Sunday, December 22, 2024

ಮಾಜಿ ಕಾಂಗ್ರೆಸ್​ ಸಚಿವರ ಪತ್ನಿಯ ಫೇಸ್​-ಬುಕ್​ ಪೇಜ್​ ಹ್ಯಾಕ್​

ವಿಜಯಪುರ; ಮಾಜಿ ಗೃಹ ಸಚಿವ, ಶಾಸಕ ಎಂ.ಬಿ ಪಾಟೀಲ ಅವರ ಧರ್ಮಪತ್ನಿಯ ಫೇಸ್‌ ಬುಕ್‌ ಪೇಜ್ ಖದೀಮರು ಹ್ಯಾಕ್‌ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಎಂಬಿ ಪಾಟೀಲ್​ ಪತ್ನಿ ಆಶಾ ಪಾಟೀಲ್ ಅವರ ಫೇಸ್‌ ಬುಕ್‌ ಪೇಜ್ ನಿನ್ನೆ ಖದೀಮರು ಹ್ಯಾಕ್ ಮಾಡಿ, ವಿವಿಧ ರೀತಿಯ ವಿಡಿಯೋ ಅಪ್ಲೋಡ್​ ಮಾಡಲಾಗುತ್ತಿದೆ ಎಂದು  ಈ ಬಗ್ಗೆ ವಿಜಯಪುರ ಸಿಇಓ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಆಶಾ ಪಾಟೀಲರ ಆಪ್ತ ಸಹಾಯಕರಾದ ರವಿಶಂಕರ ಎನ್‌ಪಿ ಅವರ ಪ್ರೋಪೈಲ್​ಗೆ ಫೇಸ್‌ ಬುಕ್‌ ಆಶಾ ಪಾಟೀಲ್​ ಅವರ ಪೇಜ್ ಆ್ಯಡ್ ಮಾಡಲಾಗಿತ್ತು. ಆದರೆ ಈ ಪೇಜ್​ನ ಹ್ಯಾಕರ್‌ಗಳು ದುರ್ಬಳಕೆ ಮಾಡಿ ಹ್ಯಾಕ್ ಮಾಡಿದ್ದಾರೆ ಎಂದು ಪ್ರಕರಣದಲ್ಲಿ ಹೇಳಿದ್ದಾರೆ.

ಇನ್ನು ಹ್ಯಾಕ್​ ಮಾಡಿದ ಪೇಜ್​ನಲ್ಲಿ ಈಗ ಬಾಕ್ಸಿಂಗ್ ವಿಡಿಯೋ ಸೇರಿದಂತೆ ವಿವಿಧ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಾರೆ. ಪೇಜ್​ ನ ಸೆಕ್ಯೂರಿಟಿ ಬದಲಾವಣೆ ಮಾಡಿದ್ರೂ ಆಶಾ ಅವರ ಪೇಜ್​ ಓಪನ್​ ಆಗುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

RELATED ARTICLES

Related Articles

TRENDING ARTICLES