ್ತು ಕೂಡಾ ನಮಗೆ ಸಹಕಾರ ಕೊಡಿ. ಎಲ್ಲರು ಬಂದು ಕಾರ್ಯಕ್ರಮ ನೋಡಿ, ಇದು ಅಭಿಮಾನಿಗಳ ಕಾರ್ಯಕ್ರಮವಾಗಿದೆ. ಅಪ್ಪ ರಾಜ್​ಕುಮಾರ್​ ಅವರು ಗಂಧದ ಗುಡಿ ಸಿನಿಮಾ ಮಾಡಿದ್ರು. ಆಗ ಶಿವಣ್ಣ ಮಾಡಿದ್ರು. ಈಗ ಅಪ್ಪು ಮಾಡಿದ್ದಾನೆ.

ಕಾಡು ಪ್ರಾಣಿ, ಮರ ಗಿಡಗಳಲ್ಲಿ ಅಪ್ಪುವನ್ನು ಅಭಿಮಾನಿಗಳು ನೋಡಬೇಕು. ಎಲ್ಲಾ ಕಲಾವಿದರು ಬರ್ತೀನಿ ಅಂತ ಹೇಳಿದ್ದಾರೆ. ಬಂದ ಮೇಲೆ ಯಾರು ಬರ್ತಾರೆ ಅಂತ ಗೊತ್ತಾಗುತ್ತದೆ. ಸೂರ್ಯ ಬರ್ತೀನಿ ಅಂತ ಹೇಳಿದ್ದಾರೆ. ನಮ್ಮ ಇಂಡಸ್ಟ್ರಿ ನಟರು ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ ಎಂದರು.

RELATED ARTICLES

Related Articles

TRENDING ARTICLES