Wednesday, January 22, 2025

ಆಶೋಕ್ ನಗರ ಪೊಲೀಸರಿಂದ ವಿಕೃತಿ ಕಾಮಿ ಅರೆಸ್ಟ್

ಬೆಂಗಳೂರು : ಕೊಲೆ ಬೆದರಿಕೆ ಕೊಟ್ಟು ಅತ್ಯಾಚಾರ ಪ್ರಯತ್ನಿಸಿದ ವಿಕೃತಿ ಕಾಮಿಯೊಬ್ಬ ಅರೆಸ್ಟ್ ಆಗಿದ್ದಾನೆ.

ಆರೋಪಿಯನ್ನು ಪ್ರಕಾಶ ವಿಲಿಯಂ ಎಂದು ಗುರುತಿಸಲಾಗಿದೆ. ಸೆಂಟ್ ಮೇರಿಸ್ ಚರ್ಚ್​ನಲ್ಲಿ ಮಹಿಳೆ ಒರ್ವರು ಚರ್ಚ್ ಲೈಟ್ ಆಫ್ ಮಾಡಲು ಬಂದಾಗ ಬಾಗಿಲಲ್ಲಿ ಚಾಕು ಹಿಡಿದು ನಿಂತಿದ್ದ ಆರೋಪಿ ಮಹಿಳೆ ಕುತ್ತಿಗೆಗೆ ಚಾಕು ಇಟ್ಟು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಚಾಕು ಹಾಕಿದಾಗ ಮಹಿಳೆ ಬಟ್ಟೆ ಚಾಕುವಿಗೆ ಸಿಕ್ಕಿ ಹರಿದಿದೆ.

ಅದಲ್ಲದೇ, ಮಹಿಳೆ ಕಿರುಚಿದಾಗ ಆಕೆಯ ಪತಿ ಅಲ್ಲಿಗೆ ಬಂದಿದ್ದಾರೆ, ಪತಿ ಬರ್ತಿದ್ದ ಹಾಗೆ ಅಲ್ಲಿಂದ ಪ್ರಕಾಶ ಎಸ್ಕೇಪ್ ಅಗಿದ್ದಾನೆ. ಅದೆ ದಿನ ಏರಿಯಾದಲ್ಲಿ ಗಣೇಶ ಮೆರವಣಿಗೆ ಇದ್ದ ಕಾರಣ ಆರೋಪಿ ಎಸ್ಕೇಪ್ ಆಗಿ ಗಣೇಶ ಮೆರವಣಿಗೆ ಒಳಗೆ ಸೇರಿಕೊಂಡಿದ್ದಾನೆ. ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ್ದ ಆಶೋಕ್ ನಗರ ಪೊಲೀಸರು ಸದ್ಯ ಅರೋಪಿಯನ್ನು ಹುಡುಕಾಡಿ ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ವೇಳೆ ಇದೇ ರೀತಿ ಹಲವಾರು ಮಹಿಳೆಯರ ಮೇಲೆ ಅತ್ಯಾಚಾರ ಯತ್ನ ಅಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅಶೋಕ್ ನಗರ ಪೊಲೀಸರು ಅರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES