Friday, January 10, 2025

ಅ 28ರಂದು ವಿಜಯಪುರದ ಮಹಾನಗರ ಪಾಲಿಕೆ ಚುನಾವಣೆ

ವಿಜಯಪುರ : ಅಕ್ಟೋಬರ್ 28ರಂದು ವಿಜಯಪುರದ ಮಹಾನಗರ ಪಾಲಿಕೆ ಚುನಾವಣೆ. 35 ಸದಸ್ಯ ಬಲದ ಮಹಾನಗರ ಪಾಲಿಕೆ ಇದಾಗಿದೆ. ನಾಮಪತ್ರ ಸಲ್ಲಿಕೆಗೆ ಮೊನ್ನೆ ಕೊನೆಯ ದಿನವಾಗಿತ್ತು.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಇತರ ಪಕ್ಷಗಳು, ಪಕ್ಷೇತರರು ಸೇರಿದಂತೆ ಒಟ್ಟು 358 ನಾಮಪತ್ರಗಳು ಸಲ್ಲಿಕೆಯಾಗಿದೆ. ನಿನ್ನೆ ನಾಮಪತ್ರಗಳ ಪರಿಶಲನೆ ಕಾರ್ಯ ಮುಕ್ತಾಯವಾಗಿದೆ. ಇದರಲ್ಲಿ 235 ನಾಮಪತ್ರಗಳು ಕ್ರಮಬದ್ಧವಾಗಿದ್ದು 119 ನಾಮಪತ್ರಗಳು ತಿರಸ್ಕಾರಗೊಂಡಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಿಂದ ಮಾಹಿತಿ ನೀಡಿದ್ದಾರೆ.

ಇನ್ನು, ಅಕ್ಟೋಬರ್ 20 ರಂದು ನಾಮಪತ್ರಗಳ ಹಿಂಪಡೆಯಲು ಕೊನೆಯ ದಿನವಾಗಿದೆ ಮತ್ತು ಅಕ್ಟೋಬರ್ 28 ರಂದು ಮತದಾನ ನಡೆಯಲಿದೆ. ಮುಂದೆ ಅಕ್ಟೋಬರ್ 31 ರಂದು ಮತಗಳ ಎಣಿಕೆ ಹಾಗೂ ಫಲಿತಾಂಶ ಪ್ರಕಟವಾಗಲಿದೆ. ವಿಜಯಪುರ ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳ ರಣತಂತ್ರ ನಡೆಯಿಸುತ್ತಿವೆ.

RELATED ARTICLES

Related Articles

TRENDING ARTICLES