Thursday, January 9, 2025

‘ಪುನೀತ​ ಪರ್ವ’ದಲ್ಲಿ ವಿವಿಧ ಭಾಷೆಯ ನಟ-ನಟಿಯರು ಭಾಗಿ

ಬೆಂಗಳೂರು; ಇಂದು ದಿವಂಗತ ಪುನೀತ್​ ರಾಜ್​ಕುಮಾರ್​ ನಟನೆಯ ಗಂಧದ ಗುಡಿ ಸಿನಿಮಾದ ಫ್ರೀ ರಿಲೀಸ್​ ಇವೆಂಟ್​ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ.

ಈ ಕಾರ್ಯಕ್ರಮದಲ್ಲಿ ದೇಶದ ಹಲವು ದಿಗ್ಗಜ ನಟರು ಭಾಗವಹಿಸಿದ್ದಾರೆ. ದಿವಂಗತ ಪುನೀತ್​ ಪತ್ನಿ ಅಶ್ವೀನಿ ರಾಜ್​ಕುಮಾರ್​ ಅವರು ಹಾಗೂ ರಾಘವೇಂದ್ರ ರಾಜ್​ಕುಮಾರ್​ ಪುನೀತ ಪರ್ವದಲ್ಲಿ ಭಾಗಿಯಾಗಿದ್ದಾರೆ. ರಾಘವೇಂದ್ರ ರಾಜ್​ಕುಮಾರ್​ ಅವರು ಕಾಣದಂತೆ ಮಾಯವಾದನು ಎಂದು ಹಾಡಿದರು.

ಅದರಂತೆ ಪುನೀತ್​ ಪರ್ವಕ್ಕೆ ನೆನಪಿರಲಿ ನಟ ಪ್ರೇಮ್​, ಇನ್ಫೋಸಿಸ್‌ ಫೌಂಡೇಶನ್‌ ಮುಖ್ಯಸ್ಥೆ ಸುಧಾಮೂರ್ತಿ, ನಟಿ ನಿಶ್ವಿಕಾ ನಾಯ್ಡು, ನಟಿ ಪ್ರೀಯಾ ಆನಂದ್​, ನಟಿ ಅನು ಪ್ರಭಾಕರ್​, ನಟಿ ಸುಧಾರಾಣಿ, ನಟಿ​ ಅನುಪ್ರಭಾಕರ್​, ನಟಿ ಮೇಘನಾ ರಾಜ್​, ನಟಿ ಆದಿತಿ ಪ್ರಭುದೇವ್​, ನಿರ್ದೇಶಕ ಪ್ರಶಾಂತ್ ನೀಲ್, ನಿರ್ದೇಶಕ ರಾಕ್​ಲೈನ್​ ವೆಂಕಟೇಶ್​ ಭಾಗವಹಿಸಿದ್ದಾರೆ. ಇನ್ನು ಬೇರೆ ಭಾಷೆಯ ನಟರಾದ ನಟ ಪ್ರಭುದೇವ್​, ನಟ ಶರತ್​ ಕುಮಾರ್​, ತಮಿಳು ನಟ ಸೂರ್ಯ, ತೆಲುಗು ನಟ ಅಕ್ಕಿನೇನಿ, ನಟ ಅಕೀಲ್​ ಭಾಗಿಯಾಗಿದ್ದಾರೆ.

RELATED ARTICLES

Related Articles

TRENDING ARTICLES