Monday, December 23, 2024

ನಾಳೆ ಸ್ಯಾಂಡಲ್​ವುಡ್​ನಲ್ಲಿ ಸಿನಿಮಾಗಳ ಮಧ್ಯ ನಡೆಯಲಿದೆ ಬಿಗ್​ ಕ್ಲ್ಯಾಶ್

ಬೆಂಗಳೂರು: ನವೆಂಬರ್ 11ಕ್ಕೆ ಸಾಲು ಸಾಲು ಸಿನಿಮಾಗಳು ತೆರೆಗಪ್ಪಳಿಸೋಕೆ ಸಜ್ಜಾಗಿವೆ. ಈ ವಾರ ಸಿನಿರಸಿಕರಿಗೆ ಸುಗ್ಗಿ ಕಾಲವಾಗಿದೆ. ಕೊರೊನಾ ಇಂದ ಕುಂಟುತ್ತಾ ಸಾಗಿದ್ದ ಸಿನಿಮಾಗಳೆಲ್ಲಾ ಎದೆ ಹುಬ್ಬಿಸಿ ಈಗ ತೆರೆಗೆ ಬರ್ತಿವೆ. ಇನ್ನೂ ಸ್ಯಾಂಡಲ್​ವುಡ್​​​ ಚಿತ್ರಗಳೆಲ್ಲಾ ಪ್ಯಾನ್​ ಇಂಡಿಯಾ ಲೆವೆಲ್​​​ನಲ್ಲಿ ಛಾಪು ಮೂಡಿಸ್ತಾ ಇರೋದ್ರಿಂದ ಸಹಜವಾಗಿ ನಿರೀಕ್ಷೆಗಳು ಗರಿಗೆದರಿವೆ. ಈ ಬಾರಿ ನವೆಂಬರ್​​​ 11ಕ್ಕೆ ಕನ್ನಡದ ಮೂರು ಚಿತ್ರಗಳು ಸಿಲ್ವರ್​ ಸ್ಕ್ರೀನ್​ ಮೇಲೆ ತಮ್ಮ ತಾಕತ್ತು ಪ್ರದರ್ಶಿಸಲಿವೆ.

ಇಂಡಸ್ಟ್ರಿಯಲ್ಲಿ ಬಿಗ್​ ಬಾಕ್ಸ್​ ಆಫೀಸ್​ ಕ್ಲ್ಯಾಶ್​ ಆಗಲಿದೆ. ಗಾಳಿಪಟ 2 ಚಿತ್ರದ ನಂತರ ಗಣಿ ಕಂಬ್ಯಾಕ್​ ಆಗಿದ್ದು ತ್ರಿಬಲ್​ ರೈಡ್​ ಸವಾರಿಗೆ ಸಜ್ಜಾಗಿದ್ದಾರೆ. ಮೂರು ಚಂದದ ಚೆಲುವೆಯರ ಜೊತೆ ಗೋಲ್ಡನ್​ ಗಣಿ ಜಾಲಿರೈಡ್​ ಹೋಗ್ತಿದ್ದು ಅದಿತಿ, ಮೇಘಾ ಶೆಟ್ಟಿ, ರಚನಾ ಇಂದರ್​ ಸಾಥ್​ ನೀಡ್ತಿದ್ದಾರೆ. ಇದರ ಜತೆಗೆ ಚಿತ್ರಪ್ರೇಮಿಗಳ ಬಾಯಲ್ಲಿ ದಿಲ್​​​ಪಸಂದ್​​ ಸಿಹಿರುಚಿ ಬಾಯಲ್ಲಿ ನೀರೂರಿಸಿದೆ.

ಲಕ್ಕಿಮ್ಯಾನ್​​ ಚಿತ್ರದ ನಂತ್ರ ಡಾರ್ಲಿಂಗ್​ ಕೃಷ್ಣ ಕೂಡ ಭರವಸೆ ಮೂಡಿಸಿದ್ದಾರೆ. ನಿಶ್ವಿಕಾ ಹಾಗೂ ಕೃಷ್ಣ ಕಾಂಬೋದಲ್ಲಿ ದಿಲ್​ಪಸಂದ್​​​ ಸಹಿ ತಿನಿಸೋಕೆ ಚಿತ್ರತಂಡ ಸಜ್ಜಾಗಿದೆ. ಚಿತ್ರದ ಟ್ರೈಲರ್​ ಕೂಡ ಸಖತ್​ ಹೈಪ್​ ಕ್ರಿಯೇಟ್ ಮಾಡಿದ್ದು ಪ್ರೇಕ್ಷಕರ ದಿಲ್​ ಗೆಲ್ಲಬಹುದು ಅನ್ನೋ ಖಾತ್ರಿ ಮೂಡಿಸಿದೆ.

ತ್ರಿಬಲ್​ ರೈಡಿಂಗ್​, ದಿಲ್​ ಪಸಂದ್​ ಜೊತೆ ಜೊತೆಯಾಗಿ ಚಂದನವನದಲ್ಲಿ ಕಮಾಲ್​ ಮಾಡೋಕೆ ಬರ್ತಾ ಇದೆ ರಾಣ. ಸ್ಯಾಂಡಲ್​​ವುಡ್​ ಪಡ್ಡೆ ಹುಲಿ ಶ್ರೇಯಸ್​ ಮಂಜು ಹಾಗೂ ಗ್ಲಾಮರಸ್​ ಗೊಂಬೆ ರೀಷ್ಮಾ ನಾಣಯ್ಯ ಕಾಂಬಿನೇಷನ್​ನಲ್ಲಿ ರಾಣ ಕೂಡ ನಿರೀಕ್ಷೆ ಮೂಡಿಸಿದೆ. ಗಲ್ಲಿ ಬಾಯ್​, ಪ್ಯಾಟೆ ಗರ್ಲ್​ ಜೋಡಿಗೆ ಪ್ರೇಕ್ಷಕ ಸೈ ಅಂತಾನಾ ಅನ್ನೋದನ್ನು ಕಾದು ನೋಡ್ಬೇಕಿದೆ.

ಒಟ್ಟಾರೆ ಕನ್ನಡದ ಮೂರು ಚಿತ್ರಗಳು ಒಂದೇ ದಿನ ಸ್ಯಾಂಡಲ್​ವುಡ್​​ನಲ್ಲಿ ದಂಡಯಾತ್ರಗೆ ಸಜ್ಜಾಗಿವೆ. ಪ್ರೇಕ್ಷಕರ ಜೈಕಾರ ಹೇಗಿರುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.

ರಾಕೇಶ್​ ಅರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES