ಬೆಂಗಳೂರು : ದುಪ್ಪಟ್ಟು ದರ ವಸೂಲಿ ಮಾಡಿದ್ರೆ ಪರ್ಮೀಟ್ ರದ್ದು ಎಚ್ಚರಿಕೆ ನೀಡಿದ್ರೂ ಕ್ಯಾರೆ ಎನ್ನದ ಮಾಲೀಕರು ಖಾಸಗಿ ಬಸ್ಗಳ ಅಕ್ರಮ ಕ್ಕೆ ಸಾಥ್ ನೀಡುತ್ತಿದ್ಯಾ ಸಾರಿಗೆ ಇಲಾಖೆ ಎಂಬ ಅನುಮಾನ ಕಾಡುತ್ತಿದೆ.
ದುಪ್ಪಟ್ಟು ದರ ವಸೂಲಿ ಮಾಡಿದ್ರೆ ಪರ್ಮೀಟ್ ರದ್ದು ಎಚ್ಚರಿಕೆ ನೀಡಿದ್ರೂ ಕ್ಯಾರೆ ಎನ್ನದ ಮಾಲೀಕರು, ಮತ್ತೆ ದೀಪಾವಳಿ ಹಬ್ಬಕ್ಕೂ ಖಾಸಗಿ ಬಸ್ ಪ್ರಯಾಣ ವಿಮಾನದಷ್ಟೇ ದುಬಾರಿಯಾಗಿದೆ. ಆದ್ರೂ ಖಾಸಗಿ ಬಸ್ ಪ್ರಯಾಣಿಕ ಆಟ ಹೇಳೋರಿಲ್ಲ ಕೇಳೋರಿಲ್ಲ. ದುಪ್ಪಟ್ಟು ವಸೂಲಿ ಮಾಡೋ ಬಸ್ ಮಾಲೀಕರ ಮೇಲೆ ನಿರ್ಲಕ್ಷ್ಯ ವಾಗಿ ಕ್ರಮ ಕೈಗೊಳ್ಳಕ್ಕೆ ಹಿಂದೇಟು ಯಾಕೆ..? ಎಂದು ಪ್ರಶ್ನೆಯಾಗಿಯೇ ಉಳಿದಿದೆ.
ಖಾಸಗಿ ಸುಲಿಗೆ ಏಕೆ?
ಅ 22ರ 4ನೇ ಶನಿವಾರ ಸೇರಿ ದೀಪಾವಳಿಗೆ 5 ದಿನಗಳ ಕಾಲ ಸಾಲು ಸಾಲು ರಜೆ
ಹೀಗಾಗಿ ಶುಕ್ರವಾರದಿಂದಲ್ಲೇ ಜನ ತಮ್ಮ ತಮ್ಮ ಊರಿಗೆ ತೆರಳಲು ಸಿದ್ದತೆ
ಹೀಗಾಗಿ ಖಾಸಗಿ ಬಸ್ ದರ ಯದ್ವಾ ತದ್ವಾ ಏರಿಕೆ
ಬೆಂಗಳೂರಿನಿಂದ ಮಂಗಳೂರಿಗೆ ಬಸ್ ದರ 3600 ಇದ್ರೆ, ವಿಮಾನ ದರ 3700 ಇದೆ
ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಸ್ ದರ 5000ರೂ,ವಿಮಾನ ದರ 5500
ಹಬ್ಬಕ್ಕೆ ಊರಿಗೆ ತೆರಳೋ -ಪ್ರಯಾಣಿಕರಿಗೆ ಖಾಸಗಿ ಬಸ್ ಟಿಕೆಟ್ ಹೊರೆ-ಭಾರಿ ಆಕ್ರೋಶ