ಬೆಂಗಳೂರು; ನಿರಂತರ ಮಳೆಯಾಗಿ ಬೆಂಗಳೂರಿನಲ್ಲಿ ರಸ್ತೆಗಳು ಸಮಸ್ಯೆ ಆಗಿದೆ. ಗುಂಡಿ ಮುಚ್ಚಲು ಹೀಗಾಗಲೇ ಬೆಂಗಳೂರಿಗೆ 6 ಸಾವಿರ ಕೋಟಿ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿನ ಗುಂಡಿಗಳ ಬಗ್ಗೆ ಮಾತನಾಡಿದ ಆರ್ ಅಶೋಕ್, ರಸ್ತೆ ಗುಂಡಿ ಸಮಸ್ಯೆ ಬಗ್ಗೆ ನಮಗೂ ಅರ್ಥ ಆಗಿದೆ. ರಸ್ತೆ ಗುಂಡಿ ವಿಚಾರವಾಗಿ ಕಮೀಷನರ್ ಜೊತೆ ನಾನು ಮಾತನಾಡಿದ್ದೇನೆ. ಸಿಎಂ ಕೂಡ ಕಮೀಷನರ್ ಜೊತೆ ಮಾತನಾಡಿದ್ದಾರೆ. ಬೆಂಗಳೂರಿಗೆ ಆರು ಸಾವಿರ ಕೋಟಿ ನೀಡಿದ್ದಾರೆ. ಆದ್ರೆ ಕೆಲಸ ಮಾಡಲು ಆಗ್ತಿಲ್ಲ. ನಿರಂತರ ಮಳೆಯಿಂದ ಸಮಸ್ಯೆ ಆಗುತ್ತಿದೆ ಎಂದರು.
ನಿರಂತರ ಮಳೆಯಿಂದ ಟಾರ್ ಹಾಕಿದ್ರೆ ನನೆದು ಕಿತ್ತು ಹೋಗ್ತಿದೆ. ಟಾರ್ ಹಾಕಲೂ ಆಗ್ತಿಲ್ಲ. ಟೆಂಪ್ರವರಿ ಹಾಕಿದ್ರೂ ಕಿತ್ತು ಬರ್ತದೆ. ವಾರ ಬಿಡುವು ಕೊಟ್ರೆ ಸಾಕು ಎಲ್ಲಾ ಕಡೆ ಟಾರ್ ಹಾಕುತ್ತೇವೆ. ಇದಕ್ಕಾಗಿ ಆರು ಸಾವಿರ ಕೋಟಿ ನೀಡಿದ್ದಾರೆ. ಸ್ಟಾರ್ಮ್ ವಾಟರ್‌ಗೂ ಕೂಡ ಐದು ಸಾವಿರ ಕೋಟಿ ರೂ ಕೊಡಲಾಗಿದೆ ಎಂದು ತಿಳಿಸಿದರು.
ಇನ್ನು ರಾಜ ಕಾಲುವೆ ಒತ್ತುವರಿ ತೆರವು ಕೂಡ ಮಾಡ್ತೀವಿ. ಬಡವ, ಶ್ರೀಮಂತ ಯಾರದ್ದೇ ಆದ್ರೂ ಬಿಡಲ್ಲ. ಯಾರೇ ಆದ್ರೂ ಕ್ರಮ ಕೈಗೊಳ್ಳಿ ಅಂತ ಕಮೀಷನರ್ ಗೆ ಸೂಚಿಸಿದ್ದೇನೆ ಎಂದು ಸಚಿವ ಆರ್ ಅಶೋಕ್ ಸ್ಪಷ್ಟನೆ ನೀಡಿದರು.