ಬೆಂಗಳೂರು : ಸಿಲಿಕಾನ್ ಮಳೆ ಬಂದಿದ್ದೇ ಬಂದಿದ್ದು, ಬಿಬಿಎಂಪಿಯ ಅಸಲಿ ಬಣ್ಣ ಬಯಲಾಗಿದೆ. ಪಾಲಿಕೆಯ ಕಳಪೆ ಕೆಲಸಗಳು ಒಂದೊಂದಾಗಿ ಹೊರ ಬೀಳ್ತಿದೆ. ಬಿಬಿಎಂಪಿ ಬೃಹತ್ ಭ್ರಷ್ಟಾಚಾರದ ಮಹಾನಗರ ಪಾಲಿಕೆ ಅಂತ ಪ್ರತಿಯೊಬ್ಬರೂ ಟೀಕಿಸ್ತಿದ್ದಾರೆ. ನಮಗಂತೂ ಬಿಬಿಎಂಪಿ ಸಹವಾಸ ಬೇಡ ಅಂತ ಔಟರ್ ರಿಂಗ್ ರೋಡ್ ಅಸೋಸಿಯೇಷನ್ ಕೈ ಮುಗಿದಿದ್ದಾರೆ. ಇದೀಗ ಪೀಣ್ಯ ಕೈಗಾರಿಕಾ ಸಂಘದವರು ನಮಗೂ ಬಿಬಿಎಂಪಿ ಬೇಡ ಅಂತಿದ್ದಾರೆ.
ಪೀಣ್ಯದಲ್ಲಿ ಬಿಬಿಎಂಪಿಯಿಂದ ಮೂಲಭೂತ ಸೌಕರ್ಯ ಕೊಟ್ಟಿಲ್ಲ ಅಂತ ಇಲ್ಲಿನ ಸ್ಥಿತಿ ಅದ್ವಾನ ಆಗಿದೆ. ಹೀಗಾಗಿ ಈಗ ನಮಗೆ ಬಿಬಿಎಂಪಿ ಬೇಡ ಎಂದು ಕೂಗು ಕೇಳಿ ಬರ್ತಿದೆ. ಸ್ಮಾರ್ಟ್‌ಸಿಟಿ ಖ್ಯಾತಿಯ ಹೆಸರನ್ನು ಹರಾಜಾದ ಬೆನ್ನಲ್ಲೇ, ORRACನಿಂದ ಪತ್ಯೇಕ ಮುನಿಸಿಪಲ್ ಬೇಕು ಅಂತ ಸರ್ಕಾರದ ಮೇಲೆ ಒತ್ತಡವನ್ನು ಹೇರುತ್ತಿದೆ. ಇದೀಗ ಔಟರ್ ರಿಂಗ್ ರೋಡ್ ಅಸೋಸಿಯೇಷನ್ ಜೊತೆಗೆ ಪೀಣ್ಯಾ ಭಾಗಕ್ಕೂ ಪ್ರತ್ಯೇಕ ಟೌನ್‌ಶಿಪ್‌ಗೆ ಆಗ್ರಹ ಮಾಡ್ತಿದೆ. ಈಗ ಬಗ್ಗೆ ಮತ್ತೊಮ್ಮೆ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಪೀಣ್ಯ ಕೈಗಾರಿಕಾ ಸಂಘ ಮತ್ತೊಮ್ಮೆ ಪತ್ರ ಬರೆಯುವ ಮೂಲಕ ಮನವಿ ಮಾಡಿದೆ.
ಈ ಹಿಂದೆ ಪ್ರತ್ಯೇಕ ಟೌನ್‌ಶಿಪ್‌ಗೆ ಮನವಿ ಮಾಡಲಾಗಿತ್ತು, ಆದ್ರೆ, ಟೌನ್‌ಶಿಪ್ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.ಇತ್ತ ರಸ್ತೆ, ಒಳಚರಂಡಿ, ಬೀದಿ ಸೇರಿದಂತೆ ಹಲವು ಸೌಕರ್ಯಗಳನ್ನು ನೀಡದೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಇದ್ರಿಂದ ಬೇಸತ್ತ ಕೈಗಾರಿಕಾ ಸಂಘದಿಂದ ನಮಗೆ ಮೂಲಭೂತ ಸೌಕರ್ಯ ಕೊಡಿ. ಇಲ್ಲವಾದ್ರೆ ಪ್ರತ್ಯೇಕ ಪ್ರಾಧಿಕಾರ ಕೊಡಿ ಎಂದು ಒತ್ತಡ ಹೇರುತ್ತಿದೆ. ಮೊನ್ನೆ ಸುರಿದ ಪೀಣ್ಯ ಇಂಡಸ್ಟ್ರಿಯಲ್ಲಿ ಮತ್ತಷ್ಟು ಅವಘಡ ಸಂಭವಿಸಿತ್ತು.ಹೀಗಾಗಿ ನಮ್ಮ ಕೈಗಾರಿಕಾ ಪ್ರದೇಶವನ್ನು ನಾವೇ ಅಭಿವೃದ್ಧಿಪಡಿಸುತ್ತೇವೆ..ಶೇ.70% ನಮ್ಮ ಕಡೆಯಿಂದಲೇ ಅಭಿವೃದ್ದಿ ಮಾಡಿಕೊಳ್ಳುತ್ತೇವೆ.ಉಳಿದ 30% ಅಭಿವೃದ್ಧಿ ಕಾರ್ಯ ಮಾತ್ರ ಬಿಬಿಎಂಪಿಗೆ ಬರಲಿದೆ.ಈ ಹಿನ್ನೆಲೆಯಲ್ಲಿ ಪೀಣ್ಯ ಕೈಗಾರಿಕಾ ಸಂಘ ಕೆಲ ಬೇಡಿಕೆಗಳನ್ನು ಸರ್ಕಾರಕ್ಕೆ ಇಟ್ಟಿದೆ.
ಪೀಣ್ಯ ಕೈಗಾರಿಕಾ ಸಂಘದ ಬೇಡಿಕೆಗಳು
ಪೀಣ್ಯ ಇಂಡಸ್ಟ್ರಿ ಭಾಗದಲ್ಲಿ ಗಡಿ ಸಮೀಕ್ಷೆ ಮಾಡಬೇಕು
ಆನ್‌ಲೈನ್ ಮುಖೇನ ಆಡಳಿತ ನಿರ್ವಹಣೆಯಾಗಬೇಕು
ನಮ್ಮ ಭಾಗದಲ್ಲಿ ಸರಿಯಾದ ರೀತಿ ತೆರಿಗೆ ಸಂಗ್ರಹ ಆಗಬೇಕು
ಕೈಗಾರಿಕಾ ತ್ಯಾಜ್ಯ ವಿಲೇವಾರಿ ಬಗ್ಗೆ ಗಮನ ಹರಿಸಬೇಕು
ಹೊಸ ತಂತ್ರಜ್ಞಾನ ಅಳವಡಿಕೆ ಮಾಡಬೇಕು
ಒಟ್ನಲ್ಲಿ ಪ್ರತ್ಯೇಕ ಮುನ್ಸಿಪಲ್ ಕೂಗಿನ ಬೆನ್ನಲ್ಲೇ, ಇದೀಗ ಬಿಬಿಎಂಪಿ ವಿರುದ್ಧ ಪೀಣ್ಯ ಕೈಗಾರಿಕಾ ಸಂಘ ತಿರುಗಿಬಿದ್ದಿದ್ದು, ಟೌನ್‌ಶಿಪ್‌ಗೆ ಆಗ್ರಹಿಸಿದ್ದು, ಸರ್ಕಾರ ಇದಕ್ಕೆ ಅನುಮತಿ ಕೊಡುತ್ತಾ ಅನ್ನೋದನ್ನು ಕಾದು ನೋಡ್ಬೇಕಿದೆ.
ಸ್ವಾತಿ ಪುಲಗಂಟಿ ಮೆಟ್ರೋ ಬ್ಯೂರೋ ಬೆಂಗಳೂರು