ಬೀದರ್; ಕಲಬುರಗಿ ಗ್ರಾಮೀಣ ಸಿಪಿಐ ಶ್ರೀಮಂತ ಇಲ್ಲಾಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 31ಆರೋಪಿಗಳ ಬಂಧನ ಮಾಡಲಾಗಿದೆ.
ಗಾಂಜಾ ಬೆಳೆದ ಮಾರಾಟಗಾರ ಬಂಧಿಸಲು ಬಂದಾಗ ಸಿಪಿಐ ಹೋದ ವೇಳೆಯಲ್ಲಿ ಆರೋಪಿತರೆಲ್ಲರೂ ಸೇರಿ ಕೈಯಲ್ಲಿ ಹಂಟರ್, ಬಡಿಗೆ ಟಾರ್ಚ ಹಿಡಿದುಕೊಂಡು ಕಲ್ಲು ತೂರಾಟ ಮಾಡಿದ್ದರು. ಅಕಸ್ಮಿಕ ದಾಳಿಗೆ ಪೊಲೀಸರು ಓಡಿ ಹೋಗಿದ್ದು ಸಿಪಿಐ ಶ್ರೀಮಂತ್ ಇಲ್ಲಾಳ ಅವರು ಗಾಂಜಾ ಮಾರಾಟದ ತಂಡದ ಕೈಗೆ ಸಿಕ್ಕಿ ಬಿದ್ದಿದ್ದು ಆರೋಪಿತರೆಲ್ಲರೂ ಸೇರಿ ಹಂಟರ, ಕಟ್ಟಿಗೆಯಿಂದ, ಕೈಯಿಂದ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನ ಮಾಡಿದ್ದರು.
ಈ ವೇಳೆ ಸಿಪಿಐ ಅವರ ಹತ್ತಿರ ಇದ್ದ ಲೋಡೆಡ್ ಪಿಸ್ತೂಲ್, ಮೋಬಾಯಿಲ್, ಹಣ, ಬಂಗಾರದ ಚೈನ್ 02 ಬಂಗಾರದ ರಿಂಗ್, ವಾಚ್ ಮತ್ತು ಜಾಕೀಟು, ದೋಚಿಕೊಂಡು ಗಾಂಜಾ ಗ್ಯಾಂಗ್ ಪರಾರಿಯಾಗಿತ್ತು. ಈ ಬಗ್ಗೆ ಮಂಠಾಳ ಪೊಲೀಸ್ ಠಾಣೆಯಲ್ಲಿ ಐಪಿಸಿ 143, 147, 148, 307,333, 353, 354, 395 , 504, 506 ಸೆಕ್ಷನ್ ಪ್ರಕಾರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ ಬಾಬು ಬೀದರ ಹಾಗು ಮಹೇಶ ಮೇಘಣ್ಣನವರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೀದರ, ಮಾರ್ಗದರ್ಶನದಲ್ಲಿ ಶಿವಾಂಶು ರಜಪೂತ ಸಹಾಯಕ ಪೊಲೀಸ ಅಧೀಕ್ಷಕರು ಹುಮನಾಬಾದ ರವರ ನೇತೃತ್ವದಲ್ಲಿ ತಂಡ ರಚನೆ ಮಾಡಿ ಆರೋಪಿಗಳಿಗಾಗಿ ಖೆಡ್ಡಾ ತೋಡಿದ್ದರು.
ಸದ್ಯ 31 ಜನ ಆರೋಪಿತರನ್ನು ದಸ್ತಗಿರಿ ಮಾಡಿ ಅವರಿಂದ ಡೆಡ್ ಪಿಸ್ತೂಲ್, ಒನ್ ಪ್ಲಸ್ ಮೊಬಾಯಿಲ್, 30 ಗ್ರಾಂ ಬಂಗಾರದ ಚೈನ್, 2 ಬಂಗಾರದ ರಿಂಗ್, ವಾಚ್, ಕಟ್ಟಿಗೆಗಳು, ಹಂಟರಗಳು, ಟಾರ್ಚ್ ಹಿಗೆ ಒಟ್ಟು 25 ಲಕ್ಷ ರೂ ಕಿಮ್ಮತ್ತಿನ ವಸ್ತುಗಳನ್ನು ಆರೋಪಿತರಿಂದ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕಣದಲ್ಲಿ ಆರೋಪಿತರಿಗೆ ದಸ್ತಗಿರಿ ಮಾಡಿ, ಆರೋಪಿತರಿಂದ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿದಕ್ಕೆ ಎಸ್ಪಿ ಡಿ. ಕಿಶೋರ ಬಾಬು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.