Friday, January 24, 2025

ಬೀಚ್​​ನಲ್ಲಿ ಮುಳುಗುತಿದ್ದ ‘ನಟ’ನ ರಕ್ಷಣೆ ಮಾಡಿದ ಅಡ್ವೆಂಚರ್ ಸಿಬ್ಬಂದಿ

ಕಾರವಾರ; ಸಮುದ್ರದಲ್ಲಿ ಮುಳುಗುತಿದ್ದ ಚಲನ ಚಿತ್ರ ನಟನ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕೊಡ್ಲೇ ಬೀಚ್​​ನಲ್ಲಿ ನಡೆದಿದೆ.

ಹೈದ್ರಬಾದ್ ಮೂಲದ ಚಿತ್ರನಟ ಅಖಿಲ್ ರಾಜ್ (26) ರಕ್ಷಣೆಗೊಳಗಾದವರು, ಸಮುದ್ರದಲ್ಲಿ ಈಜಲು ಹೋದಾಗ ನೀರಿನ ಸುಳಿಯಲ್ಲಿ ಸಿಲುಕಿ, ಸಮುದ್ರದ ಪಾಲಾಗುತ್ತಿದ್ದ ವೇಳೆಯಲ್ಲಿ ನಟನನ್ನ ಗೋಕರ್ಣ ಅಡ್ವೆಂಚರ್ ಸಂಸ್ಥೆಯ ಸಿಬ್ಬಂದಿ ಹಾಗೂ ಲೈಪ್ ಗಾರ್ಡ ನಿಂದ ರಕ್ಷಣೆ ಮಾಡಲಾಗಿದೆ.

ಚಿತ್ರನಟ ಅಖಿಲ್ ರಾಜ್ ಅವರು ಪ್ರವಾಸಕ್ಕೆಂದು ರಾಜ್ಯಕ್ಕೆ ಆಗಮಿಸಿದ್ದರು. ಅದರಂತೆ ಗೋಕರ್ಣದ ಕೊಡ್ಲೇ ಬೀಚ್​​ನಲ್ಲಿ ಏಂಜಾಯ್​ ಮಾಡಲು ಹೋದ ವೇಳೆ ಈ ಘಟನೆ ಸಂಭವಿಸಿದೆ. ಸದ್ಯ ನಟನಿಗೆ ಯಾವುದೇ ರೀತಿಯಲ್ಲಿ ಆರೋಗ್ಯದಲ್ಲಿ ಹಾನಿಯಾಗಿಲ್ಲ. ಜಟ್ ಸ್ಕೀ ವಾಟರ್ ಬೈಕ್ ಮೂಲಕ ನಟನನ್ನ ರಕ್ಷಣೆ ಮಾಡಲಾಗಿದೆ. ಈ ಘಟನೆ ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

Related Articles

TRENDING ARTICLES