Monday, December 23, 2024

ಮಿಸ್ ಕರ್ನಾಟಕ ಪ್ರಶಸ್ತಿ ವಿಜೇತೆಯ ಬೇಬಿ ಬಂಪ್ ಫೋಟೋ ಶೂಟ್.!

ಶಿವಮೊಗ್ಗ; ಮಲೆನಾಡು ಜಿಲ್ಲೆ ಶಿವಮೊಗ್ಗದ ಬೆಡಗಿಯೊಬ್ಬರು ಸಕತ್ ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನು ಕಂಡ ಜನರು ಈ ಬೆಡಗಿಯ ಸಾಹಸಕ್ಕೆ ಶಹಬ್ಬಾಶ್ ಎಂದಿದ್ದಾರೆ.

ಹೌದು, ಶಿವಮೊಗ್ಗದ ಮಾಚೇನಹಳ್ಳಿಯ ರಕ್ಷಿತಾ ಎಂಬುವವರು, ತಮ್ಮ ಪತಿಯ ಸಹಕಾರದಿಂದ ಈ ಧೈರ್ಯದ ಸಾಹಸ ಮಾಡಿದ್ದು, ಬೇಬಿ ಬಂಪ್ ನಲ್ಲೇ ಐಷಾರಾಮಿ ಬೈಕ್ ಓಡಿಸಿ, ಡಿಫ್ರೆಂಟ್ ಫೋಸ್ ಕೊಟ್ಟಿದ್ದಾರೆ.

ಈ ಮೊದಲು ಮಿಸ್ ಕರ್ನಾಟಕ ಪ್ರಶಸ್ತಿ ತನ್ನ ಮುಡಿಗೇರಿಸಿಕೊಂಡಿದ್ದ ರಕ್ಷಿತಾ, ತಮ್ಮ ಗರ್ಭಿಣಿ ಅವಧಿಯಲ್ಲೂ ಏನಾದರೊಂದು ಡಿಫ್ರೆಂಟಾಗಿ ತೋರಿಕೊಳ್ಳಬೇಕೆಂದು ಈ ಸಾಹಸ ತೋರಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಈ ಚೆಲುವೆ, 7 ವರೆ ತಿಂಗಳ ಬೇಬಿ ಬಂಪ್ ನಲ್ಲಿ ಹಾರ್ಲೇ ಡೇವಿಡ್ಸನ್ ಬೈಕ್ ಚಲಾಯಿಸಿದ್ದು, ಡಿಫ್ರೆಂಟಾಗಿ ಫೋಸ್ ನೀಡಿ ಫೋಟೋ ಶೂಟ್ ಮಾಡಿಸಿದ್ದಾರೆ. ಮಾಮೂಲಿಯಾಗಿ, ಇತ್ತೀಚಿನ ದಿನಗಳಲ್ಲಿ ಬೇಬಿ ಬಂಪ್ ಫೋಟೋ ಶೂಟ್ ಟ್ರೆಂಡ್ ಆಗಿದ್ದು, ರಕ್ಷಿತಾ ಮಾತ್ರ ದುಬಾರಿ ಬೆಲೆಯ ಬೈಕ್ ಓಡಿಸಿ, ಸಾಹಸ ಮೆರೆದಿದ್ದಾರೆ.

ಈ ಮೊದಲು ಮಿಸ್ ಕರ್ನಾಟಕ ಬ್ಯೂಟಿ ಸ್ಪರ್ಧೆಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ರಕ್ಷಿತಾ, ಕೊರೋನಾ ಲಾಕ್ ಡೌನ್ ವೇಳೆ ಹಲವರಿಗೆ ಸಹಕಾರ ನೀಡಿದ್ದರು. ಅಗತ್ಯವುಳ್ಳವರಿಗೆ ಆಹಾರದ ಕಿಟ್ ನೀಡಿ ಮಾನವೀಯತೆ ಮೆರೆದಿದ್ದರು.

RELATED ARTICLES

Related Articles

TRENDING ARTICLES