Monday, December 23, 2024

ಕಾಮನ್ ಮ್ಯಾನ್ ಸಿಎಂಗೆ ಕಾಂಗ್ರೆಸ್ ಕಿರಿಕಿರಿ

ಬೆಂಗಳೂರು : ಇತ್ತೀಚೆಗೆ, ಕಾಂಗ್ರೆಸ್ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಸಿಡಿದು ನಿಂತಿದೆ. ಯಾರು ಊಹಿಸದ ರೀತಿಯಲ್ಲಿ ಪೇಸಿಎಂ ಎಂಬ ಅಭಿಯಾನ ಆರಂಭಿಸಿ ಎಲ್ಲರ ಗಮನ ಸೆಳೆದಿದ್ದ ಕಾಂಗ್ರೆಸ್‌, ಇದೀಗ ಮತ್ತೊಂದು ಕ್ಯಾಂಪೇನ್ ಸ್ಟಾರ್ಟ್ ಮಾಡಿದೆ. ಆಗ ಪೇಸಿಎಂ ಅಭಿಯಾನ ಮೂಲಕ ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕವಾಗಿ ಎಳೆದು ತಂದಿದ್ರು. ಇದ್ರಿಂದ ಇರಿಸುಮುರಿಸಿಗೆ ಒಳಗಾಗಿದ್ರು ಕಾಮನ್ ಮ್ಯಾನ್ ಬೊಮ್ಮಾಯಿ  ಇದನ್ನು ಪ್ಯಾಚಪ್ ಮಾಡುವ ಮುನ್ನವೇ ಸೇಸಿಎಂ ಅಂತ ಮತ್ತೊಂದು ಅಭಿಯಾನ ಆರಂಭಿಸುವ ಮೂಲಕ ಬಿಜೆಪಿಯ ನಿದ್ದೆಗೆಡಿಸಿದೆ.

ಕಾಂಗ್ರೆಸ್ ಪ್ರಚಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಸೇ ಸಿಎಂ ಅಭಿಯಾನ ಆರಂಭಿಸಿರುವ ಕಾಂಗ್ರೆಸ್ ಇದುವರೆಗೆ ಬಿಜೆಪಿಗೆ ಕೇಳಿದ ಎಲ್ಲಾ ಪ್ರಶ್ನೆಗಳನ್ನು ಪಟ್ಟಿಮಾಡಿದೆ. 50 ಪ್ರಶ್ನೆಗಳಿಗೆ ಉತ್ತರ ನೀಡದ ಬಿಜೆಪಿ ತಮ್ಮ ಮೌನದ ಮೂಲಕ ತಪ್ಪಿತಸ್ಥರೆಂದು ಒಪ್ಪಿಕೊಂಡಿದ್ದಾರೆ. ಈ ಮೂಲಕ ಬೊಮ್ಮಾಯಿ ಕ್ಯಾಬಿನೆಟ್‌ನ ಎಲ್ಲಾ ಕಲಿಗಳನ್ನ ಪ್ರಶ್ನೆ ಮಾಡಿರೋ ಕಾಂಗ್ರೆಸ್, ಎಷ್ಟು ಆಶೋತ್ತರಗಳನ್ನ ಈಡೇರಿಸಿದ್ದೀರಾ ಎಂದು ಪ್ರಶ್ನಿಸುವ ಮೂಲಕ ಟಾಂಗ್ ಕೊಟ್ಟಿದೆ.

ಇನ್ನು ಕಾಂಗ್ರೆಸ್ SAYCM ಆರೋಪ ವಿಚಾರಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಭೂತದ ಬಾಯಲ್ಲಿ ಭಗವದ್ಗೀತೆ ಅಂತಾರಲ್ಲ ಹಾಗೆ ಕಾಂಗ್ರೆಸ್ ಕಥೆಯಾಗಿದೆ ಎಂದು ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.

ಒಟ್ಟಾರೆ ಕಾಂಗ್ರೆಸ್ ನ ಒಂದಲ್ಲ ಒಂದು ಅಭಿಯಾನಕ್ಕೆ ಬಿಜೆಪಿ ಹೈರಾಣಗಿದೆ. ಇದೀಗ ಕಾಂಗ್ರೆಸ್ ವಿರುದ್ದ ಹೋರಾಟಕ್ಕೆ ಹೊಸ ಅಸ್ತ್ರಕ್ಕೆ ಬಿಜೆಪಿ ಸಿದ್ದತೆ ನಡೆಸ್ತಿದೆ.

ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ವವರ್ ಟಿವಿ ಬೆಂಗಳೂರು.

RELATED ARTICLES

Related Articles

TRENDING ARTICLES